ಒಂದೇ ಒಂದು ಲಕ್ಷ ರೂಪಾಯಿಯಲ್ಲಿ ಫಾರಿನ್ ಟೂರ್ ಮಾಡಬೇಕೆ?
ಬಹುತೇಕ ವೇತನ ಪಡೆಯುವ ಮಧ್ಯಮವರ್ಗದ ಭಾರತೀಯರಿಗೆ ವಿದೇಶಿ ರಜಾ ಮಜಾವನ್ನು ಅನುಭವಿಸುವ ಆಶಯವಿರುತ್ತದೆ. ಆದರೆ ತಮ್ಮ ಆದಾಯ ಮತ್ತು ನಿರ್ಣಾಯಕ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅದನ್ನು ಅದುಮಿಟ್ಟುಕೊಂಡೇ ಮುಂದುವರಿಯುತ್ತಾರೆ. ಆದರೆ ಇತ್ತೀಚೆಗೆ ಉತ್ತಮ ಆರ್ಥಿಕ ನಿರ್ವಹಣೆಯಿಂದ ಜನರು ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿದೇಶಿ ರಜಾಗಾಗಿ ಹೋಗುವ ಭಾರತೀಯರಲ್ಲಿ ಶೇ 11ರಷ್ಟು ಏರಿಕೆಯಾಗಿದೆ.
ಶ್ರೀಮಂತರು ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯ ಎಂದು ತಿರುಗಾಡಿದರೆ, ಸಾಮಾನ್ಯರು ಏಷ್ಯಾದ ಥಾಯ್ಲಂಡ್, ಮಲೇಷ್ಯಾ ಮತ್ತು ಸಿಂಗಾಪುರ ಆರಿಸಿಕೊಂಡಿದ್ದಾರೆ. ಈ ಬೇಸಗೆಯಲ್ಲಿ ಭಾರತೀಯರ ಪ್ರಿಯ ತಾಣಗಳು ಬ್ಯಾಂಕಾಕ್, ಕೌಲಾಲಂಪುರ ಮತ್ತು ಸಿಂಗಾಪುರ ಎಂದು ಕ್ಲಿಯರ್ ಟ್ರಿಪ್ ಸಂಸ್ಥೆ ಹೇಳಿದೆ. ಈ ತಾಣಗಳಿಗೆ ಜನರು ಮುಂಗಡ ಬುಕಿಂಗ್ ಮಾಡಿಸಿಕೊಂಡಿದ್ದಾರೆ. ಆದರೆ ಕೈಯಲ್ಲಿ ರೂ 1 ಲಕ್ಷ ಇಟ್ಟುಕೊಂಡು ವಿದೇಶಿ ಪ್ರವಾಸದ ಕನಸು ಕಾಣುತ್ತಿರುವವರಿಗೆ ಯಾವ ತಾಣ ಉತ್ತಮ? ದುಬೈ, ಮಾಲ್ಡೀವ್ಸ್, ಭೂತಾನ್, ಶ್ರೀಲಂಕಾ ಮತ್ತು ವಿಯೆಟ್ನಾಂ ಆರಿಸಿಕೊಳ್ಳಬಹುದು. ಈ ಪ್ರತೀಯೊಂದು ಜಾಗಕ್ಕೂ ಅದರದ್ದೇ ಆದ ಮಹತ್ವವಿದೆ.
ಆಹಾರ ಬಜೆಟ್ ತಯಾರಿಸಿ. ಸೈಟ್ ಸೀಯಿಂಗ್ ಕಡಿಮೆ ಮಾಡಿ. ಜಾಣತನದಿಂದ ವಿಮಾನ ಬುಕ್ ಮಾಡಿ. ಹೋಗುವ ದಿನಗಳ ಸಂಖ್ಯೆ ಕಡಿಮೆ ಮಾಡಿ. ರೂ 1 ಲಕ್ಷದಲ್ಲಿ ನೀವು ಈ ತಾಣಗಳನ್ನು ಭೇಟಿ ನೀಡಬಹುದು. ಮಾಲ್ಡಿವ್ಸ್ ದುಬಾರಿ ತಾಣವಾಗಿರುವ ಕಾರಣ ಸ್ವಲ್ಪ ಸಮಸ್ಯೆಯಾಗಬಹುದಾದರೂ, ಉಳಿದ ತಾಣಗಳಿಗೆ ಭೇಟಿ ನೀಡಬಹುದು. 1 ಲಕ್ಷ ರೂಪಾಯನ್ನು ಇಲ್ಲಿ ಐದು ವಿಭಾಗಗಳಾಗಿ ವಿಭಜಿಸಲಾಗಿದೆ. ವಸತಿ, ವಿಮಾನ, ಆಹಾರ, ಸ್ಥಳವೀಕ್ಷಣೆ, ಆಂತರಿಕ ಪ್ರಯಾಣ ಮತ್ತು ವೀಸಾ ಶುಲ್ಕ. ಕರೆನ್ಸಿ ವಿನಿಮಯ ದರದಿಂದ ನಿಮ್ಮ ತಾಣ ನಿರ್ಧರಿಸಬಹುದು.
