ಇನ್ನು ಬರಲಿದೆ ಚಿಕ್ಕ ಬೊಲೆರೊ!

Update: 2016-04-03 12:05 GMT

ಮುಂಬೈ: ದೊಡ್ಡ ಅಟೊಮೊಬೈಲುಗಳನ್ನು ನಿರುತ್ಸಾಹಗೊಳಿಸುವ ಹೊಸ ನಿಯಂತ್ರಣಗಳನ್ನು ನಿಭಾಯಿಸಲು ರಾಷ್ಟ್ರದ ಟಾಪ್ ಸುವ್ ತಯಾರಕ ಮಹೀಂದ್ರ & ಮಹೀಂದ್ರ ಸಣ್ಣ, ಹೆಚ್ಚು ಕಾಂಪಾಕ್ಟ್ ವಾಹನಗಳನ್ನು ಕೊಡಲು ಸದ್ದಿಲ್ಲದೆ ಕೆಲಸ ಮಾಡುತ್ತಿದೆ. 2 ಲೀಟರುಗಳಿಗೆ ಮೀರಿದ ಇಂಜಿನ್ ಗಳಿರುವ ಡೀಸಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸುವ ಸುಪ್ರೀಂ ಕೋರ್ಟ್ ನಿರ್ಣಯದ ವಾರದೊಳಗೆ ಟ್ರಿಮ್ ಆಗಿರುವ ಇಂಜಿನ್ ಇರುವ ಸ್ಕಾರ್ಪಿಯೋ ಮತ್ತು ಕ್ಸುವ್ 500 ಬಿಡುಗಡೆ ಮಾಡಿ ಉದ್ಯಮಕ್ಕೆ ಬೆರಗು ಮೂಡಿಸಿದ ಸಂಸ್ಥೆ ಮಹೀಂದ್ರಾ, ಈಗ ತನ್ನ ಬೊಲೆರೊಗೆ ಹೊಸರೂಪ ಕೊಡುತ್ತಿದೆ. ದೊಡ್ಡ ಗಾತ್ರದ ಸುವ್ ಗಳ ಮೇಲೆ ಹೇರಲಾಗಿರುವ ತೆರಿಗೆ ಗ್ರಾಮೀಣ ಬಳಕೆಯ ಮೇಲೆ ಪರಿಣಾಮ ಬೀರದಿರಲಿ ಎಂದು ಸಂಸ್ಥೆ ಈ ಹಾದಿ ಹಿಡಿದಿದೆ. 4 ಮೀಟರುಗಳಿಗೆ ಕಡಿಮೆ ವಿಸ್ತಾರವಿರುವ ಮತ್ತು 1.5 ಲೀಟರ್ ಇಂಜಿನ್ ಇರುವ ಹೊಸ ಬೊಲೆರೊವನ್ನು ಅದು ಅಭಿವೃದ್ಧಿಪಡಿಸುತ್ತದೆ. ಈ ನಡೆಯಿಂದ ಈಗಿನ ಮಾಡೆಲಿಗಿಂತ ಕಡಿಮೆ ತೆರಿಗೆಗಳನ್ನು ಪಡೆಯಲಿದೆ. ಅಂದರೆ 4.17 ಮೀಟರ್ ಉದ್ದ ಮತ್ತು 2.5 ಲೀಟರ್ ಇಂಜಿನ್ ಹೊಂದಿರಲಿದೆ. ಆಂತರಿಕವಾಗಿ ಯು108 ಎಂದು ಕೋಡ್ ನೇಮ್ ಪಡೆದಿರುವ ಹೊಸ ಬೊಲೆರೊ ಸಬ್ ಫೋರ್ ಮೀಟರ್ ಯುಟಿಲಿಟಿ ರೇಂಜನ್ನು ಎಂ&ಎಂನಲ್ಲಿ ನಾಲ್ಕು ರೇಂಜಲ್ಲಿದೆ. ಬೊಲೆರೊ, ಟುವ್ 300, ಕುವ್ 100 ಮತ್ತು ನುವೊ ಸ್ಪೋಟ್ಸ್ ಶೀಘ್ರವೇ ಬಿಡುಗಡೆಯಾಗಲಿದೆ.

