ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

Update: 2016-04-06 05:57 GMT

ಬಹುದಿನಗಳ ನಿರೀಕ್ಷೆಯ ಟಾಟಾ ತಿಯಾಗೊ ಕೊನೆಗೂ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್ ಆಗಿದೆ. ಕಳೆದ ತಿಂಗಳ 10ರಂದು ಬುಕ್ಕಿಂಗ್ ಆರಂಭವಾಗಿದ್ದ ತಿಯಾಗೊ 2016ರ ಏಪ್ರಿಲ್ 6ರಂದು ಬುಧವಾರ ಮಾರುಕಟ್ಟೆಗೆ ಬರಲಿದೆ.


ಮಾರುತಿ ಸೆಲೆರಿಯೊ ಹಾಗೂ ಹ್ಯೂಂಡೈ 110 ಕಾರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಿಯಾಗೊ ಬೆಲೆ 3.5 ಲಕ್ಷದಿಂದ 5.5 ಲಕ್ಷದ ಮಧ್ಯೆ ಇರಲಿದೆ. ಸುಧಾರಿತ ಎಕ್ಸ್‌ಓ ಪ್ಲಾಟ್‌ಫಾರಂ ಆಧರಿತ ಈ ಕಾರು ಟಾಟಾದ ಪುಣೆ, ಇಟೆಲಿ ಹಾಗೂ ಬ್ರಿಟನ್ ಸ್ಟುಡಿಯೊ ಪರಿಕರಗಳಿಂದ ವಿನ್ಯಾಸಗೊಂಡಿದೆ. ಇತರ ಟಾಟಾ ವಾಹನಗಳಿಗಿಂತ ಭಿನ್ನವಾಗಿ ಹೆಚ್ಚು ಸ್ಪೋರ್ಟ್ಸ್ ಕಾರಿನಂತೆ ಆಕರ್ಷಕವಾಗಿದೆ. ಟಾಟಾದ ಆಲ್- ನ್ಯೂ ಇಂಪ್ಯಾಕ್ಟ್ ವಿನ್ಯಾಸ ತತ್ವಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿದೆ. ಕ್ಯಾಬಿನ್- ವಾಹನದ ಬಾಡಿ ಅನುಪಾತ ಪ್ರಮಾಣಾನುಸಾರವಾಗಿದ್ದು, ಈ ಶ್ರೇಣಿಯಲ್ಲಿ ಆಕರ್ಷಕ ಎನಿಸಿಕೊಂಡಿದೆ.


1.2 ಲೀಟರ್, 3 ಸಿಲಿಂಡರ್ ವಿಸಿಟಿಐ ರೆವಟ್ರಾನ್ ಪೆಟ್ರೋಲ್ ಹಾಗೂ ಹೊಸ 1.05 ಲೀಟರ್, 3 ಸಿಲಿಂಡರ್ ರೆವೊಟ್ರೊಕ್ ಡೀಸೆಲ್ ಪವರ್‌ಟ್ರೈನ್ ಆಯ್ಕೆಯ ಎಂಜಿನ್ ಹೊಂದಿದೆ. ಮೊದಲಿನದ್ದು 83.8 ಪಿಬಿಎಚ್ ಹಾಗೂ ಎರಡನೆಯದ್ದು 96.04 ಪಿಬಿಎಚ್ ಪವರ್ ನೀಡುತ್ತದೆ. ಮೊಟ್ಟಮೊದಲ ಬಾರಿಗೆ ಮಲ್ಟಿ ಡ್ರೈವ್ ಮಾದರಿಗಳನ್ನು ಪರಿಚಯಿಸುತ್ತಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಮುಂದಿನ ಹಂತಗಳಲ್ಲಿ ಎಎಂಟಿ ಗೇರ್‌ಬಾಕ್ಸ್ ಕೂಡಾ ಬರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ವಿನೂತನ ಎನಿಸುವ ಹಲವು ಸುರಕ್ಷಾ ಸಾಧನಗಳನ್ನೂ ಅಳವಡಿಸಲಾಗಿದೆ. ಹರ್ಮನ್‌ನ ಕನೆಕ್ಟ್ ನೆಕ್ಸ್ಟ್ ಇನ್‌ಫೊಟೈನ್‌ಮೆಂಟ್ ವ್ಯವಸ್ಥೆ, ಸ್ಟಿಯರಿಂಗ್ ಮೌಂಟೆಡ್ ನಿಯಂತ್ರಣ, ವೈಯಕ್ತಿಕ ಹಿಂಬದಿಯ ಹೆಡ್‌ರೆಸ್ಟ್, ಕ್ರೋಮ್ಡ್ ವಾತಾನುಕೂಲಿ ವ್ಯವಸ್ಥೆ, ವಿಂಗ್ ಮಿರರ್ ಟರ್ನ್ ಇಂಡಿಕೇಟರ್, 60:40 ಅನುಪಾತದಲ್ಲಿ ಪ್ರತ್ಯೇಕಿಸಬಹುದಾದ ಹಿಂಬದಿ ಆಸನ, ಎಲೆಕ್ಟ್ರಾನಿಕ್ ವ್ಯವಸ್ಥೆಯಡಿ ಹೊಂದಾಣಿಕೆ ಮಾಡಬಹುದಾದ ಓಆರ್‌ವಿಎಂ ನಂಥ ವ್ಯವಸ್ಥೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News