ವಿದೇಶಿ ಪಯಣದಲ್ಲಿ ಕಡಿಮೆ ವೆಚ್ಚ ಮಾಡಿ ಮತ್ತು ಹೆಚ್ಚು ಉಳಿತಾಯ ಮಾಡಿ
ಪ್ರಮುಖ ಸೀಸನ್ ಮತ್ತು ಸೀಸನ್ ಅಲ್ಲದ ಸಮಯದ ನಡುವೆ ಪ್ರಯಾಣಿಸುವುದು ವಸತಿ, ವಿಮಾನಯಾನ, ಆಹಾರ ಮತ್ತು ಸ್ಥಳವೀಕ್ಷಣೆ ವಿಷಯದಲ್ಲಿ ಅತ್ಯುತ್ತಮ. ಎಲ್ಲವೂ ಅಗ್ಗವಾಗಿ ಸಿಗಲಿವೆ. ಉತ್ತಮ ಹವಾಮಾನ ಮತ್ತು ಕಡಿತ ಎರಡೂ ಸಿಗಲಿವೆ. ಕಡಿಮೆ ಜನ ಇರುತ್ತಾರೆ. ಈ ಅವಧಿಯಲ್ಲಿ 1050% ವಿಮಾನಗಳು ಮತ್ತು ಹೊಟೇಲ್ ಬುಕಿಂಗ್ ಇರುತ್ತದೆ.
ವಿಮಾನಗಳು
ಮಧ್ಯವರ್ತಿಯ ಮೂಲಕ ಬುಕ್ ಮಾಡುವ ಬದಲಾಗಿ ಅಂತರ್ಜಾಲದಲ್ಲಿ ಯಾವುದಾದರೂ ವೆಬ್‌ತಾಣ ಅಥವಾ ಮೊಬೈಲ್ ಆಫ್ ಮೂಲಕ ಬುಕ್ ಮಾಡುವುದು ಅಗ್ಗ. ಕ್ಯಾಶ್‌ಬ್ಯಾಕ್ ಕೊಡುಗೆಗಳು ಮತ್ತು ಇತರ ಕಡಿತಗಳನ್ನು ಆರಿಸಿ. ಕೊನೆ ಕ್ಷಣದ ಚೌಕಸಿಗೆ ಕಾಯಬೇಡಿ. ಕನಿಷ್ಠ 23 ತಿಂಗಳ ಮೊದಲೇ ಬುಕ್ ಮಾಡಿ.
ವಸತಿ
ನೇರವಾಗಿ ಹೊಟೇಲ್ ಜೊತೆ ಮಾತನಾಡಿ ಕಡಿತವನ್ನು ಪಡೆಯಿರಿ. ಅಗ್ಗದ ಹೊಟೇಲ್, ಹೋಂಸ್ಟೇ ಅಥವಾ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆಯುವುದು ಅಗ್ಗ.
ಆಹಾರ
ಉಚಿತ ಉಪಹಾರ ನೀಡುವ ಹೊಟೇಲುಗಳನ್ನು ಆರಿಸಿ. ಸ್ಥಳೀಯ ರೆಸ್ಟೊರೆಂಟುಗಳು ನಿಮಗೆ ಸಮಾಧಾನವಿದ್ದರೆ ಮಾತ್ರ ಆರಿಸಿ. ಪರ್ಯಾಯವಾಗಿ ಸರಳ, ಸಿದ್ಧ ವಸ್ತುಗಳನ್ನು ಸ್ಥಳೀಯ ಬೇಕರಿಗಳಿಂದ ಪಡೆದು ಹೊಟೇಲಲ್ಲಿ ನಿಮ್ಮದೇ ಊಟ ತಯಾರಿಸಿ. ಮೊದಲೇ ಅಡುಗೆ ಮಾಡಿದ ಊಟಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ. ನೀರು, ಹಾಲು, ತಂಪು ಪಾನೀಯಗಳನ್ನು ಸೂಪರ್ ಮಾರ್ಕೆಟುಗಳಿಂದ ಪಡೆಯಬಹುದು.
ಪ್ರಯಾಣ
ಸ್ಥಳೀಯ, ಸಾರ್ವಜನಿಕ ಸಾರಿಗೆಗಳಾದ ಮೆಟ್ರೋಗಳು ಮತ್ತು ಬಸ್ಸುಗಳನ್ನು ಬಳಸಿ. ಟಾಕ್ಸಿಗಳು ದುಬಾರಿ. ಜನಪ್ರಿಯ ಪ್ರವಾಸಿ ತಾಣಗಳ ಬಳಿ ಇರುವ ಕೇಂದ್ರೀಯವಾಗಿರುವ ಹೊಟೇಲ್ ಆರಿಸುವುದು ಉತ್ತಮ. ಬೈಕು ಮತ್ತು ಸ್ಕೂಟರುಗಳನ್ನು ಪಡೆದು ಪ್ರಯಾಣ ಬೆಳೆಸಬಹುದು.
