ಬೇಸಿಗೆ ರಜೆಗೆ ದುಬೈಗೆ ಹೋಗುತ್ತಿದ್ದೀರಾ ? ಈ 9 ನ್ನು ನೋಡದೆ ಬರಬೇಡಿ

Update: 2016-07-26 18:46 GMT

ದುಬೈಯ ಅಸ್ತಿತ್ವವನ್ನು ಹಿಡಿದಿಟ್ಟುಕೊಳ್ಳಬಹುದಾದ ಶಬ್ದವೆಂದರೆ ಚಿತ್ತಾಕರ್ಷಕ. ಆಡಂಬರ, ಹೊಳಪು ಮತ್ತು ದೈತ್ಯ ಕಟ್ಟಡಗಳು, ಅದ್ಭುತ ಶಾಪಿಂಗ್ ಮಾಲ್ ಗಳು ಸೇರಿ ಶ್ರೀಮಂತಿಕೆ ತುಂಬಿಕೊಂಡಿರುವ ಜೀವನಶೈಲಿ. ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ರಾಜಧಾನಿ ದುಬೈ ಪ್ರವಾಸಿಗರ ಸ್ವರ್ಗ. ಸಾಹಸ ಕ್ರೀಡೆ, ಊಟ, ಕೌಟುಂಬಿಕ ಮಜಾ ಮತ್ತು ಸುಸ್ತೇ ಆಗದ ಶಾಪಿಂಗ್ ಅವಕಾಶಗಳು ಇಲ್ಲಿವೆ. ಈ ನಗರಕ್ಕೆ ಪ್ರವಾಸ ಹೋಗುತ್ತೀರಾದರೆ 9 ಸ್ಥಳಗಳನ್ನು ನೋಡಲೇಬೇಕು.


ದುಬೈ ಗ್ರೀಕ್

ಪಾರಂಪರಿಕ ದುಬೈ ಆಧುನಿಕ ದುಬೈಯಾಗಿ ಪರಿವರ್ತನೆಯಾಗಿರುವುದು ಹೇಗೆ ಎಂದು ಇದು ತಿಳಿಸುತ್ತದೆ. ಬರ್ ದುಬೈ ಮತ್ತು ಡಿರಾ ನಡುವೆ ಗ್ರೀಕ್ ಹರಿಯುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಮೂಲ ಸ್ಥಾನವದು. ಇದು ದುಬೈಯ ಕೇಂದ್ರಭಾಗವನ್ನು ಹಾದು ಹೋಗುತ್ತದೆ ಮತ್ತು ಅದ್ಭುತ ಜಾಗ. ಪಾರಂಪರಿಕ ಅಬ್ರಾ ತೆಗೆದುಕೊಂಡು ಸುತ್ತಾಡುವುದು ಉತ್ತಮ.


ಬುರ್ಜ್ ಖಾಲಿಫಾ


ಸ್ಕೈಸ್ಕಾಪರ್ ಮತ್ತು ಗಗನಚುಂಬಿ ಕಟ್ಟಡಗಳನ್ನು ನಾವು ನೋಡುವ ದೃಷ್ಟಿಯನ್ನೇ ಬದಲಿಸಿದೆ ಇದು. ಬುರ್ಜ್ ಖಾಲಿಫಾ ಜಗತ್ತಿನಲ್ಲಿಯೇ ಮಾನವ ನಿರ್ಮಿತ ಅತೀ ದೊಡ್ಡ ಕಟ್ಟಡ. 828 ಮೀಟರ್ ಎತ್ತರವಿರುವ ಇದು ಡೌನ್‌ಟೌನ್ ದುಬೈನಲ್ಲಿದೆ.

ಪಾರಂಪರಿಕ ವಾಸ್ತುಶಿಲ್ಪ ಮತ್ತು ಆಧುನಿಕ ತಂತ್ರಜ್ಞಾನದ ಮಿಳಿತವಿದು. ಬುರ್ಜ್ ಖಾಲಿಫಾದಲ್ಲಿ ನಿವಾಸ ಖರೀದಿಸುವುದು ಸುಲಭವಲ್ಲ. ಆದರೆ ಅಲ್ಲಿ ಊಟ ಮಾಡುವ ಅನುಭವವನ್ನು ಮತ್ತು ಸ್ಥಳ ವೀಕ್ಷಣೆಗೆ ತೊಂದರೆಯಾಗದು.

ಕಯಾನ್ ಟವರ್


ಕಯಾನ್ ಟವರ್ ವಾಸ್ತುಶಿಲ್ಪ ವಿನ್ಯಾಸದ ಅದ್ಭುತ. ಅದು ಜಗತ್ತಿನ ಅತೀ ಎತ್ತರದ ತಿರುಚಿದ ಗೋಪುರ. ದುಬೈ ನೀರಿನ ದಂಡೆಯಲ್ಲಿ ನೆಲೆಗೊಂಡಿರುವ ಇಲ್ಲಿಂದ ದುಬೈ ಮರಿನಾ ಮತ್ತು ಅರೇಬಿಯನ್ ಗಲ್ಫ್‌ನ ದೃಶ್ಯಗಳನ್ನು ವೀಕ್ಷಿಸಬಹುದು.

ಸೋಖ್ ಮಾಡಿನಟ್

ಮಾಡಿನಟ್ ಜುಮೇರಾಹ್ ಅದ್ಭುತ ರೋಮ್ಯಾಂಟಿಕ್ ಜಾಗ. ಸೋಕ್ ಮಾಡಿನಟ್ ಪುರಾತನ ಮಾರುಕಟ್ಟೆಯ ಮರುಸೃಷ್ಟಿ. ಇಲ್ಲಿ ಶಾಪಿಂಗ್ ಅನುಭವ ಅತ್ಯುತ್ತಮ. ಸಾಂಸ್ಕೃತಿಕ ಅನುಭವವನ್ನೂ ಇದು ಕೊಡುತ್ತದೆ.

