ಬಂದಿದೆ ಹೊಸ ಮಾರುತಿ ಸುಜುಕಿ ಬಲೆನೊ ಝೆಟಾ ಅಟೊ ಮ್ಯಾಟಿಕ್
ಮಾರುತಿ ಸುಜುಕಿ ತನ್ನ ಬಲೆನೊ ಪ್ರಿಮಿಯಂನಲ್ಲಿ ಹೊಸ ಆಸಕ್ತಿದಾಯಕ ಅಭಿವೃದ್ಧಿ ಮಾಡಿದ್ದು, ಹೊಸ ಶ್ರೇಣಿಯಾ ಝೆಟಾ ಅವತರಣಿಕೆಯಲ್ಲಿ ಇದೀಗ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯವನ್ನು ಅಳವಡಿಸಲಾಗಿದೆ.
ಬಲೆನೊ ಝೆಟಾ ಅಟೊಮ್ಯಾಟಿಕ್‌ಗೆ 7.47 ಲಕ್ಷ ರೂಪಾಯಿ ದರ ನಿಗದಿಪಡಿಸಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದಾಗಿನಿಂದಲೂ, ಎಟಿ ಸೌಲಭ್ಯವನ್ನು ಮಧ್ಯಮ ಸ್ತರದ ಡೆಲ್ಟಾ ಪೆಟ್ರೋಲ್ ಟ್ರಿಮ್‌ಗಳಿಗಷ್ಟೇ ಒದಗಿಸಲಾಗುತ್ತಿತ್ತು. ಉನ್ನತ ಶ್ರೇಣಿಯ ಕಾರುಗಳಲ್ಲಿ ಹಲವು ಪ್ರಿಮಿಯಂ ಗುಣಲಕ್ಷಣಗಳು ಮಾಯವಾಗಿದ್ದವು.
ಇದೀಗ ಮಾರುತಿ ಸುಜುಕಿ ಬಲೆನೊ ಝೆಟಾ ಅಟೊಮ್ಯಾಟಿಕ್‌ನಲ್ಲಿ ಪ್ರಾಜೆಕ್ಟರ್ ಹೆಡ್‌ಲ್ಯಾಂಪ್, ಆಟೊ ಹೆಡ್‌ಲ್ಯಾಂಪ್, ಫಾಲೊಮಿ ಹೋಮ್ ಸೌಲಭ್ಯ, ಮಳೆ ಸಂವೇದಿ ವೈಪರ್, ಕ್ರೋಮ್ ಡೋರ್ ಹ್ಯಾಂಡಲ್, ಮಿಶ್ರಲೋಹದ ವ್ಹೀಲ್‌ಗಳು ವೈಶಿಷ್ಟ್ಯಗಳು.
ಕ್ಯಾಬಿನ್ ಕೂಡಾ ಮೇಲ್ದರ್ಜೆಗೇರಿದ್ದು, ಇಲ್ಯುಮಿನೇಟೆಡ್ ಗ್ಲೋವ್ ಬಾಕ್ಸ್, ಸರಕು ಸಾಗಾಣಿಕೆಗೆ ಸ್ಥಳಾವಕಾಶ, ಸ್ವಯಂಚಾಲಿತ ಡಿಮ್ಮಿಂಗ್ ಐಆರ್‌ವಿಎಂ. ಚರ್ಮ ಹೊದಿಕೆಯ ಸ್ಟಿಯರಿಂಗ್ ವ್ಹೀಲ್, ಎಂಐಡಿ ಘಟಕ, ಫೂಟ್ ವೆಲ್ ಇಲ್ಯುಮಿನೇಶನ್, ಪುಷ್ ಬಟನ್ ಸ್ಟಾರ್ಟ್, ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ಮುಂದಿನ ಸೀಟಿಗೂ ಆರ್ಮ್‌ರೆಸ್ಟ್‌ನಂಥ ಸೌಲಭ್ಯಗಳಿವೆ. ಸ್ಮಾರ್ಟ್ ಪ್ಲೇ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಂ, ಆಪಲ್ ಕಾರ್‌ಪ್ಲೇ ಕೂಡಾ ಒಳಗೊಂಡಿರುತ್ತದೆ.