ಇನ್ನು ಡ್ರೈವ್ ಮಾಡುವಾಗಲೂ ಮಾತನಾಡಿ !

Update: 2016-04-11 08:06 GMT

ಹೊಸದಿಲ್ಲಿ, ಎ. 11:  ಕ್ರಾಂತಿಕಾರಕ ಫೋನ್ ಒಂದನ್ನು ಸ್ಯಾಮ್‌ಸಂಗ್ ಕಂಪನಿ ಭಾರತಕ್ಕೆ ಪರಿಚಯಿಸಿದೆ. ವಾಹನ ಚಲಾಯಿಸುವಾಗ ಆರಾಮದಾಯಕವಾಗಿ ಮಾತನಾಡಬಹುದಾದ ವಿಶಿಷ್ಟ ಫೋನ್ ಅದು.


ಸ್ಯಾಮ್‌ಸಂಗ್‌ನ ಜೆ 3 ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ 8,990 ರೂಪಾಯಿ. ವಾಹನ ಚಲಾಯಿಸುತ್ತಿರುವಾಗ ಬಂದ ಫೋನ್ ಕರೆಗಳನ್ನು ಸ್ವೀಕರಿಸಲು ಕಸಿವಿಸಿಯಾಗುವುದನ್ನು ಅಥವಾ ನಿಮ್ಮ ಗಮನ ಬೇರೆಡೆ ಹರಿಯುವುದನ್ನು ಇದು ತಡೆಯುತ್ತದೆ.


ಈ ಸ್ಮಾರ್ಟ್‌ಫೋನ್‌ನಲ್ಲಿ ಎಸ್-ಬೈಕ್ ಲಕ್ಷಣವನ್ನು ಅಳವಡಿಸಲಾಗಿದ್ದು, ಇದನ್ನು ಆಕ್ಟಿವೇಟ್ ಮಾಡಿದರೆ, ಚಾಲಕ ಸಿದ್ಧ ಬರಹದ ಸಂದೇಶವನ್ನು ಎಲ್ಲ ಒಳಬರುವ ಕರೆಗಳಿಗೆ ಕಳುಹಿಸಲು ಇದರಿಂದ ಸಾಧ್ಯವಾಗುತ್ತದೆ. ತುರ್ತು ಕರೆಗಳ ನಿರೀಕ್ಷೆಯಲ್ಲಿದ್ದರೆ, ಚಾಲನೆ ಮಾಡುವ ವ್ಯಕ್ತಿ ಅದಕ್ಕೆ ಪ್ರತ್ಯೇಕ ಸಂದೇಶವನ್ನು ಕಳುಹಿಸಲು ಕೂಡಾ ಇದು ನೆರವಾಗುತ್ತದೆ.

ಅಂತೆಯೇ ಚಲನೆಯನ್ನು ಲಾಕ್ ಮಾಡುವ ಗುಣ ಲಕ್ಷಣದಿಂದ, ಚಾಲಕ ಕರೆ ಸ್ವೀಕರಿಸುವ ಮೊದಲು ಬೈಕ್ ನಿಲ್ಲಿಸುವುದನ್ನು ಖಚಿತಪಡಿಸುತ್ತದೆ. ಇದರಲ್ಲಿ ಅಲ್ಟ್ರಾ ಡಾಟಾ ಸೇವಿಂಗ್ ಮೋಡ್ ಸೌಲಭ್ಯವೂ ಇದ್ದು, ಒಪೇರಾ ಮ್ಯಾಕ್ಸ್‌ನಿಂದ ಇದು ಕಾರ್ಯ ನಿರ್ವಹಿಸುತ್ತದೆ.

ಸ್ಯಾಮ್‌ಸಂಗ್ ಜೆ3 ವೈಶಿಷ್ಠ್ಯಗಳು

ಸ್ಯಾಮ್‌ಸಂಗ್ ಗೆಲಾಕ್ಸಿ ಜೆ3 (6) ಅವತರಣಿಕೆಯನ್ನು ಭಾರತದಲ್ಲಿ ಪರಿಚಯಿಸಲಾಗಿದ್ದು, ಎರಡು ಸಿಮ್‌ಕಾರ್ಡ್ ಹೊಂದಿದೆ. 5 ಇಂಚಿನ ಎಚ್‌ಡಿ (720/1280 ಪಿಕ್ಸೆಲ್) ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ.

1.5 ಜಿಎಚ್‌ಝೆಡ್ ಕ್ವಾಡ್ ಸೆಂಟರ್ ಪ್ರೊಸೆಸರ್ ಹಾಗೂ 1.5 ಜಿಬಿ ರ್ಯಾಮ್ ಹೊಂದಿದೆ. 8 ಜಿಬಿ ಇನ್‌ಬಿಲ್ಡ್ ಸ್ಟೋರೇಜ್ ಇದ್ದು, 128 ಜಿಬಿ ವರೆಗೂ ವಿಸ್ತರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News