3000 ರೂಪಾಯಿಗೆ 4ಜಿ ಸ್ಮಾರ್ಟ್‌ಫೋನ್!

Update: 2016-04-15 12:08 GMT

ನವದೆಹಲಿ: 4ಜಿ ಸ್ಮಾರ್ಟ್‌ಫೋನ್ ಬೆಲೆಗಳು ಬಾಗಶಃ ರೂ 3000ಕ್ಕೆ ಇಳಿಯುವ ಸಾಧ್ಯತೆಯಿದೆ. ಹೈಸ್ಪೀಡ್ ಬ್ರಾಡ್‌ಬ್ಯಾಂಡನ್ನು ಹೆಚ್ಚು ಜನರು ಬಳಸುವಂತೆ ಮಾಡಲು ವರ್ಷಾಂತ್ಯದಲ್ಲಿ ಮೊಬೈಲ್‌ಗಳ ಬೆಲೆ ಕಡಿತವಾಗಲಿದೆ. ಇದು ಟೆಲಿಕಾಂ ಆಪರೇಟರುಗಳ ನಡುವೆ ಮತ್ತೊಂದು ದೊಡ್ಡ ಸಮರಕ್ಕೆ ನಾಂದಿ ಹಾಡಲಿದೆ.

ಭಾರತಿ ಏರ್‌ಟೆಲ್ ಮಾರುಕಟ್ಟೆಯಲ್ಲಿ ವೇಗವಾಗಿ 4ಜಿ ವ್ಯಾಪ್ತಿಯನ್ನು ಏರಿಸುತ್ತಿರುವುದು ಹ್ಯಾಂಡ್‌ಸೆಟ್‌ಗಳ ಬೆಲೆ ಇಳಿಕೆಗೆ ಕಾರಣವಾಗುತ್ತಿದೆ. ಏರ್‌ಟೆಲ್ ಹಿಂದೆಯೇ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಮತ್ತು ಮುಖೇಶ್ ಅಂಬಾನಿಯ ರಿಲಾಯನ್ಸ್ ಜಿಯೋ ಇನ್ಫೋ ಕಮ್ಯುನಿಕೇಶನ್ 4ಜಿ ಸಮರಕ್ಕೆ ಸಿದ್ಧವಾಗುತ್ತಿದ್ದಾರೆ.

ಹೆಚ್ಚು ಜನಪ್ರಿಯವಲ್ಲದ ಚೀನೀ ಹ್ಯಾಂಡ್ಸೆಟ್ ಪ್ಲೇಯರ್ ಫೀಕಮ್ಯು ಈ ವಾರ ಮಾರುಕಟ್ಟೆಗೆ ಬಂದಿದೆ. ಅದು 4ಜಿ ವ್ಯವಸ್ಥೆ ಇರುವ ಮೊದಲ ಅಗ್ಗದ ಹ್ಯಾಂಡ್‌ಸೆಟ್ ಆಗಿದ್ದು, ರೂ 3,999ಗೆ ಸಿಗುತ್ತಿದೆ. ಶೀಘ್ರವೇ ಇದಕ್ಕೂ ಕಡಿಮೆ ಬೆಲೆಗೆ ಮೈಕ್ರೋಮ್ಯಾಕ್ಸ್ ಇನ್ಫಾರ್ಮ್ಯಾಟಿಕ್ಸ್ 4ಜಿ ಫೋನನ್ನು ತರಲಿದೆ. ಕಳೆದ ವರ್ಷ ಈ ಸಮಯದಲ್ಲಿ ಅತೀ ಅಗ್ಗದ 4ಜಿ ಸ್ಮಾರ್ಟ್ ಫೋನ್ ರೂ 8000 ಬೆಲೆಯಲ್ಲಿತ್ತು. ವರ್ಷದೊಳಗೆ ಅದು ರೂ 3650ಕ್ಕೆ ಇಳಿದಿದೆ ಎಂದು ಕೌಂಟರ್‌ಪಾಯಿಂಟ್ ರೀಸರ್ಚ್ ವಿಶ್ಲೇಷಕ ತರುಣ್ ಪಾಠಕ್ ಹೇಳಿದ್ದಾರೆ. 2016ರ ಅಂತ್ಯದಲ್ಲಿ ಬೆಲೆ ರೂ 2700ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಲೆಗಳು ವೇಗವಾಗಿ ಇಳಿಯಲು ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ ಆಪರೇಟರುಗಳ ಅತೀವ ಸ್ಪರ್ಧೆ ಹ್ಯಾಂಡ್‌ಸೆಟ್ ಮಾರುಕಟ್ಟೆ ಬೆಲೆ ಇಳಿಸಲು ಕಾರಣವಾಗುತ್ತದೆ. ಅದರಿಂದ ಹೆಚ್ಚು ಬೇಡಿಕೆಯ ನಿರೀಕ್ಷೆಯಿದೆ. ಎರಡನೆಯದಾಗಿ 4ಜಿ ತಂತ್ರಜ್ಞಾನದ ವ್ಯಾಪ್ತಿ ವಿಸ್ತರಣೆಯಾಗುತ್ತಿರುವುದು ಮತ್ತು ಚೀನಾ, ತೈವಾನ್, ಕೊರಿಯ, ಜಪಾನ್ ಮತ್ತು ಇತರ ಮಾರುಕಟ್ಟೆಗಳ ಸಾಧನಗಳು ಸ್ಪರ್ಧಾತ್ಮಕವಾಗಿ ಅಗ್ಗದ ಬೆಲೆಯಲ್ಲಿ ಹ್ಯಾಂಡ್‌ಸೆಟ್ ಕೊಡಲು ಉತ್ಪಾದನೆಗೆ ಇಳಿದಿವೆ.