ಶಾಪಿಂಗ್
ಅಧಿಕ ನೆನಪಿನ ಕಾಣಿಕೆಗಳ ಖರೀದಿ ಬೇಡ. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಖರೀದಿ ಮಾಡಬಾರದು. ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸಿ. ಪ್ರವಾಸಿ ವಲಯದೊಳಗೆ ಇರದ ತಾಣಗಳಿಂದ ಖರೀದಿಸಿ.
ಅಗ್ಗದ ಬಜೆಟಲ್ಲಿ ನೀವು ಭೇಟಿ ನೀಡಬಹುದಾದ ಪ್ರಮುಖ ತಾಣಗಳು
ದುಬೈ
ದುಬೈ ಒಂದು ಕಾಲದಲ್ಲಿ ರಜಾದ ಸ್ವರ್ಗ ಎಂದು ತಿಳಿಯಾಗಿತ್ತು. ಇಂದು ಯುಎಇ ದೇಶದ ಅತೀ ಜನಜಂಗುಳಿ ಇರುವ ನಗರ ದುಬೈ ಅತೀ ಸುಲಭವಾಗಿ ಹೋಗಬಹುದಾದ ಅಗ್ಗದ ತಾಣಗಳಲ್ಲಿ ಒಂದು. ದಂಪತಿಗಳು ರೂ 1 ಲಕ್ಷದಲ್ಲಿ ಇಲ್ಲಿಗೆ ತೆರಳಬಹುದು. ವಿಮಾನಗಳು ಅಗ್ಗವಾಗಿರುವುದು ಇದಕ್ಕೆ ಕಾರಣ. ಸ್ಥಳವೀಕ್ಷಣೆ ದುಬಾರಿಯಾಗದಂತೆ ಬಜೆಟ್ ಹಾಕಿಕೊಳ್ಳಬೇಕು. ವಸತಿ ಮತ್ತು ಆಹಾರದ ವೆಚ್ಚ ಕಡಿಮೆ ಮಾಡಿ.
ವಿಮಾನ
ಬಹಳಷ್ಟು ದರ ಕಡಿತವನ್ನು ಹಲವು ಪ್ರಯಾಣದ ಸಂಸ್ಥೆಗಳು ನೀಡುತ್ತವೆ. ಕೆಲವರು ರೌಂಡ್ ಟ್ರಿಪ್ ದರವನ್ನು ರೂ 14,000ದಲ್ಲೂ ಕೊಡುತ್ತಿದ್ದಾರೆ. ಮೊದಲೇ ಬುಕ್ ಮಾಡಿ. ಇವುಗಳಲ್ಲಿ ಬಹುತೇಕ ಸೀಮಿತ ಕೊಡುಗೆಗಳು. ಅನುದಾನ ವಾಪಾಸಾತಿ ಇರುವುದಿಲ್ಲ. ಪ್ರಯಾಣ ಖಚಿತವಾಗಿದ್ದರೆ ಮಾತ್ರ ಆರಿಸಿಕೊಳ್ಳಿ. ಕಡಿಮೆ ವೆಚ್ಚದ ದೇಶೀ ವಿಮಾನಗಳನ್ನು ಆರಿಸಿ. ಇಂಡಿಗೋ ಮತ್ತು ಸ್ಪೈಸ್ ಜೆಟ್ ಮುಂದಿನ ತಿಂಗಳು ಅಗ್ಗದಲ್ಲಿ ಸಿಗಲಿವೆ. ಇಂಟರ್ನೆಟಲ್ಲಿ ನೀವು ಬ್ರೌಸ್ ಮಾಡುತ್ತಿದ್ದಂತೆಯೇ ವಿಮಾನ ದರ ಏರದಂತೆ ಮಾಡಲು ಇಂಕಾಗ್ನಿಟೊದಲ್ಲಿ ಬ್ರೌಸ್ ಮಾಡಿ. ಸರಿಯಾದ ವಿಮಾನ ಸಮಯ ಆರಿಸಿಕೊಳ್ಳಿ. ಒಂದು ದಿನ ವ್ಯರ್ಥ ಮಾಡಬೇಡಿ. ದೆಹಲಿಯಿಂದ ದುಬೈಗೆ ಒಂದು ಕಡೆಯ ವಿಮಾನ 3 ಗಂಟೆ 50 ನಿಮಿಷಗಳು.
ವಸತಿ
ಅಗ್ಗದ ವಸತಿ ಪಡೆಯುವುದು ಕಷ್ಟ. ಆದರೆ ತ್ರಿತಾರ ಹೊಟೇಲುಗಳು ಸಿಗುತ್ತವೆ.
