ನೀವು ಫೇಸ್ ಬುಕ್ ಮೆಸೆಂಜರ್ ಬಳಸುತ್ತಿದ್ದೀರಾ ? ಹಾಗಾದರೆ ಈ ಎರಡೂ ಹೊಸ ಫೀಚರ್ ನ್ನೂ ಉಪಯೋಗಿಸಿ !

Update: 2016-04-12 11:11 GMT

ಹೊಸದಿಲ್ಲಿ, ಎ. 12 : ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೆಸೆಂಜರ್ ಆಪ್ ಗೆ ಹೊಸ ಅಪ್ಡೇಟ್ ತಂದಿದೆ. ಈಗ ಮೆಸೆಂಜರ್ ಆಪ್ ನಲ್ಲಿ ವೀಡಿಯೋ ಚಾಟ್ ಹೆಡ್ ಗಳು ಹಾಗು ಡ್ರಾಪ್ ಬಾಕ್ಸ್ ಸೌಲಭ್ಯ ಸೇರಿಸಲಾಗಿದೆ. 

ಚಾಟ್ ಹೆಡ್ ರೀತಿಯ ಈ ವೀಡಿಯೋ ಚಾಟ್ ಹೆಡ್ ಬಳಕೆದಾರರ ಮೊಬೈಲ್ ಸ್ಕ್ರೀನ್ ಮೇಲೆ ತೇಲುವ ವೃತ್ತವೊಂದನ್ನು ಉಂಟು ಮಾಡುತ್ತದೆ.  ಈ ಮೂಲಕ ವೀಡಿಯೋ ಚಾಟ್ ಮಾಡುತ್ತಲೇ ಮಲ್ಟಿ ಟಾಸ್ಕ್ ಮಾಡಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಬಳಕೆದಾರ ಈ ತೆಳುವ ವೃತ್ತವನ್ನು ಸುಮ್ಮನೆ ಹಿಡಿದು ಡ್ರಾಪ್ ಮಾಡಿ ಸ್ಕ್ರೀನ್ ಮೇಲೆ ಎಲ್ಲಿ ಬೇಕಾದರೂ ಇಡಬಹುದು. ಈ ಅಪ್ಡೇಟ್ ಸದ್ಯ ಅಂಡ್ರಾಯಡ್ ನಲ್ಲಿ ಮಾತ್ರ ಲಭ್ಯವಿದೆ. ಐ ಫೋನ್ ಬಳಕೆದಾರರಿಗೆ ಇದು ಯಾವಾಗ ಲಭ್ಯವಾಗಲಿದೆ ಎಂದು ಇನ್ನೂ ಫೇಸ್ ಬುಕ್ ತಿಳಿಸಿಲ್ಲ. 

ಇದರೊಂದಿಗೆ ಮೆಸೆಂಜರ್ ಗೆ ನೀಡಲಾದ ಡ್ರಾಪ್ ಬಾಕ್ಸ್ ಸೌಲಭ್ಯದ ಮೂಲಕ ಬಳಕೆದಾರರು ಫೋಟೋ, ವೀಡಿಯೋ ಹಾಗು ಇತರ ಫೈಲ್ ಗಳನ್ನು ನೇರವಾಗಿ ಶೇರ್ ಮಾಡಬಹುದು. ಈಗ ಮೆಸೆಂಜರ್ ಆಪ್ ನಲ್ಲಿ ' ಮೋರ್ ' ಬಟನ್ ಒತ್ತಿದಾಗ ಡ್ರಾಪ್ ಬಾಕ್ಸ್ ಐಕನ್ ಕಾಣುತ್ತದೆ. ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಡ್ರಾಪ್ ಬಾಕ್ಸ್ ಆಪ್ ಇನ್ಸ್ಟಾಲ್ ಮಾಡಿದರೆ ಬಳಕೆದಾರರು ಮೆಸೆಂಜರ್ ನಿಂದ ಹೊರಗೆ ಬರದೆಯೇ ಯಾವುದೇ ಫೈಲ್ ಗಳನ್ನೂ ಡ್ರಾಪ್ ಬಾಕ್ಸ್ ನಲ್ಲಿ ಶೇರ್ ಮಾಡಬಹುದು. ಹಾಗಾಗಿ ತಮ್ಮ ಚಾಟ್ ಗಳಲ್ಲಿ ಫೋಟೋ , ವೀಡಿಯೋ ಹಾಗು ಜಿಫ್ ಫೈಲ್ ಗಳನ್ನೂ ಶೇರ್ ಮಾಡಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News