ಮಕ್ಕಳಿಗಾಗಿ 10 ಉಪಯುಕ್ತ ಆಪ್ ಗಳು
ಸ್ಮಾರ್ಟ್ ಫೋನ್‌ಗಳು ಮತ್ತು ಟಾಬ್ಲೆಟ್ ಗಳು ನಮ್ಮ ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ. ದಿನ ಕಳೆದಂತೆ ಅದರ ಅಗತ್ಯ ಹೆಚ್ಚಾಗುತ್ತಾ ಹೋಗುತ್ತಿದೆ. ಹೀಗಾಗಿ ಹೆತ್ತವರು ಸೂಕ್ತ ಆಪ್ ಗಳನ್ನು ತಮ್ಮ ಮೊಬೈಲುಗಳಲ್ಲಿ ಹಾಕಿ ಯುವ ಮಕ್ಕಳಿಗೆ ದಾರಿದೀಪವಾಗಬೇಕು. ಏಕೆಂದರೆ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅಗ್ಗಕ್ಕೆ ಸಿಗುವ ಸಾಧನಗಳನ್ನು ಬಳಸಬೇಡಿ. ಅವುಗಳ ಡಿಸ್ಪಲೆಗಳು ಮಕ್ಕಳ ಕಣ್ಣಿಗೆ ಸಮಸ್ಯೆ ತರಬಹುದು. ಅಲ್ಲದೆ ಮಕ್ಕಳು ಈ ಸಾಧನಗಳನ್ನು ಬಳಸುವ ಸಮಯದಲ್ಲೂ ಮಿತಿಯಿರುವಂತೆ ನೋಡಿಕೊಳ್ಳಿ. ಯಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಮಕ್ಕಳ ಜೊತೆಗೆ ಹೇಗೆ ಆನಂದಿಸಬಹುದು ಎಂದು ಇಲ್ಲಿದೆ.
ಮಕ್ಕಳಿಗೆ ಯುಟ್ಯೂಬ್
‘YouTube Kids APK’ ಮಕ್ಕಳು ಯು ಟ್ಯೂಬಲ್ಲಿ ಪ್ರಬುದ್ಧರಿಗೆ ಇರಬಹುದಾದ ವಸ್ತು ವಿಷಯಗಳನ್ನು ಓದಲು ಅಥವಾ ನೋಡಲು ಪ್ರಯತ್ನಿಸುವುದು ಅಪಾಯಕಾರಿ.
ಇದಕ್ಕಾಗಿ ಯುಟ್ಯೂಬ್ ಕಿಡ್ಸ್ ಎಂದು ಗೂಗಲ್ ಹೊಸ ಆಪ್ ತಂದಿದೆ. ಇದರಲ್ಲಿ ಬಹುತೇಕ ವಸ್ತು ವಿಷಯ ಮಕ್ಕಳಿಗೆ ಸಂಬಂಧಿಸಿಯೇ ಇರುತ್ತದೆ. ದುರದೃಷ್ಟವಶಾತ್ ಇದನ್ನು ಅಮೆರಿಕಕ್ಕೆ ಮಾತ್ರ ಸೀಮಿತವಾಗಿಸಿದೆ. ಆದರೆ ನೀವು ಅಮೆರಿಕ ಆಪಲ್ ಸ್ಟೋರ್ ಖಾತೆಗೆ ಸೈನಪ್ ಮಾಡಿಕೊಳ್ಳುವ ಮೂಲಕ ಅದನ್ನು ಬಳಸಬಹುದು.