ಸ್ಯಾಮ್ಸಂಗ್ ಭಾರತದಲ್ಲಿ 4ಜಿ ವಿಭಾಗದಲ್ಲಿ ಮಾರುಕಟ್ಟೆ ನಾಯಕ. ಹಿಂದೆಯೇ ಲಿನೋವೊ, ಕ್ಸಿಯೊಮಿ, ಮೈಕ್ರೋಮ್ಯಾಕ್ಸ್ ಮತ್ತು ಆಪಲ್ ಇವೆ. ಹ್ಯಾಂಡ್‌ಸೆಟ್ ಪರಿಸರ ನಿರ್ಮಾಣದ ಹಿನ್ನೆಲೆಯಲ್ಲೇ ಜಿಯೋದ 4ಜಿ ಬಿಡುಗಡೆಯಾಗಿದೆ. ಜಿಯೋದ ಸಹ ಸಂಸ್ಥೆ ರಿಲಾಯನ್ಸ್ ರಿಟೇಲ್ ಕೂಡ 4ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಲ್‌ವೈಎಫ್ ಬ್ರಾಂಡ್ ಅಡಿ ಒಂದು ಫೋನ್ ರೂ. 5000ಕ್ಕಿಂತ ಕಡಿಮೆ ಬೆಲೆಯಿದೆ.

ಆರಂಭದಲ್ಲಿ 4ಜಿ ಫೋನ್‌ಗಳನ್ನು ರೂ 3000ದ ಅಡಿಯಲ್ಲಿ ಮಾರುಕಟ್ಟೆಗೆ ವ್ಯಾಪಕವಾಗಿ ಬಿಡುವ ಉದ್ದೇಶವಿತ್ತು. ಆದರೆ ಈಗಾಗಲೇ ಬೆಲೆ ವೇಗವಾಗಿ ಇಳಿದಿರುವ ಕಾರಣ ಅದರ ಅಗತ್ಯವಿಲ್ಲ. ಸೆಪ್ಟೆಂಬರ್ 2015ರಲ್ಲಿ ಅತೀ ಅಗ್ಗವಾದ 4ಜಿ ಸ್ಮಾರ್ಟ್‌ಫೋನ್ ಬೆಲೆ ರೂ 7000 ಆಗಿತ್ತು. ಇಂದು 15 ಸ್ಮಾರ್ಟ್‌ಫೋನ್‌ಗಳು ರೂ 5000ಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 2015ರಲ್ಲಿ 4ಜಿ ಮೊಬೈಲ್ ಬಳಕೆದಾರರು 27.4 ದಶಲಕ್ಷಕ್ಕೆ ಏರಿದ್ದಾರೆ. 3ಜಿಯಲ್ಲಿ ಗಮನಿಸಿದ ಬೆಳವಣಿಗೆಯನ್ನೇ 4ಜಿಯಲ್ಲೂ ಗಮನಿಸಬಹುದು ಎಂದು ಮೈಕ್ರೋಮ್ಯಾಕ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಹೇಳುತ್ತಾರೆ. ಮೈಕ್ರೋಮ್ಯಾಕ್ಸ್ ಎಂಟ್ರಿ ಲೆವೆಲ್ 3ಜಿ ಫೋನ್‌ಗಳು ರೂ 3500ರಲ್ಲಿದ್ದವು. ಭಾರತದಲ್ಲಿ ಈಗ ಬಹುತೇಕ 4ಜಿ ಫೋನ್‌ಗಳು 1800Mhz  ಬ್ಯಾಂಡ್ ಬಳಸುವ FD-LTE ಮತ್ತು 2300MHz ಬ್ಯಾಂಡ್ ಬಳಸುವ TD-LTE ಬಲ ಪಡೆದಿವೆ. ಇವುಗಳಿಗೆ ಜಿಯೋ ಮತ್ತು ಏರ್‌ಟೆಲ್ ಬೆಂಬಲವಿದೆ. ವೋಡಾಫೋನ್ ಮತ್ತು ಐಡಿಯಗಳು 4ಜಿ ಸೇವೆಯನ್ನು FD-LTE ಬ್ಯಾಂಡಲ್ಲಿ ಮಾತ್ರ ಕೊಡಲಿವೆ. ಈಗ ಮಾರುಕಟ್ಟೆಯಲ್ಲಿರುವ ಕೆಲವೇ 4ಜಿ ಡಿವೈಸ್‌ಗಳು 850MHz ಬ್ಯಾಂಡ್ ಬಳಸುತ್ತಿದ್ದು, FDLTE  ಬಲ ಪಡೆದಿವೆ. ಇವುಗಳನ್ನು ರಿಲಾಯನ್ಸ್ ಕಮ್ಯುನಿಕೇಶನ್ಸ್ ಮತ್ತು ಜಿಯೋ ಕೂಡ ಬಳಸಬಹುದು. ಮುಂದುವರಿದು ಹೆಚ್ಚು ಫೋನ್‌ಗಳು ಬ್ಯಾಂಡನ್ನೂ ಬೆಂಬಲಿಸುವ 850Mhz ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News