Honda BR-V ಕಾತರದಿಂದ ಕಾಯುತ್ತಿರುವ compact SUV ಮೇ 5ಕ್ಕೆ ಬಿಡುಗಡೆ

Update: 2016-04-16 11:35 GMT

ಹೋಂಡಾ ಬಿಆರ್-ವಿ ಕಾಂಪಾಕ್ಟ್ ಸುವ್ ಭಾರತದಲ್ಲಿ 2016 ದೆಹಲಿ ಆಟೋ ಎಕ್ಸಪೊದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 2016 ಮೇ 5ರಂದು ಬಿಡುಗಡೆಯಾಗಲಿದೆ. ವಾಹನ ಬಿಡುಗಡೆಯಾಗುವ ಮೊದಲಿನ ಚಟುವಟಿಕೆ ಈಗಾಗಲೇ ಆರಂಭವಾಗಿದ್ದು, ಅಧಿಕೃತ ಬುಕಿಂಗ್ ಬಿಡುಗಡೆ ಸನ್ನಿಹಿತವಾಗುತ್ತಿದ್ದಂತೆ ಆರಂಭವಾಗಲಿದೆ. ತನ್ನ ಲೀಗಲ್ಲಿರುವ ಏಕೈಕ ಏಳು ಸೀಟರ್ ವಾಹನವಾಗಿರುವ ಹೋಂಡಾ ಬಿಆರ್-ವಿ ರೆನಾಲ್ಟ್ ಡಸ್ಟರ್ ಮತ್ತು ಹ್ಯೂಂಡೈ ಕ್ರೇಟಾ ಜೊತೆಗೆ ಸ್ಪರ್ಧಿಸಲಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಸ್ತರಿತ ಬ್ರಯೋ ವೇದಿಕೆಯಲ್ಲಿ ನಿರ್ಮಾಣವಾಗಿರುವ ಹೋಂಡಾ ಬಿಆರ್‌ವಿಯನ್ನು ದೊಡ್ಡ ಮೊತ್ತದ ಬೆಲೆಗೆ ಖರೀದಿಸಬೇಕಾದೀತು. ಬೆಲೆಯನ್ನು ಇನ್ನೂ ಕಂಪನಿ ಹೊರಗೆಡವದೆ ಇದ್ದರೂ ರೂ 8 ಲಕ್ಷದಿಂದ ರೂ 12 ಲಕ್ಷದೊಳಗೆ ಇರುವ ಸಾಧ್ಯತೆಯಿದೆ. 4455 mm ಉದ್ದ, 1735 mm ಅಗಲ, 1650 mm ಎತ್ತರ ಮತ್ತು 2660 mm ವೀಲ್‌ಬೇಸ್ ಇರುವ ಹೋಂಡಾ ಬಿಆರ್‌ವಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ದೊಡ್ಡದಾಗಿದ್ದು, ಜಾಗವನ್ನೂ ಹೊಂದಿದೆ. ಕೊಡುಗೆಯಲ್ಲಿರುವ ಇಂಜಿನ್ ಆಯ್ಕೆಗಳು 1.5 ಲೀಟರ್ i-VTEC ಪೆಟ್ರೋಲ್ ಮತ್ತು 1.5 ಲೀಟರ್ i-DTEC ಡೀಸಲ್. ಎರಡೂ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸಿನ ಜೊತೆಗೆ ಹೊಂದಿಕೊಂಡಿದೆ. ಪೆಟ್ರೋಲ್ ಇಂಜಿನ್ 117bhp  ಮತ್ತು 145Nm  ಗೆ ಅಭಿವೃದ್ಧಿ ಹೊಂದಿದರೆ, ಡೀಸಲ್ ಪವರ್‌ಟ್ರೈನ್ 99bhp ಮತ್ತು 200Nm  ಬಳಸುತ್ತದೆ. ಇವೆರಡೂ ಹೋಂಡಾ ಮೊಬಿಲಿಯೊದಲ್ಲೂ ಕೆಲಸ ಮಾಡುತ್ತವೆ.

ಹೋಂಡಾ ಬಿಆರ್-ವಿ ಡೈಮೆನ್ಷನ್‌ಗಳು

ಉದ್ದ- 4455 mm

ಎತ್ತರ- 1650 mm

ಅಗಲ- 1735 mm

ವೀಲ್‌ಬೇಸ್- 2660 mm

ಗ್ರೌಂಡ್ ಕ್ಲಿಯರೆನ್ಸ್- 201mm

ಟೈರ್-16-inch

ಹೋಂಡಾ ಬಿಆರ್-ವಿ ನಿರ್ದಿಷ್ಟತೆಗಳು

ಪೆಟ್ರೋಲ್- 1.5-litre i-VTEC (117bhp, 145Nm)

ಡೀಸಲ್- 1.5-litre i-DTEC (99bhp, 200Nm)

ಹೋಂಡಾ ಬಿಆರ್-ವಿ(ವಿಸ್ತರಿತ) ಮೈಲೇಜ್

ಪೆಟ್ರೋಲ್- 17kmpl

ಡೀಸಲ್- 24kmpl

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News