ಆಂಡ್ರಾಯ್ಡ್ ಬಳಸುತ್ತಿದ್ದರೆ ಎಂದು ಗೂಗಲ್ ಸರ್ಚ್ ಕೊಡಿ. ಆಪನ್ನು ಡೌನ್ಲೋಡ್ ಮಾಡಿ. ಅದನ್ನು ನಿಮ್ಮ ಡಿವೈಸಲ್ಲಿ ಇನ್ ಸ್ಟಾಲ್ ಮಾಡಿ. ಇದರ ವಸ್ತುವಿಷಯ ಅದ್ಭುತವಾಗಿರುವ ಕಾರಣ ಮಕ್ಕಳಿಗೆ ಉತ್ತಮ ಆಪ್ ಇದು. ಸ್ಥಳೀಯ ವಿಷಯಗಳೇ ಬೇಕೆಂದರೆ ಸಾಮಾನ್ಯ ಯುಟ್ಯೂಬ್ ಬಳಸಬೇಕು. ಆದರೆ ಮಕ್ಕಳು ವಯಸ್ಕ ವಿಡಿಯೋಗಳನ್ನು ನೋಡದಂತೆ ನಿಗಾ ವಹಿಸಬೇಕು.
ಟೋಕಾ ಪೆಟ್ ಡಾಕ್ಟರ್: ರೂ. 190
ಮಕ್ಕಳು ಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಅನುಕಂಪ ಬೆಳೆಸಿಕೊಳ್ಳುವಂತೆ ಅವರನ್ನು ಬೆಳೆಸಲು ಈ ಆಪ್ ಸಹಕಾರಿ. ಟೋಕಾ ಪೆಟ್ ಡಾಕ್ಟರ್ ಸಾಕು ಪ್ರಾಣಿಗಳಿಲ್ಲದ ಮಕ್ಕಳಿಗೆ ಉತ್ತಮ ಆಪ್. 15 ಪ್ರಾಣಿಗಳಿಗೆ ಪ್ರೀತಿ ತೋರಿಸಿ ಅವುಗಳನ್ನು ಬೆಳೆಸಿ ಮತ್ತೆ ಆರೋಗ್ಯವಂತರನ್ನಾಗಿಸುವ ವೈದ್ಯರ ಕೆಲಸವನ್ನು ಇಲ್ಲಿ ಮಕ್ಕಳು ಮಾಡುತ್ತಾರೆ. ಇವುಗಳಲ್ಲಿ ಸಿಗುವ ಸಣ್ಣಪುಟ್ಟ ವಿಸ್ಮಯಗಳು ಮಕ್ಕಳಿಗೆ ಖುಷಿ ಕೊಡಲಿದೆ.
ಬಬ್ಲ್ ಡ್ರಾ: ರೂ. 300
ಸಂಗೀತವನ್ನು ಚಿತ್ರಕಲೆ ಜೊತೆಗೂಡಿಸಿ ಅನುಭವದಲ್ಲಿ ತೋರಿಸುವ ಈ ಆಪ್ ಅದ್ಭುತವಾಗಿದೆ. ಸ್ಕ್ರೀನ್ ಮೇಲೆ ಬೆರಳತುದಿಯಿಂದ ವಿವಿಧ ಚಿತ್ರಗಳನ್ನು ಬಿಡಿಸಬಹುದು. ಈ ಪ್ರಕ್ರಿಯೆಯಲ್ಲಿ ಕಲೆಯ ಮೇಲೆ ಟಾಪ್ ಮಾಡಿ ಮತ್ತು ಸಂಗೀತಮಯ ಜಂಗಲ್ ಬೀಟ್ ಗಳು ಮತ್ತು ಮೋಜಿನ ಲ್ಯಾಟಿನೊ ಮ್ಯೂಸಿಕನ್ನು ಜೀವಂತವಾಗಿಸಬಹುದು. ಒಂದೆರಡು ವರ್ಷದ ಮಕ್ಕಳಿಗೆ ಮತ್ತು ವಯಸ್ಕರೂ ಈ ಸಂಗೀತ ಡ್ರಾಯಿಂಗಿಗೆ ಖುಷಿ ಪಡುತ್ತಾರೆ. ಮಕ್ಕಳ ಜೊತೆಗೆ ಆಡಲು ಇದು ಅತ್ಯುತ್ತಮ ಆಪ್.