ಬುರ್ಜ್ ಅಲ್ ಅರಬ್

ನೌಕೆಯಾಕಾರದ ಬುರ್ಜ್ ಅಲ್ ಅರಬ್ ಜುಮೇರಾಹ್ ಆಡಂಬರಕ್ಕೆ ಮತ್ತೊಂದು ಹೆಸರು. ಈ ಹೊಟೇಲ್ ವಿಶ್ವದ ಮೂರನೇ ಎತ್ತರದ ಕಟ್ಟಡ. ಕೃತಕ ದ್ವೀಪದಲ್ಲಿ ಪ್ರತ್ಯೇಕವಾಗಿ ನಿಂತಿದೆ. ಖಾಸಗಿ ಸೇತುವೆ ಇದನ್ನು ಮುಖ್ಯಪ್ರದೇಶದ ಜೊತೆಗೆ ಸೇರಿಸಿದೆ. ಆದರೆ ಇದು ಸದಸ್ಯರಿಗೆ ಮಾತ್ರ ಸೀಮಿತವಾಗಿದೆ. ಹೊಟೇಲನ್ನು ಎಲ್ಲರೂ ಪ್ರವೇಶಿಸಲಾಗದು. ಅತೀ ದುಬಾರಿ ಆಹಾರ ಪದಾರ್ಥಗಳು ಇಲ್ಲಿವೆ.

ಮಿರಾಕಲ್ ಗಾರ್ಡನ್

ಅನಿರೀಕ್ಷಿತ ವೈಶಿಷ್ಟ್ಯವಾಗಿರುವ ಮಿರಾಕಲ್ ಗಾರ್ಡನ್ ಹೆಸರೇ ಸೂಚಿಸುವಂತೆ ಜಾದೂ ಮಾಡುವುದರಲ್ಲಿ ಕಡಿಮೆಯಿಲ್ಲ. ಹಲವು ಬಣ್ಣದ ಹೂಗಳ ಉದ್ಯಾನವನ ಸ್ವರ್ಗದ ಅನುಭವ ಕೊಡುತ್ತದೆ. ಇಲ್ಲಿ 45 ದಶಲಕ್ಷ ಹೂಗಳು 72,000 ಚದರ ಮೀಟರಲ್ಲಿದೆ. ಪಾರಂಪರಿಕ ಹೂಗಳ ಹಾಸು ಕೂಡ ಇದೆ. 3ಡಿ ಚಿಟ್ಟೆ ಉದ್ಯಾನವೂ ಇದೆ.

ಅಲ್ ಫಾಹಿದಿ ಕಲಾ ಗ್ಯಾಲರಿ

ಕಲೆಯನ್ನು ಇಷ್ಟಪಡುವವರಿಗೂ ದುಬೈನಲ್ಲಿ ಆಕರ್ಷಣೆಯಿದೆ. ಮಜ್ಲಿಸ್ ಗ್ಯಾಲರಿ 1989ರಿಂದ ನಗರದ ಪ್ರಮುಖ ಕೇಂದ್ರ. ಸ್ಥಳೀಯ ಮತ್ತು ರಾಷ್ಟ್ರೀಯ ಕಲೆಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ಕಲಾವಿದರ ಕಲೆಗಳ ಪ್ರದರ್ಶನವೂ ಆಗುತ್ತದೆ.

ದುಬೈ ಮಾಲ್


ವಿಶ್ವದ ಎರಡನೇ ಅತೀ ದೊಡ್ಡ ಶಾಪಿಂಗ್ ಮಾಲ್ ದುಬೈ ಮಾಲ್. ಇಲ್ಲಿ 1200 ಮಳಿಗೆಗಳಿವೆ. ಅತಿ ಹೈಎಂಡ್ ಉಡುಗೆಗಳ ಮಳಿಗೆಯಿಂದ ಹೈಸ್ಟ್ರೀಟ್ ಬ್ರಾಂಡ್‌ಗಳೂ ಇವೆ. ನಿಮ್ಮ ಪಾಕೆಟಿಗೆ ಕತ್ತರಿ ಬೀಳುವ ಜಾಗವಿದು. ಇಲ್ಲಿ ಮೋಜಿನ ಚಟುವಟಿಕೆಗಳಿಗೂ ಅವಕಾಶವಿದೆ. ಕುಟುಂಬದ ಜೊತೆಗೆ ತಿರುಗಾಡಲು ಉತ್ತಮ.

ದೊಡ್ಡ ಅಕ್ವೇರಿಯಂ ಇದೆ. ಪಾಮ್ ದ್ವೀಪಗಳು ಪಾಮ್ ಜುಮೇರಾ, ಪಾಮ್ ಜಬೇಲ್ ಅಲಿಯ ಮತ್ತು ಡಿಯರಾ ದ್ವೀಪಗಳು ಮೂರು ಯೋಜಿತ ಪಾಮ್ ದ್ವೀಪಗಳು. ಈ ಒಂದಕ್ಕೊಂದು ಸಂಪರ್ಕವಿರುವ ದ್ವೀಪಗಳು ಜೊತೆಯಾಗಿ ತಾಳೆಮರದ ಹಾಗೆ ಕಾಣುತ್ತವೆ. ಇದನ್ನು ಜಗತ್ತಿನ ಎಂಟನೇ ಅದ್ಭುತ ಎನ್ನಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News