ಆಹಾರ
ಅಗ್ಗದ ಆಹಾರವು ವ್ಯಕ್ತಿಗೆ ರೂ 500-700ಕ್ಕೆ ಸಿಗುತ್ತವೆ. ಆದರೆ ಫುಡ್ ಕೋರ್ಟ್, ಮಾಲ್ ಮತ್ತು ರೆಸ್ಟೊರೆಂಟಲ್ಲಿ ತಿಂದರೆ ರೂ 1500-2000ಗೆ ಏರಬಹುದು. ಉಚಿತ ಉಪಹಾರವಿರುವ ಹೊಟೇಲ್ ಆರಿಸುವುದು ಒಳ್ಳೆಯದು. ಬಹಳಷ್ಟು ಸ್ಥಳವೀಕ್ಷಣೆಯಾದ ಮರುಭೂಮಿ ಸಫಾರಿ, ಕ್ರೂಸ್ ಪ್ರಯಾಣಗಳಲ್ಲಿ ಆಹಾರ ಸೇರಿಕೊಂಡಿರುತ್ತದೆ. ಊಟ ಹೊರಗೆ ಅಗ್ಗದ ಸ್ಥಳಗಳಲ್ಲಿ ಮಾಡಬಹುದು. ಬಾಟಲಿ ನೀರನ್ನು ಸ್ಥಳೀಯ ಅಂಗಡಿಗಳಿಂದಲೇ ಖರೀದಿಸುವುದು ಉತ್ತಮ.
ಆಂತರಿಕ ಪ್ರಯಾಣ
ಮೆಟ್ರೋ ಅಗ್ಗದ ಹಾದಿ. ಆದರೆ ಸಮಸ್ಯೆಗಳಿವೆ. ಮೆಟ್ರೋ ನಿಲ್ದಾಣಗಳು ಮತ್ತು ಮಾಲ್‌ಗಳಿಗೆ ಹತ್ತಿರವಿರುವ ಹೊಟೇಲ್ ಆರಿಸಬೇಕು. ಮೆಟ್ರೋ ಬಳಕೆಗೆ ಸಾಕಷ್ಟು ಮಿತಿಗಳಿವೆ ಮತ್ತು ದೊಡ್ಡ ದಂಡಗಳಿವೆ. ಹಾಗಿದ್ದರೂ ಅಗ್ಗದ ಆಯ್ಕೆ. ಕ್ಯಾಬ್‌ಗಳ ಜೊತೆ ಸೇರಿಸಿ ಮೆಟ್ರೋ ಆರಿಸಬಹುದು.
ಸ್ಥಳ ವೀಕ್ಷಣೆ
ದರಕಡಿತದ ಸಾರ್ವಜನಿಕ ಸಾರಿಗೆ ಕಾರ್ಡುಗಳನ್ನು ಬಳಸಬಹುದು. ಮೆಟ್ರೊ, ಬಸ್ ಮತ್ತು ವಾಟರ್ ಬಸ್ಸುಗಳು Nol ಇಂಟೆಗ್ರೇಟೆಡ್ ಟಿಕೆಟ್ ವ್ಯವಸ್ಥೆ ಹೊಂದಿದೆ. ಬಹು ಪಾಸ್‌ಗಳನ್ನೂ ಖರೀದಿಸಬಹುದು. ಬುರ್ಜ್ ಖಲೀಫಾಗೆ ಹೋಗುವುದಾದರೆ ಮೊದಲೇ ಬುಕ್ ಮಾಡಬೇಕು. ಪ್ಯಾಕೇಜುಗಳೂ ಲಭ್ಯವಿರುತ್ತವೆ. ಆದರೆ ಉತ್ತಮ ಮತ್ತು ಅಗ್ಗದ ಪ್ಯಾಕೇಜನ್ನು ನೋಡಿ ಆರಿಸಿಕೊಳ್ಳಬೇಕು.
ಮಾಲ್ಡೀವ್ಸ್
ಕಡಲತೀರಗಳನ್ನು ಇಚ್ಛಿಸುವವರಿಗೆ ಉತ್ತಮ ತಾಣ. 26 ಪ್ರಾಕೃತಿಕ ಸ್ಥಳಗಳಿವೆ.
ವಿಮಾನ
ಈಗಲೂ ಇಲ್ಲಿಗೆ ವಿಮಾನ ದರ ಒಟ್ಟು ಬಜೆಟಿನ ಶೇ 46ರಷ್ಟಾಗುತ್ತದೆ. ದೆಹಲಿಯಿಂದ ಮಾಲ್ಡೀವ್ಸಗೆ ಪ್ರಯಾಣಕ್ಕೆ ರೂ 25,000 ಪ್ರತೀ ವ್ಯಕ್ತಿಗೆ ಆಗುತ್ತದೆ. ದೆಹಲಿ, ಚೆನ್ನೈ ಅಥವಾ ಬೆಂಗಳೂರಿನಿಂದ ಪ್ರಯಾಣ ಬೆಳೆಸುವುದು ಉತ್ತಮ. ಒಂದೇ ವಿಮಾನದ ಬದಲಾಗಿ ಹಲವು ವಿಮಾನ ನೋಡಿ. ಅಗ್ಗದ ದಾರಿ ಉತ್ತಮ. 6 ಗಂಟೆ 45 ನಿಮಿಷಗಳಲ್ಲಿ ವಿಮಾನ ತಲುಪುತ್ತದೆ.