ಪಿಂಕ್ ಫಾಂಗ್ ಮಕ್ಕಳ ಹಾಡುಗಳು ಮತ್ತು ಕತೆಗಳು. ಉಚಿತ
ಇದರಲ್ಲಿ ಜನಪ್ರಿಯ ಕತೆಗಳು ಮತ್ತು ಹಾಡುಗಳಿವೆ. ಅದ್ಭುತ ಕಲೆ ಮತ್ತು ವರ್ಣಮಯ ಪಾತ್ರಗಳಿವೆ. ಅತ್ಯುತ್ತಮ ವಿಷಯ ಎಂದರೆ ಗಾಯಕರು ಮತ್ತು ಕತೆ ಹೇಳುವವರು. ಈ ಪ್ಯಾಕನ್ನು ಖರೀದಿಸಲು ಸ್ವಲ್ಪ ಹಣ ಹಾಕುವ ಬಗ್ಗೆಯೂ ನೀವು ಯೋಚಿಸಬಹುದು. ತ್ರಾಸಬದ್ಧ ಹಾಡುಗಳು ಮತ್ತು ಮಕ್ಕಳಿಗೆ ಸೂಕ್ತ ಉಚ್ಛಾರ ಕಲಿಸುವುದಕ್ಕೆ ಇದು ಉತ್ತಮ.
ವಂಡರ್ ಬಾಕ್ಸ್. ಉಚಿತ
ಹೆಸರಿನಂತೆ ವಂಡರ್ ಬಾಕ್ಸ್ ಅಲ್ಲಿ ಅಚ್ಚರಿಗಳೇ ತುಂಬಿಕೊಂಡಿವೆ. ಇನ್ ಆಪ್ ಖರೀದಿಯಿಲ್ಲದೆ ಉಚಿತವಾಗಿ ಸಿಗುತ್ತವೆ. ಇದೊಂದು ಶಿಕ್ಷಣದ ವಿಷಯವಾಗಿದ್ದು, ಹೊಸ ವಿಷಯಗಳನ್ನು ಹುಡುಕುವುದೇ ಗುರಿಯಾಗಿದೆ. ವಿಜ್ಞಾನ, ವಿನ್ಯಾಸಮ ಭಾಷೆ, ಭೌಗೋಳಿಕ ಮತ್ತು ಕ್ರೀಡಾ ವಿಷಯಗಳನ್ನು ವಿಡಿಯೋ, ನಕ್ಷೆ ಮತ್ತು ವಸ್ತು ವಿಷಯಗಳನ್ನು ವೃತ್ತಿಪರ ತಜ್ಞರು ಕೊಟ್ಟಿದ್ದಾರೆ. ನೀವು ಮೋಜಿಗಾಗಿ ಡ್ರಾಯಿಂಗ್ ಮಾಡಬಹುದು.
ಎಬಿಸಿ ಮಾತು. ಉಚಿತ
ನೂರಾರು ಎಬಿಸಿ ಆಪ್ ಗಳಲ್ಲಿ ಟಾಕಿಂಗ್ ಎಬಿಸಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಅಕ್ಷರಗಳು ಮುದ್ದಿನ ಪ್ರಾಣಿಗಳಾಗಿ ಬದಲಾಗಿ ಪಾಠವನ್ನು ಕಲಿಸುತ್ತದೆ. ಅಕ್ಷರಮಾಲೆ ಕಲಿಯುವ ಮಕ್ಕಳಿಗೆ ಇದು ಅತ್ಯುತ್ತಮ.
