HP Spectre 13 ನೂತನ ಆಕರ್ಷಕ ಸ್ಲಿಮ್ Laptop ನ ಪರಿಚಯ
ವಿಂಡೊ ಆಧರಿತ, ಸ್ಲಿಮ್, ಶಕ್ತಿಶಾಲಿ, ಆಕರ್ಷಕ ಲ್ಯಾಪ್‌ಟಾಪ್ ಎದುರು ನೋಡುತ್ತಿರುವ ವೃತ್ತಿಪರರಿಗಾಗಿ ಎಚ್‌ಪಿ ಇದೀಗ ಹೈಎಂಡ್ ಸ್ಪೆಕ್ಟ್ರ್ 13 ಲ್ಯಾಪ್‌ಟಾಪ್ ಪರಿಚಯಿಸಿದೆ.
ಈ ಮೊದಲೇ ಆಪಲ್ ಮ್ಯಾಕ್‌ಬುಕ್ ಏರ್ ಹಾಗೂ ಡೆಲ್ ಎಕ್ಸ್‌ಪಿಎಸ್ 13 ಈ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಎಚ್‌ಪಿ ಇದೀಗ ಹೊಸ ಶ್ರೇಣಿ ಪರಿಚಯಿಸುತ್ತಿದೆ. ಇದರ ವೈಶಿಷ್ಠ್ಯಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ.
ಸ್ಪೆಕ್ಟ್ರ್ 13 ಇದೀಗ ವಿಶ್ವದ ಅತ್ಯಂತ ತೆಳ್ಳನೆಯ ಲ್ಯಾಪ್‌ಟಾಪ್ ಎಂಬ ಹೆಗ್ಗಳಿಕೆ ಹೊಂದಿದೆ. ಇದಕ್ಕಾಗಿ ಇಂಟೆಲ್ ಕೋರ್ ಎಂ ಪ್ರೊಸೆಸರ್ ಬದಲಾಗಿ ಕೋರ್ ಐ ಶ್ರೇಣಿಯನ್ನು ಅಳವಡಿಸಿದೆ.
ಮೊದಲ ನೋಟಕ್ಕೇ ಸೆಳೆಯುವ ವಿನ್ಯಾಸ. ಲ್ಯಾಪ್‌ನ ತಳಭಾಗ ಹಾಗೂ ಲಿಡ್ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಬಣ್ಣ ಸಂಯೋಜನೆ ಹಾಗೂ ವಿನ್ಯಾಸ ವಿಶಿಷ್ಟ.
ಇನ್ನೊಂದು ಪ್ರಮುಖ ಬದಲಾವಣೆ ಎಂದರೆ ಎಚ್‌ಪಿ ಲೋಗೊ ಸ್ವಲ್ಪಮಟ್ಟಿಗೆ ಬದಲಾದಂತೆ ಕಾಣುತ್ತದೆ.
ಎಚ್‌ಪಿ ಇದನ್ನು ಓಡುವ ಮನುಷ್ಯನ ದೃಷ್ಟಿಯಿಂದ ವಿನ್ಯಾಸಗೊಳಿಸಿದ್ದರಿಂದ ಮುಂದೆ ಬಾಗಿದಂತೆ ತೋರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕೀಬೋರ್ಡ್ ದೊಡ್ಡದಾಗಿದ್ದು, ಸಾಕಷ್ಟು ಸ್ಥಳಾವಕಾಶವಿದೆ. ತೀರಾ ತೆಳ್ಳಗಿರುವ ಕಾರಣ ಪ್ರಯಾಣಕ್ಕೆ ಹೇಳಿ ಮಾಡಿಸಿದ ಮಾದರಿ. ಕೀ ಹಾಗೂ ಟ್ರ್ಯಾಕ್‌ಪ್ಯಾಡ್ ಕೂಡಾ ಬಳಕೆ ಸ್ನೇಹಿಯಾಗಿವೆ.
ಮೂರು ಯುಎಸ್‌ಬಿ ಸಿ ಟೈಪ್ ಪೋರ್ಟ್‌ಗಳಿದ್ದು, ಎಥರ್‌ನೆಟ್, ವಿಜಿಎ ಅಥವಾ ಎಚ್‌ಡಿಎಂಐ ಬಳಸಲೂ ಅವಕಾಶವಿದೆ. ಒಂದು ಬದಿಯಲ್ಲಿ 3.5 ಎಂ.ಎಂ.ಹೆಡ್‌ಫೋನ್ ಸಾಕೆಟ್ ಇದೆ.
ಒಂಬತ್ತು ಗಂಟೆಗಳ ಬ್ಯಾಟರಿ ಬ್ಯಾಕಪ್, ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, ಇಂಟೆಲ್ ಕೋರ್ ಐ5 ಅಥವಾ ಐ 7 ಸ್ಕೈಲೇಕ್, ಸಿಪಿಯು, ಎಸ್‌ಎಸ್‌ಡಿ ಸ್ಟೋರೇರ್ 512 ಜಿಬಿವರೆಗೂ ಇದೆ. 8 ಜಿಬಿ ಮೆಮೊರಿ ಸೌಲಭ್ಯ ಇದೆ.