24 ಗಂಟೆಗಳಲ್ಲಿ 1,15,000 ಬುಕ್ಕಿಂಗ್ ಪಡೆದ ಇಲೆಕ್ಟ್ರಿಕ್ ಕಾರು ಇದು !

Update: 2016-04-02 08:47 GMT

ನವದೆಹಲಿ, ಎ.2: ಹೊಸ ಅಗ್ಗದ ಇಲೆಕ್ಟ್ರಿಕ್ ಕಾರ್ ಮಾಡೆಲ್ 3ಯನ್ನು ಟೆಸ್ಲಾ ತಂದಿದೆ. ಕಳೆದ 24 ಗಂಟೆಗಳಲ್ಲಿ 1,15,000 ಆರ್ಡರ್ ಗಳನ್ನು ಟೆಸ್ಲಾ ಪಡೆದಿದೆ. ಕಳೆದ ವರ್ಷ ಅದು ಉತ್ಪಾದಿಸಿದ ಒಟ್ಟು ಕಾರುಗಳ ಮೂರುಪಟ್ಟು ಇದು.


ಕಂಪನಿ ಭಾರತದಲ್ಲೂ ಕಾರು ಬಿಡುಗಡೆ ಮಾಡಲು ಬಯಸಿದೆ. ಟೆಸ್ಲಾ ಮೋಟಾರ್ಸ್‌ ಸಿಇಇ ಇಲಾನ್ ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿ ಮಾಡೆಲ್ 3 ಪ್ರಿ ಆರ್ಡರ್ ಪುಟಕ್ಕೆ ಕಂಪನಿಯು ಭಾರತ ಸೇರಿದಂತೆ ಹಲವು ದೇಶಗಳನ್ನು ಸೇರಿಸಿದೆ ಎಂದು ಹೇಳಿದ್ದಾರೆ.

ಮಾಡೆಲ್ 3 ಆರ್ಡರ್ ಪುಟಕ್ಕೆ ಇಂದು ರಾತ್ರಿ ಇನ್ನೂ ಹಲವು ದೇಶಗಳನ್ನು ಸೇರಿಸುತ್ತಿದ್ದೇವೆ. ವಿವರಗಳಿಗೆ ಪರೀಕ್ಷಿಸಿ. ಆದರೆ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯ, ನ್ಯೂಜಿಲ್ಯಾಂಡ್, ಸಿಂಗಾಪುರ ಮತ್ತು ಐರ್ಲೆಂಡ್ ಕೂಡ ಸೇರಲಿವೆ ಎಂದು ಮಸ್ಕ್ ಟ್ವೀಟಲ್ಲಿ ಹೇಳಿದ್ದಾರೆ.

ಮುಂದಿನ ವರ್ಷದವರೆಗೂ ಹೊಸ ಕಾರು ಸಿಗದೆ ಇದ್ದರೂ ಆರ್ಡರುಗಳು ರಾಶಿ ಬೀಳುತ್ತಿವೆ ಎನ್ನಲಾಗಿದೆ.

ಮಾಡೆಲ್ 3 ಮೂಲ ಬೆಲೆ 35,000 ಡಾಲರ್‌ಗಳು. ಈಗ ಅದು ಮಾರುತ್ತಿರುವ ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್‌ನ 75000 ಡಾಲರಿಗೆ ಹೋಲಿಸಿದರೆ ಅರ್ಧ ಬೆಲೆ. ಮಾಡೆಲ್ 3 ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ.

ಮಾಡೆಲ್ 3 ಬಿಡುಗಡೆಯಾಗುತ್ತಿರುವ ಸುದ್ದಿಗೇ ಟೆಸ್ಲಾ ಷೇರುಗಳು ಇತ್ತೀಚೆಗೆ ಮೇಲೇರಿದ್ದವು. ಮಾಡೆಲ್ 3 ದುಬಾರಿ ಮತ್ತು ಇಲೆಕ್ಟ್ರಿಕ್ ಕಾರುಗಳು ಮತ್ತು ಆಡಿ ಎ4 ಹಾಗೂ ಬಿಎಂಡಬ್ಲ್ಯು 3 ಸೀರೀಸ್ ಗ್ಯಾಸೋಲಿನ್ ಇಂಧನ ಮಾಡೆಲ್ ಗಳ ಪಟ್ಟಿಗೆ ಸೇರಲಿದೆ. ಶಾವರ್ಲೆಟ್ ಬೋಲ್ಟ್ ಇವಿ ಮತ್ತು ಜನರಲ್ ಮೋಟಾರ್ಸ್‌ ಕಂಪನಿಯ ಇಲೆಕ್ಟ್ರಿಕ್ ಕಾರುಗಳಿಗೂ ಸ್ಪರ್ಧೆ ನೀಡಲಿವೆ.