ಅದನ್ನು 2016ರ ದ್ವಿತೀಯ ಅರ್ಧದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಮತ್ತು ಕಂಪನಿ 25,000 ಯುನಿಟುಗಳನ್ನು ವರ್ಷವೊಂದಕ್ಕೆ ತಯಾರಿಸಲು ಕೆಲಸ ಮಾಡುತ್ತಿದೆ. ಕುತೂಹಲದ ವಿಷಯವೆಂದರೆ ಹೊಸ ಬೊಲೆರೊ ಮಾರುಕಟ್ಟೆಗೆ ಬರುವ ಮೊದಲು ಬ್ರಾಂಡನ್ನು ಜೀವಂತವಾಗಿಡಲು ಬಂದ ಯು108 ಮಧ್ಯಂತರ ಕಾರ್ಯ ಯೋಜನೆಯಾಗಿದೆ. ಹೊಸ ಬೊಲೆರೊ 2018-19ರಲ್ಲಿ ಮಾರುಕಟ್ಟೆಗೆ ಬರಲಿದೆ. ಆದರೆ ಮಹೀಂದ್ರ ವಕ್ತಾರ ಕಂಪನಿಯ ಭವಿಷ್ಯದ ಯೋಜನೆ ಮತ್ತು ಉತ್ಪನ್ನಗಳ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ.

ಒಂದೂವರೆ ದಶಕದಿಂದ ಮಾರುಕಟ್ಟೆಯಲ್ಲಿ ಇರುವ ಹೊರತಾಗಿಯೂ ಬೊಲೆರೊ ಮಾಸಿಕ 7000 ಯುನಿಟುಗಳಷ್ಟು ಮಾರಾಟವಾಗುತ್ತದೆ. ಎಂ&ಎಂನ ಮಾಸಿಕ ಮಾರಾಟ ಗಾತ್ರದಲ್ಲಿ ಶೇ 30ರಷ್ಟು ಬೊಲೆರೊ ಹೊಂದಿದೆ. ಹೀಗಾಗಿ ಬ್ರಾಂಡನ್ನು ಜೀವಂತವಾಗಿಡುವ ಅಗತ್ಯವನ್ನು ಕಂಪನಿ ಗುರುತಿಸಿದೆ. ಈ ಹೊಸ ಪ್ರಯತ್ನದ ಮೂಲಕ ಮಹೀಂದ್ರ ತನ್ನ ಆವೇಗವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಕಂಪನಿಯು ಈಗಿನ ವೇದಿಕೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರ ಅಪ್‌ಗ್ರೇಡ್ ಮತ್ತು ಫೇಸ್ ಲಿಫ್ಟ್ ಅಗತ್ಯವಿರುವುದನ್ನು ಕಂಡುಕೊಂಡಿದೆ. ಮುಖ್ಯವಾಗಿ ಮಾರುತಿ ಸುಜುಕಿ ಮತ್ತು ಹ್ಯೂಂಡೈ ಮೋಟಾರ್ ನೀಡುವ ಸ್ಪರ್ಧೆಯ ನಡುವೆ ಬ್ರಾಂಡ್ ಉಳಿಸಲು ಹೊಸ ಯೋಜನೆಗಳನ್ನು ತರಲಾಗಿದೆ ಎಂದು ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ಬಲ್ಲ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಯು108 ಹೊರತುಪಡಿಸಿ ಮಹೀಂದ್ರ ಟುವ್ 300ನ 7 ಸೀಟುಗಳ ವಾಹನವನ್ನು ತರುತ್ತಿದೆ. ಯು302 ರನ್ನಲಾಗಿರುವ ಇದು ಹೊಸ ಉತ್ಪನ್ನಗಳು ಬರುವ ಮೊದಲು ಜನರ ನಡುವೆ ಚಾಲ್ತಿಯಲ್ಲಿರುವ ಉದ್ದೇಶದಿಂದ ತರಲಾಗುತ್ತಿದೆ. ಯು321 ಕೂಡ ಬರಲಿದ್ದು, ಟಯೋಟ ಇನೋವ ಜೊತೆಗೆ ಸ್ಪರ್ಧಿಸಲಿದೆ. ಯು215 ಅಥವಾ ಹೊಸ ಕ್ವಾಂಡೋ 24ರಿಂದ 36 ತಿಂಗಳುಗಳಲ್ಲಿ ಅಸ್ತಿತ್ವದಲ್ಲಿರಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News