ಡ್ಯುಲಿಂಗೊ. ಉಚಿತ
ಮಕ್ಕಳಿಗೆ ಇದು ವಿಭಿನ್ನ ಆಪ್ ಆಗಿರಬಹುದು. ಆದರೆ ಡ್ಯುಲಿಂಗೊ ಮಕ್ಕಳ ಜೊತೆಗೆ ಉತ್ತಮ ಸಮಯ ಕಳೆಯಲು ಭಾಷೆಯನ್ನು ಪರಿಪೂರ್ಣವಾಗಿ ಕಲಿಸುತ್ತದೆ. ಇದರಲ್ಲಿ ವರ್ಣಮಯ ಇಂಟರ್ಫೇಸ್ ಮತ್ತು ದೊಡ್ಡ ಬಟನುಗಳಿವೆ. ಇವು ವಿದೇಶಿ ಶಬ್ದ ಅಥವಾ ವಾಕ್ಯವನ್ನು ಸರಿಯಾಗಿ ಉಚ್ಛರಿಸಲು ನೆರವಾಗುತ್ತದೆ. ಮಕ್ಕಳು ಆ ಧ್ವನಿಯನ್ನು ಕೇಳಿ ಮರುಉಚ್ಛರಿಸುವುದು ಚೆನ್ನಾಗಿರುತ್ತದೆ.
ಪಾರ್ಸಲ್ ಆಫ್ ಕರೇಜ್: ರೂ. 190 (ಟ್ರಯಲ್ ಗಾಗಿ ಸೀಮಿತ ಅವಧಿಗೆ ಉಚಿತವಾಗಿ ಸಿಗುತ್ತದೆ)
ನಿಮ್ಮ ಮಕ್ಕಳಿಗೆ ಕತೆ ಪುಸ್ತಕಗಳನ್ನು ಓದಲು ಒತ್ತಡ ಹೇಳುವ ಬದಲಾಗಿ ಉನ್ನತ ಮಟ್ಟದ ಜ್ಞಾನ ಅವರಿಗೆ ಸಿಗುವಂತೆ ಮಾಡಿ. ಪಾರ್ಸೆಲ್ ಆಫ್ ಕರೇಜ್ ಅಂತಹ ಒಂದು ಪುಸ್ತಕ. ಈ ಪುಸ್ತಕವು ಮಾತುಕತೆಯ ಅನುಭವ ಮತ್ತು ಮಿನಿ ಆಟಗಳ ವಿನ್ಯಾಸದ ಜತೆಗೆ ಉತ್ತಮ ಕತೆ ಹೇಳುತ್ತದೆ.
ಗುಡ್‌ನೈಟ್ ಸಫಾರಿ+ ನೈಟೀ ನೈಟ್. ಉಚಿತ
ಈ ಎರಡು ಆಪ್ ಗಳು ರಾತ್ರಿ ಮಲಗುವಾಗ ಮಕ್ಕಳು ಬಳಸಬಹುದು. ಸಾಕು ಪ್ರಾಣಿಗಳನ್ನು ಮಲಗಿಸುವ ಬೋರಿಂಗ್ ಚಟುವಟಿಕೆ ಇದು. ಮಂಗಗಳನ್ನೂ ಮಲಗಿಸಬಹುದು. ಇದು ಮಕ್ಕಳಿಗೆ ನಿದ್ದೆ ತರಿಸುವ ಆಪ್.
ಶುಶರ್: ಭಿನ್ನ ಬೆಲೆ
ಮೇಲಿನ ಆಪ್ ಬಳಸಿ ಮಕ್ಕಳು ಮಲಗದಿದ್ದರೆ ಇದನ್ನು ಬಳಸಬಹುದು. ಇವುಗಳು ಹೆತ್ತವರ ಚೀಟ್ ಕೋಡ್ ತರಹ ವರ್ತಿಸುತ್ತದೆ. ಆಪ್ ಆನ್ ಮಾಡಿ ಶುಶರ್ ಬಟನ್ ಒತ್ತಿದರೆ ದೊಡ್ಡ ಝಡ್‌ಗಳು ಉರುಳುತ್ತವೆ. ಇದಲ್ಲದೆ ಹಲವು ಲಾಲಿ ಹಾಡುವ ಆಪ್ ಗಳೂ ಇವೆ. ನಿಮಗೆ ಸೂಕ್ತ ಶುಶ್ ಆಪ್ ಆರಿಸಿಕೊಳ್ಳಿ.