ನೂತನ Datsun-redi-go : ಇಲ್ಲಿವೆ ವಿವರಗಳು

Update: 2016-04-04 14:17 GMT

 ಡಾಟ್ಸನ್ ರೆಡಿ ಗೋ, ಏಪ್ರಿಲ್ 14ರಂದು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸಣ್ಣ ಕಾರಿನ ಪರಿಕಲ್ಪನೆ 2014ರಲ್ಲಿ ಅನಾವರಣಗೊಂಡಿತ್ತು. ಆಟೊ ಎಕ್ಸ್‌ಪೋದಲ್ಲಿ ರೆನಾಲ್ಟ್ ಕ್ವಿಡ್ ವಲಯದ ಈ ಪ್ರವೇಶ ಹಂತದ ಕಾರು ಪ್ರಮುಖ ಆಕರ್ಷಣೆಯಾಗಲಿದೆ. ನಂಬಲಸಾಧ್ಯ ಕಡಿಮೆ ಬೆಲೆಯೊಂದಿಗೆ ಈ ಪುಟ್ಟ ಕಾರನ್ನು ದೇಶಕ್ಕೆ ಪರಿಚಯಿಸುವ ನಿರೀಕ್ಷೆ ಇದೆ.

ಈ ಪುಟ್ಟ ಅದ್ಭುತದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ..


1. ರೆನಾಲ್ಟ್- ನಿಸ್ಸಾನ್‌ನ ಸಿಎಂಎಫ್- ಎ ಪ್ಲಾಟ್‌ಫಾರ್ಮ್ ಆಧರಿತವಾಗಿರುತ್ತದೆ. ರೆನಾಲ್ಟ್ ಕ್ವಿಡ್‌ನ ಸುಧಾರಿತ ರೂಪ. ತಮಿಳುನಾಡಿನ ಒರಗಡಮ್‌ನಲ್ಲಿ ಉತ್ಪಾದನೆಯಾಗುತ್ತದೆ.

2. ಡ್ಯಾಟ್ಸನ್ ರೆಡಿ-ಗೋ ಸ್ಪೋರ್ಟ್ಸ್, ಸಿಲೊಟ್ಟೆಯ ಶೈಲಿಯನ್ನು ಅನುಕರಿಸುತ್ತದೆ.


3. ಈ ಸ್ಪೋರ್ಟ್ಸ್‌ ಕಾರು ಎತ್ತರದ ನಿಲುವನ್ನು ಹೊಂದಿ, ಅರ್ಧವರ್ತುಲಾಕಾರವಾಗಿದೆ. ಹಿಂಭಾಗದ ಕಿಟಕಿ ಸ್ಕೃಇನ್ ಎತ್ತರದಲ್ಲಿದ್ದು, ಹಿಂಬದಿ ದೀಪಗಳು ಉದ್ದವಾಗಿವೆ.

4. ರೆನಾಲ್ಟ್ ಕ್ವಿಡ್‌ಗಿಂತಲೂ ಅಗ್ಗದ ಬೆಲೆ ಎನ್ನಲಾಗುತ್ತಿದೆ. ಅಂದರೆ ಟಚ್‌ಸ್ಟ್ರೀನ್ ಇನ್ಫೊಟೈನ್‌ಮೆಂಟ್ ವ್ಯವಸ್ಥೆ ಹಾಗೂ ಡಿಜಿಟಲ್ ಸಾಧನ ಗುಚ್ಛವನ್ನು ಹೊಂದಿರುವ ಸಾಧ್ಯತೆ ಇಲ್ಲ.


5. ಒಳವಿನ್ಯಾಸದ ಬಗ್ಗೆ ಜಪಾನ್ ಕಾರು ಉತ್ಪಾದಕ ಕಂಪನಿ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ. ರೆನಾಲ್ಟ್ ಕ್ವಿಡ್‌ನ 0.8 ಲೀಟರ್ ಪೆಟ್ರೋಲ್ ಇಂಜಿನ್ ಅಥವಾ 1.2 ಲೀಟರ್‌ನ ಎಂಜಿನ್ ಹೊಂದಿರುವ ಸಾಧ್ಯತೆ ಇದೆ.


6. ಐದು ವೇಗದ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಹೊಂದಿರುತ್ತದೆ.


7. ಇದರ ಪ್ರತಿಸ್ಪರ್ಧಿ ಎನ್ನಬಹುದಾದ ಕಾರುಗಳೆಂದರೆ ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ, ಆಲ್ಟೊ 800, ಹಾಗೂ ಹ್ಯುಂಡೈ ಇಯಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News