ವಸತಿ
ಗೆಸ್ಟ್ ಹೌಸ್ ಮತ್ತು ನಗರದ ಹೊಟೇಲುಗಳಲ್ಲಿ ತಂಗಬಹುದು. ಉತ್ತರ, ದಕ್ಷಿಣ ಮತ್ತು ಮಧ್ಯ ಎಂದು ದೇಶವನ್ನು ವಿಭಜಿಸಬಹುದು. ತ್ರಿತಾರಾ ರೆಸಾರ್ಟ್‌ಗಳಿವೆ. ರೂ. 10,000 ದಿಂದ ಆರಂಬವಾಗುತ್ತವೆ. ಚೆನ್ನೈ ಅಥವಾ ಬೆಂಗಳೂರಿನಿಂದ ಪ್ರಯಾಣಿಸಿದರೆ ವಿಮಾನ ದರ ಬಹಳ ಇಳಿಯುತ್ತದೆ.
ಆಹಾರ
ರೆಸಾರ್ಟಲ್ಲೇ ಇರುವ ಕಾರಣ ವ್ಯಕ್ತಿಗೆ ರೂ 2000 ಆಹಾರಕ್ಕೇ ಹೋಗಬಹುದು. ಹೊರಗೆ ಊಟ ಹುಡುಕುವುದು ಉತ್ತಮ. ಸಿದ್ಧ ಆಹಾರವನ್ನು ಮನೆಯಿಂದ ತೆಗೆದುಕೊಂಡು ಹೋಗುವುದೂ ಚೆನ್ನಾಗಿರುತ್ತದೆ.
ಆಂತರಿಕ ಪ್ರಯಾಣ
ಸೀಪ್ಲೇನ್, ಸ್ಪೀಡ್ ಲಾಂಚ್ ಮತ್ತು ಫೆರ್ರಿಗಳು ಸಿಗುತ್ತವೆ. ಫೆರ್ರಿ ಅಗ್ಗದ ಮಾಧ್ಯಮ. ಅಂತರ್ಜಾಲದಲ್ಲಿ ಖಾಸಗಿ ಬೋಟ್‌ಗಳನ್ನು ಬುಕ್ ಮಾಡಬಹುದು.
ಸ್ಥಳವೀಕ್ಷಣೆ
ಪ್ರಸಿದ್ಧ ಶಾಪಿಂಗ್ ರಸ್ತೆ ಮೇಲ್. ಆದರೆ ಅಗ್ಗವಲ್ಲ. ಇಲ್ಲಿ ಶಾಪಿಂಗ್ ಮಾಡದೆ ಇರುವುದು ಉತ್ತಮ. ಮಸೀದಿ, ಮ್ಯೂಸಿಯಂ ಇವೆ. ಡೈವಿಂಗ್, ಸ್ನಾರ್ಕೆಲಿಮಗ್ ಮತ್ತು ಡಾಲ್ಫಿನ್ ವೀಕ್ಷಣೆ ಇದೆ.
ಭೂತಾನ್
ಬಹಳ ಹಿಂದಿನಿಂದ ಮರೆತೇ ಹೋಗಿದ್ದ ಭೂತಾನ್ ಇತ್ತೀಚೆಗೆ ವಿವಿಧ ಪ್ರಾಯೋಗಿಕ ರಜಾಗಳಿಗೆ ಜನಪ್ರಿಯವಾಗುತ್ತಿದೆ. ಥಿಂಫು ಭೂತಾನ್ ರಾಜಧಾನಿ ಮತ್ತು ಅತ್ಯುತ್ತಮ ವಾಸ್ತುಶಿಲ್ಪ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಬೌದ್ಧಸ್ಮಾರಕಗಳು, ಜೋಂಗುಗಳು ಮತ್ತು ಸ್ತೂಪಗಳಿವೆ. ಅತೀ ಅಗ್ಗದ ದೇಶ.
