ಈಗ ಬೈಕ್ ಸವಾರರಿಗೆ ಬಂದಿದೆ ವಿಶೇಷ ಸ್ಯಾಮ್ ಸಂಗ್ ಜೆ3 ಮೊಬೈಲ್
ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಸ್ಮಾರ್ಟ್‌ಫೋನ್ ಅನ್ನು ಎಸ್ ಬೈಕ್ ಮೋಡಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ ರು. 8990. ಇದನ್ನು ಸ್ನಾಪ್ ಡೀಲಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ ಫೋನ್ ಭಾರತದಲ್ಲಿ ದಶಲಕ್ಷ ಬೈಕ್ ಸವಾರರನ್ನು ಗುರಿ ಇಟ್ಟಿದೆ. ಚಾಲನೆಯಲ್ಲಿರುವಾಗ ಕರೆ ಸ್ವೀಕರಿಸಲು ಸಾಧ್ಯವಾಗದಂತಹ ಬೈಕ್ ಸವಾರರಿಗಾಗಿ ಇದನ್ನು ರಚಿಸಲಾಗಿದೆ. ಎನ್‌ಎಫ್‌ಸಿ ಟ್ಯಾಗ್ ಜೊತೆಗೆ ಇದು ಬರುತ್ತಿದೆ. ಫೋನ್ ಜೊತೆಗೆ ಜೋಡಿಸಿದಾಗ ಇದು ಬೈಕ್ ಸವಾರರಿಗೆ ಕರೆ ಸಹಾಯಕವಾಗಿ ಕೆಲಸ ಮಾಡುತ್ತದೆ.
ಈ ಲಕ್ಷಣವು ಸ್ವಿಚ್ ಆನ್ ಆಗಿದ್ದಾಗ ಕರೆ ಮಾಡುವವರಿಗೆ ಬೈಕ್ ಸವಾರ ವಾಹನ ಚಾಲನೆಯಲ್ಲಿರುವ ಕಾರಣ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸುತ್ತದೆ. ತುರ್ತು ಸಂದರ್ಭದಲ್ಲಿ ಕರೆ ಮುಂದುವರಿಸಲು ಕರೆ ಮಾಡಿದಾತ ಒಂದನ್ನು ಒತ್ತಬೇಕು. ಲಕ್ಷಣವು ಆನ್ ಆಗಿರುವವರೆಗೂ ಬೈಕ್ ಸವಾರ ಚಾಲನೆ ಮಾಡುತ್ತಿರುವಂತೆ ಕರೆ ಸ್ವೀಕರಿಸಲು ಸಾಧ್ಯವಿಲ್ಲ. ಚಲನೆಯ ಸೆನ್ಸರುಗಳು ಕರೆ ಸ್ವೀಕರಿಸುವುದನ್ನು ತಡೆಯುತ್ತವೆ.
ಭಾರತವನ್ನೇ ಗಮನದಲ್ಲಿಟ್ಟುಕೊಂಡು ಈ ನಿರ್ದಿಷ್ಟ ಲಕ್ಷಣವನ್ನು ಇಡಲಾಗಿದೆ. ಇದನ್ನು ಹೊಸ ಜೆ ಸರಣಿ ಮಾಡೆಲ್ ಗಳಿಗೆ ಮತ್ತು ಈಗಿನ ಸಾಧನಗಳಿಗೆ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಕೊಡಲಾಗುವುದು ಎಂದು ಸ್ಯಾಮ್ಸಂಗ್ ಇಂಡಿಯಾ ಇಲೆಕ್ಟ್ರಾನಿಕ್ಸ್ ಹಿರಿಯ ಉಪಾಧ್ಯಕ್ಷ ಆಸಿಂ ವಾರ್ಸಿ ಹೇಳಿದ್ದಾರೆ.
ಈ ಲಕ್ಷಣವು ಹಲವು ಇತರ ಅಭಿವೃದ್ಧಿ ಹೊಂದುತ್ತಿರುವ ಮಾರಕಟ್ಟೆಗಳಲ್ಲೂ ಬಳಸಬಹುದಾಗಿದೆ. ಸ್ಯಾಮ್ಸಂಗ್ ನಿರ್ವಾಹಕರು ಮತ್ತು ಬೇಡಿಕೆಯನ್ನು ಈಗಾಗಲೇ ಗುರುತಿಸಲಾಗಿದೆ.
ಗ್ಯಾಲಕ್ಸಿ ಜೆ3 ಅತೀ ಕಡಿಮೆ ವೆಚ್ಚದ ಎನ್‌ಎಫ್‌ಸಿ ಇರುವ ಸ್ಮಾರ್ಟ್‌ಫೋನ್ ಆಗಿದೆ. ಎಸ್ ಬೈಕ್ ಲಕ್ಷಣದ ಮೂಲಕ ಕಂಪನಿ ರು. 6,000ರಿಂದ ರೂ. 10,000ರ ಬೆಲೆ ವಿಭಾಗದಲ್ಲಿ ನಾಯಕತ್ವ ಗೆರೆಯನ್ನು ಏರಿಸುವ ಸಾಧ್ಯತೆಯಿದೆ.