ಈ ದೇಶದಲ್ಲಿ ವಿದ್ಯುತ್ ಇರುವವನೂ ವಿಲಾಸಿ !
ಮೊಗದಿಶು (ಸೊಮಾಲಿಯಾ): ಬಿರುಬೇಸಗೆಯ ಮಧ್ಯಾಹ್ನ 12.45ರ ಸಮಯ. ನಗರದ ಮಸೀದಿಗಳ ಮಿನಾರ್‌ಗಳಲ್ಲಿ ನಮಾಝ್ ಕರೆ ಅನುರಣಿಸುವ ಹೊತ್ತು. ಮದೀನಾ ಪಕ್ಕದ ಈ ಪಟ್ಟಣದಲ್ಲಿ ಕೆಂಪು ಹಿಜಾಬ್ ಸುತ್ತಿಕೊಂಡ ಮಹಿಳೆ ಇಬ್ಬರು ಹೆಣ್ಣು ಮಕ್ಕಳ ಜತೆ ಮನೆ ಮುಂದಿನ ಮರದ ನೆರಳಲ್ಲಿ ಕೂತಿದ್ದಾಳೆ. ಏಕೆ ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ ಅಲ್ಲವೇ?
ಏಕೆಂದರೆ ಮನೆಯ ಹಾಲ್‌ನಲ್ಲಿ ಇರುವ ಫ್ಯಾನ್ ಬಳಸುವುದು ಅಸಾಧ್ಯ ಬಿಸಿಯಿಂದ ಹಾಗೂ ತೇವಾಂಶ ಕೊರತೆಯಾಗುವ ಸಂದರ್ಭದಲ್ಲಿ ಮಾತ್ರ. ಎಲೆಕ್ಟ್ರಿಕ್ ಸಾಕೆಟ್‌ನಿಂದ ನೇತಾಡುತ್ತಿದೆ. ಮಧ್ಯಾಹ್ನದ ಬಿಸಿಲಿನ ಝಳಕ್ಕೆ ತತ್ತರಿಸಿದರೂ ಮಕ್ಕಳು ನಿದ್ದೆ ಮಾಡುವಂತಿಲ್ಲ. ದಾಹಕ್ಕೆ ತಂಪು ನೀರು ಕುಡಿಸುವಂತೆಯೂ ಇಲ್ಲ. ಏಕೆಂದರೆ ಫ್ರಿಡ್ಜ್ ಅಥವಾ ಫ್ಯಾನ್ ಬಳಸಿದರೆ, ದೊಡ್ಡಮೊತ್ತದ ವಿದ್ಯುತ್ ಬಿಲ್ ಬರುತ್ತದೆ ಎಂದು ಆ ಮುಹುಬೊ ಅಬ್ಶಿರ್ ಫರಾಹ್ ವಿವರಿಸುತ್ತಾರೆ.
ಹೌದು ಇಲ್ಲಿ ವಿದ್ಯುತ್, ವಿಲಾಸಿ ವಸ್ತು
ಒಂದು ಕೋಟಿ ಜನಸಂಖ್ಯೆ ಇರುವ ಈ ಪೂರ್ವ ಆಫ್ರಿಕಾ ದೇಶದಲ್ಲಿ ವಿದ್ಯುತ್ ಅತ್ಯಂತ ದುಬಾರಿ. ಸೋಮಾಲಿಯಾದ ರಾಜಧಾನಿಯಲ್ಲಿ ಒಂದು ಗಂಟೆಗೆ ಒಂದು ಕಿಲೋವ್ಯಾಟ್ ವಿದ್ಯುತ್ ಬಳಸಿದರೆ, ಒಂದು ಡಾಲರ್ ವೆಚ್ಚವಾಗುತ್ತದೆ. ಇಲ್ಲಿ ವಿದ್ಯುತ್ ನೆರೆಯ ಕೀನ್ಯಾಕ್ಕಿಂತ ಐದು ಪಟ್ಟು ಹಾಗೂ ಅಮೆರಿಕಕ್ಕಿಂತ ಹತ್ತು ದುಬಾರಿ.
ಸೊಮಾಲಿಯಾ ಕೇಂದ್ರ ಸರ್ಕಾರ 1991ರಲ್ಲಿ ಪತನವಾಗುವುದರೊಂದಿಗೆ, ವಿದ್ಯುತ್ ವಲಯ ಕೂಡಾ ಕುಸಿದಿದೆ. ಖಾಸಗಿ ಮಾಲೀಕತ್ವದ ಡೀಸೆಲ್ ಜನರೇಟರ್‌ಗಳನ್ನೇ ಜನ ಅನಿವಾರ್ಯವಾಗಿ ಅವಲಂಬಿಸಬೇಕು. ಹಲವು ಮನೆಗಳು ಇಂದಿಗೂ ಕತ್ತಲು. ನಗರದಲ್ಲಿ ಏಳು ಖಾಸಗಿ ವಿದ್ಯುತ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.
ಬಡತನ, ನಿರುದ್ಯೋಗ ತಾಂಡವವಾಡುತ್ತಿರುವ ದೇಶದಲ್ಲಿ ವಿದ್ಯುತ್ ಎಷ್ಟು ವಿಲಾಸಿ ವಸ್ತು ಎಂದರೆ, ವಿದೇಶಗಳಲ್ಲಿ ಉದ್ಯೋಗದಲ್ಲಿರುವವರು ತಮ್ಮ ಕುಟುಂಬಕ್ಕೆ ಹಣ ಕಳುಹಿಸಿದರಷ್ಟೇ ಜನ ವಿದ್ಯುತ್ ಬಳಸಬಹುದು ಎಂಬ ಸ್ಥಿತಿ. ಫರಾಹ್ ಅವರ ಮನೆಗೆ ತಿಂಗಳ ವಿದ್ಯುತ್ ಬಿಲ್ 40 ಡಾಲರ್‌ವರೆಗೆ ಬರುತ್ತದೆ. ಇಲ್ಲಿ ವಿದ್ಯುತ್ ದುಬಾರಿ ಎಂಬ ಕಾರಣಕ್ಕಾಗಿ ಉದ್ಯಮಗಳೂ ಬೆಳೆಯುತ್ತಿಲ್ಲ.