ಮಾಸ್ ಮಾರುಕಟ್ಟೆ ಮತ್ತು ಅಗ್ಗದ ಕಾರು ಎನ್ನುವುದು ತಮ್ಮ ಗುರಿ ಎಂದು ಮಸ್ಕ್ ಹೇಳಿದ್ದಾರೆ. ಮಾಡೆಲ್ 3 ಮೂಲಕ ಟೆಸ್ಲಾ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮೂಹಿಕ ಕಾರುಗಳ ಉತ್ಪಾದನೆಗೆ ನಿರ್ಧರಿಸಿದೆ.


2020 ಒಳಗೆ 5 ಲಕ್ಷ ಕಾರುಗಳನ್ನು ತಯಾರಿಸಲು ಟೆಸ್ಲಾ ಉದ್ದೇಶಿಸಿದೆ. ಕಳೆದ ವರ್ಷ ಅದು 50,000 ಕಾರುಗಳನ್ನು ತಯಾರಿಸಿದೆ. ಮಾಡೆಲ್ 3 ವಿನ್ಯಾಸವು 215 ಮೈಲುಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಇದರಲ್ಲಿ ಐವರನ್ನು ಹಿತಕರವಾಗಿ ಕರೆದೊಯ್ಯಬಹುದು. ಅಲ್ಲದೆ ಬ್ಯಾಟರಿಯನ್ನು ಬೇಗನೇ ಚಾರ್ಜ್ ಮಾಡಬಹುದು ಮತ್ತು ಟೆಸ್ಲಾ ಅಟೋಪೈಲಟ್ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆಯನ್ನೂ ಹೊಂದಿದೆ.


ವಿಶೇಷ ಸುರಕ್ಷಾ ಲಕ್ಷಣಗಳೂ ಹೆಚ್ಚು ಅಗ್ಗದಲ್ಲಿವೆ ಎನ್ನಲಾಗಿದೆ. ನಿಮಗೆ ಯಾವ ಆಯ್ಕೆಗಳಿಲ್ಲದಿದ್ದರೂ ಇದು ಉತ್ತಮ ಕಾರು ಎಂದು ಮಸ್ಕ್ ಹೇಳಿದ್ದಾರೆ.
 Edmunds.com ಆಟೊಮೊಟಿವ್ ಉದ್ಯಮಕ್ಕೆ ಇದು ಮೊದಲಿನದು. ವರ್ಷದವರೆಗೆ ಕೈಗೆ ಸಿಗದ ಕಾರಿಗೆ ಆರ್ಡರ್ ಕೊಟ್ಟು ಜನರು ಕಾಯಲು ಸಿದ್ಧರಿದ್ದಾರೆ. ಸ್ಟಾರ್ ವಾರ್ ಸಿನಿಮಾಗಳು ಅಥವಾ ಹೊಸ ಐ ಫೋನ್ ಬರುವಾಗ ಆಗುವ ಉತ್ಸಾಹ ಮಾರುಕಟ್ಟೆಯಲ್ಲಿ ಕಂಡಿದೆ.

ಇದು ಕೇವಲ ಸಿಲಿಕಾನ್ ವ್ಯಾಲಿ ಅಥವಾ ಲಾಸ್ ಏಂಜಲೀಸ್ ಗೆ ಸೀಮಿತವಾಗಿಲ್ಲ. ದೇಶದಾದ್ಯಂತ ಉತ್ಸಾಹವಿದೆ. ಟೆಸ್ಲಾ ಮುಖ್ಯವಾಹಿನಿ ಕಾರು ಖರೀದಿದಾರರ ಆಕರ್ಷಣೆ ಗಳಿಸಲು ಇದು ಉತ್ತಮ ಅವಕಾಶ ಎಂದು ಆಟೊಮೊಟಿವ್ ವೆಬ್ ತಾಣ ವಿಶ್ಲೇಷಕಿ ಜೆಸ್ಸಿಕಾ ಕಾಲ್ಡ್ ವೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News