ವಿಮಾನ
ಭೂತಾನ್ ಗೆ ಹೋಗಲು ಉತ್ತಮ ಹಾದಿ ಎಂದರೆ ದೆಹಲಿಯಿಂದ ಬಾಗ್ಡೋಗ್ರಾಗೆ ವಿಮಾನದಲ್ಲಿ ಹೋಗುವುದು. ನಂತರ ರಸ್ತೆಯಲ್ಲಿ ಹೋಗುವುದು. ದೆಹಲಿಯಿಂದ ಪಾರೋಗೆ ವಿಮಾನಗಳು ಬಹಳ ದುಬಾರಿ. ಭೂತಾನಿನ ರಾಷ್ಟ್ರೀಯ ವಿಮಾನ ಡ್ರಕ್ ಏರಲ್ಲಿ ಹೋಗುವುದು ದುಬಾರಿ. 12 ತಿಂಗಳು ಮೊದಲು ಬುಕ್ ಮಾಡಿದರೆ ದೆಹಲಿ- ಬಾಗ್ಡೋಗ್ರಾ ವಾಪಾಸಾತಿ ದರ ರೂ 7000 ಅಕ್ಕಪಕ್ಕ ಇರುತ್ತದೆ. ಅಲ್ಲಿಂದ ಟಾಕ್ಸಿ ಅಥವ ಬಸ್ಸು ಹಿಡಿದು ಫುಂತೆಶೊಲಿಂಗಿಗೆ ಮತ್ತು ನಂತರ ಥಿಂಪುಗೆ ಹೋಗಬಹುದು. ರಸ್ತೆ ಪ್ರಯಾಣ ರೂ 3500. ಪಾರೋದಿಂದ ಬಾಗ್ಡೋಗ್ರಗೆ ವಿಮಾನ ರೂ 7000. ದೆಹಲಿಯಿಂದ ಪಾರೋಗ್ ನೇರ ವಿಮಾನ ರೂ 20,000.
ವಸತಿ
ದುಬಾರಿ ಪಂಚತಾರದಿಂದ ಅಗ್ಗದ ಹೊಟೇಲುವರೆಗೆ ಸಿಗುತ್ತದೆ. ಪಾರಂಪರಿಕ ಭೂತಾನಿ ಮನೆಗಳೂ ಹೋಂಸ್ಟೇಗಳಾಗಿವೆ.
ಆಹಾರ
ರೂ 1000ಕ್ಕೂ ಕಡಿಮೆ ಖರ್ಚಿಗೆ ಆಹಾರ ಸಿಗುತ್ತದೆ. ಭೂತಾನಿ ಆಹಾರ ಸುಲಭವಾಗಿ ಸಿಗಲಿದೆ. ಆಂತರಿಕವಾಗಿ ಚಲಿಸಲು ಖಾಸಗಿ ವಾಹನ ಬಳಸುವುದು ಉತ್ತಮ. ಬಸ್ಸುಗಳು ಅಗ್ಗ. ಆದರೆ ಕ್ಯಾಬುಗಳು ದುಬಾರಿ. ಕ್ಯಾಬುಗಳ ಬೆಲೆ ಫಿಕ್ಸ್ ಆಗಿರುತ್ತವೆ. ಹಾಗಿದ್ದರೂ ಚೌಕಾಸಿ ಮಾಡಬಹುದು.
ಸ್ಥಳವೀಕ್ಷಣೆ/ ಶಾಪಿಂಗ್
ಭೂತಾನ್ ಮತ್ತು ಬೌದ್ಧ ಸ್ಮಾರಕಗಳು ಮತ್ತು ಚಾರಣಕ್ಕೆ ಉತ್ತಮ ಸ್ಥಳ. ಥಿಂಪುನಲ್ಲಿ ಬುದ್ಧ ವ್ಯೆಪಾಯಿಂಟ್ ನೋಡಲು ಮರೆಯಬೇಡಿ. ಚೋ ಜೋಂಗ್ ಮತ್ತು ಮೆಮೊರಿಯಲ್ ಚಾರ್ಟನ್ ನೋಡಬಹುದು. ಪುನಖಾದಲ್ಲಿ ಡೋಚು ಲಾ ಪಾಸ್, ಲಾಂಪೆರಿ ಉದ್ಯಾನವನ, ಫರ್ಟಿಲಿಟಿ ದೇಗುಲ ಮತ್ತು ಫುನಖ ಜೋಂಗ್ ನೋಡಬಹುದು. ಮೊಚ್ಚು ನದಿಯಲ್ಲಿ ರಾಫ್ಟಿಂಗ್ ಮಾಡಬಹುದು. ಪಾರೋದಲ್ಲಿ ಚಾರಣ ಮಾಡಬಹುದು.
ಪ್ಯಾಕೇಜುಗಳೂ ಲಭ್ಯವಿದೆ. ಇನ್ನೂ ಜನಪ್ರಿಯತೆ ಪಡೆಯುತ್ತಿರುವ ತಾಣವಾಗಿರುವ ಕಾರಣ ಹೆಚ್ಚು ಸಂಸ್ಥೆಗಳು ಪ್ಯಾಕೇಜ್ ನೀಡುತ್ತಿಲ್ಲ.
ಶ್ರೀಲಂಕಾ
ಅಲಕ್ಷಿಸಿದ ದಕ್ಷಿಣದ ನೆರೆ ರಾಷ್ಟ್ರ ಶ್ರೀಲಂಕಾ ಇತ್ತೀಚೆಗೆ ಭಾರತೀಯರ ಪ್ರಸಿದ್ಧ ಪ್ರವಾಸಿ ತಾಣವಾಗುತ್ತಿದೆ. ಶ್ರೀಲಂಕಾದಲ್ಲಿ ದೇಗುಲ, ಗುಡ್ಡ ಮತ್ತು ಕಡಲತೀರಗಳಿವೆ. ವನ್ಯಜೀವಿ ಮತ್ತು ಪ್ರಾಕೃತಿಕ ಸೌಂದರ್ಯವಿದೆ.
