ಹೊಸ Microsoft Lumia 650 ಈಗ ಲಭ್ಯ - ಇಲ್ಲಿದೆ specifications
ಭಾರತದಲ್ಲಿ ಲ್ಯೂಮಿಯ 650 ಪರಿಚಯಿಸುವ ಮೂಲಕ ಮೈಕ್ರೋಸಾಫ್ಟ್ ತನ್ನ ಉತ್ಪನ್ನ ಶ್ರೇಣಿ ವಿಸ್ತರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಮಳಿಗೆಗಳಲ್ಲಿ ಶೀಘ್ರವೇ ಬರುತ್ತಿದೆ ಎಂಬ ಫಲಕ ನೇತಾಡುತ್ತಿದ್ದರೂ ಅಮೆಜಾನ್ ಇದರ ಬೆಲೆಯ ಟ್ಯಾಗ್ ಪ್ರಚಾರಪಡಿಸಿದೆ. 16,599 ರೂಪಾಯಿ ದರ.
ಕೆಲಸ ಹಾಗೂ ವೈಯಕ್ತಿಕ ಅಗತ್ಯತೆಗಳ ಪರಿಪೂರ್ಣ ಸಮತೋಲಿತ ಮೊಬೈಲ್ ಎಂದು ಕಂಪನಿ ಹೇಳಿಕೊಂಡಿದೆ.
ಲ್ಯೂಮಿಯ 650 ಮೊಬೈಲ್, ಐದು ಇಂಚಿನ ಎಎಂಓಎಲ್‌ಇಡಿ ಕ್ಲಿಯರ್ ಬ್ಲ್ಯಾಕ್ ಎಚ್‌ಡಿ ಡಿಸ್‌ಪ್ಲೇ ವ್ಯವಸ್ಥೆಯನ್ನು ಹೊಂದಿದೆ. 720 /1280 ಪಿಕ್ಸೆಲ್ ರೆಸಲ್ಯೂಷನ್. 1.3 ಜಿಎಚ್‌ಝೆಡ್‌ನ ಬ್ಯಾಟರಿ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರನ್ನು ಒಂದು ಜಿಬಿ ರ್ಯಾಮ್ ಜತೆ ಜೋಡಿಸಲಾಗಿದೆ. ಎ 17 ಜಿಪಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 200 ಜಿಬಿ ವರೆಗೂ ಹೆಚ್ಚಿಸಬಹುದು.
ನ್ಯಾನೊ ಸಿಮ್ ವ್ಯವಸ್ಥ ಹೊಂದಿದ್ದು, ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುತ್ತದೆ. ಎಂಟು ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್ ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. 2000 ಎಂಎಎಚ್ ಬ್ಯಾಟರಿ ಹೊಂದಿದ್ದು, 4ಜಿ, ಎಲ್‌ಇಟಿ, 3ಜಿ, ವೈಫೈ ಸಂಪರ್ಕ ಆಯ್ಕೆಯನ್ನು ಒಳಗೊಂಡಿದೆ.