ವಿಮಾನ
ದೆಹಲಿಯಿಂದ ಕೊಲಂಬೊಗೆ ನೇರ ವಿಮಾನ ರೂ 16,000ದಿಂದ ಮೇಲಾಗುತ್ತದೆ. ಚೆನ್ನೈ, ಬೆಂಗಳೂರಿನಿಂದ ಅಗ್ಗದ ವಿಮಾನ ಲಭ್ಯವಿದೆ. ಮೊಬೈಲ್ ಆಪುಗಳು ಮತ್ತು ಪ್ರಯಾಣ ವೆಬ್ ತಾಣಗಳಲ್ಲಿ ಕಡಿಮೆ ದರದ ವಿಮಾನ ಬುಕ್ ಮಾಡಬಹುದು. ಹೊಟೇಲು ಮತ್ತು ವಿಮಾನ ಜೊತೆಯಲ್ಲೇ ಬುಕ್ ಮಾಡಬಹುದಾದ ವ್ಯವಸ್ಥೆಯೂ ಅಂತರ್ಜಾಲದಲ್ಲಿದೆ. ಇದು ಅಗ್ಗದ ವ್ಯವಹಾರವಾಗಲಿದೆ.
ವಸತಿ
ಬೊಟಿಕ್ ವಿಲ್ಲಾಗಳು, ಪಾರಂಪರಿಕ ಮನೆಗಳು, ಬಂಗಲೆಗಳು, ಹೋಂಸ್ಟೇ, ಹೊಟೇಲ್, ಗೆಸ್ಟ್ ಹೌಸ್, ಬಾಡಿಗೆ ಅಪಾರ್ಟುಮೆಂಟು ಮತ್ತು ಶ್ರೀಲಂಕಾದ ಪ್ರವಾಸಿ ರೆಸಾರ್ಟುಗಳು ಲಭ್ಯವಿದೆ. ನಿಮ್ಮ ಬಜೆಟಿಗೆ ತಕ್ಕ ಹಾಗಿವೆ. ಹೋಂಸ್ಟೇ ಉತ್ತಮ ಆಯ್ಕೆಯಾಗಲಿದೆ. ಸ್ಥಳೀಯರ ಜೊತೆಗೆ ಬೆರೆಯುವ ಅವಕಾಶವೂ ಸಿಗಲಿದೆ. ಹೊಟೇಲಿನಲ್ಲಿ ನೆಲೆಸುವುದಾದಲ್ಲಿ 23 ತಿಂಗಳುಗಳಿಗಿಂತ ಮೊದಲು ಬುಕ್ ಮಾಡುವುದು ಉತ್ತಮ.
ಆಹಾರ
ಸುಲಭವಾಗಿ ಸ್ಥಳೀಯ ಆಹಾರದ ರುಚಿ ನೋಡಬಹುದು. ಇವುಗಳು ರೂ 100-200 ಒಳಗೆ ಸಿಗಲಿವೆ. ಉತ್ತಮ ರೆಸ್ಟೊರೆಂಟುಗಳು ಸ್ವಲ್ಪ ದುಬಾರಿಯಾಗಬಹುದು.
ಆಂತರಿಕ ಪ್ರಯಾಣ
ಬಸ್ಸುಗಳು ಮತ್ತು ರೈಲುಗಳನ್ನು ಬಳಸಬಹುದು. ರೈಲೇ ಉತ್ತಮ. ಬೆಲೆ ಅಗ್ಗ. ಎಸಿ ರೈಲು ಮತ್ತು ದುಬಾರಿ ರೈಲುಗಳೂ ಇವೆ. ಕ್ಯಾಬ್‌ಗಳನ್ನು ಆರಿಸಿದರೆ ಮಾರ್ಗದರ್ಶಿಯೂ ಸಿಗುತ್ತಾರೆ.
ಸ್ಥಳವೀಕ್ಷಣೆ
ದ್ವೀಪರಾಷ್ಟ್ರದ ಎಲ್ಲಾ ಉತ್ತಮ ಸ್ಥಳಗಳನ್ನು ನೋಡಬಹುದು. ವನ್ಯಜೀವಿ, ರಾಷ್ಟ್ರೀಯ ಉದ್ಯಾನವನ, ಕಡಲತೀರ, ಬೌದ್ಧ ದೇಗುಲಗಳು ಇತ್ಯಾದಿ. ಪ್ಯಾಕೇಜುಗಳೂ ಲಭ್ಯವಿದೆ.
ವಿಯೆಟ್ನಾಂ
ತೃತೀಯ ರಾಷ್ಟ್ರವೆನ್ನುವ ಕಾರಣ ಬಹಳಷ್ಟು ಪ್ರವಾಸಿಗರು ದೂರವೇ ಇರುತ್ತಾರೆ. ಕಡಲತೀರ, ನದಿ, ಬೌದ್ಧ ಪಗೊಡಾ, ನಗರಗಳು, ಫ್ರೆಂಚ್ ಕಾಲನಿ ಪರಂಪರೆ, ಯುದ್ಧ ಮ್ಯೂಸಿಯಂ ಚುಚಿ ಸುರಂಗ ಮಾರ್ಗಗಳನ್ನು ಇಲ್ಲಿ ಕಾಣಬಹುದು.
ವಿಮಾನ
ಭಾರತದಿಂದ ವಿಮಾನ ದರ ರೂ 30,000 ಆಸುಪಾಸಿನಲ್ಲಿದೆ. 45 ತಿಂಗಳ ಮೊದಲು ಬುಕ್ ಮಾಡಿದರೆ ಕಡಿಮೆ ದರ. ಕೌಲಾಲಂಪುರಕ್ಕೆ ಹೋಗಿ ಅಲ್ಲಿಂದ ಹೊ ಚಿ ಮಿನ್ ಗೆ ತೆರಳಬಹುದು. ಹನಾಯ್ ಗೆ ಮರಳುವಾಗಲೂ ಇದೇ ದಾರಿ ಹಿಡಿಯಬಹುದು. ಏರ್ ಏಷ್ಯಾ ಆರಿಸಿಕೊಳ್ಳಬಹುದು.
ವಸತಿ
ಹೊಟೇಲುಗಳು, ಡೊರ್ಮಿಟರಿ, ಹೋಂಸ್ಟೇ ಲಭ್ಯವಿದೆ. ಮೊದಲೇ ಬುಕ್ ಮಾಡಿಕೊಳ್ಳಿ. ರೂ 500ಕ್ಕೆ ವಸತಿ ವ್ಯವಸ್ಥೆ ಸಿಗಬಹುದು. ದುಬಾರಿ ವ್ಯವಸ್ಥೆಯೂ ಇವೆ. ಭಾಷೆಯ ಸಮಸ್ಯೆಯಾಗಬಹುದು. ಹೀಗಾಗಿ ಚೌಕಾಸಿ ಕಷ್ಟವಾಗುವ ಕಾರಣ ಮೊದಲೇ ಬುಕ್ ಮಾಡಿ. ಕೇಂದ್ರೀಯ ಸ್ಥಳದಲ್ಲಿ ಹೊಟೇಲ್ ಆರಿಸಿ. ಮೆಟ್ರೋ, ಶಾಪಿಂಗ್ ಮತ್ತು ಆಹಾರದ ಸ್ಥಳಗಳ ಪಕ್ಕ ವಸತಿ ಇರಲಿ.
ಆಹಾರ
ರಸ್ತೆ ಸ್ಟಾಲುಗಳಲ್ಲಿ ಆಹಾರ ಉತ್ತಮ. ಇಲ್ಲಿ ವಿಯೆಟ್ನಾಮೀಸ್ ಆಹಾರ ಸವಿಯಬಹುದು. ಅವು ರುಚಿಕರ ಮತ್ತು ಅಗ್ಗ. ಆಂತರಿಕ ಪ್ರಯಾಣ
ರಸ್ತೆ ಪ್ರಯಾಣ ಅಗ್ಗ. ಭಾಷೆಯ ಕಾರಣ ಸಮಸ್ಯೆಯಾಗಬಹುದು. ಬಹುತೇಕರಿಗೆ ಇಂಗ್ಲಿಷ್ ಗೊತ್ತಿಲ್ಲ. ಕಾರು ಸೇವೆ ಬಳಸಿ. ರಿಕ್ಷಾ ಉತ್ತಮವಲ್ಲ. ಸ್ಕೂಟರು ಮತ್ತು ಬೈಕ್ ಬಾಡಿಗೆಗೆ ಪಡೆಯಬಹುದು. ಸಾರ್ವಜನಿಕ ಸಾರಿಗೆ ಉತ್ತಮವಾಗಿವೆ.
ಸ್ಥಳವೀಕ್ಷಣೆ
ದೇವಾಲಯ, ಮ್ಯೂಸಿಯಂಗಳಿವೆ. ರಾಷ್ಟ್ರೀಯ ಉದ್ಯಾನವನಗಳಿವೆ. ಮೆಕಾಂಗ್ ಡೆಲ್ಟಾ ಮತ್ತು ಹಲಾಂಗ್ ಬೇಗೆ ಪ್ರಯಾಣಿಸಬಹುದು. ಯುದ್ಧ ಮ್ಯೂಸಿಯಂ ಹೊ ಚಿ ಮಿನ್ ನಗರದಲ್ಲೇ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ರೇಷ್ಮೆ ಬಟ್ಟೆ ಮತ್ತು ಕರಕುಶಲ ವಸ್ತುಗಳು ಅಗ್ಗ. ಪ್ಯಾಕೇಜುಗಳು ಹೆಚ್ಚಿಲ್ಲ. ನಿಮ್ಮದೇ ಪ್ಯಾಕೇಜು ರೂಪಿಸುವುದು ಉತ್ತಮ.