ಈಗ ಒನ್ ಪ್ಲಸ್ ಮೊಬೈಲ್ ಖರೀದಿಸುವುದು ಸುಲಭ, ಆಕರ್ಷಕ

Update: 2016-04-22 05:44 GMT

ನೀವು ಹೊಸ ಒನ್ ಪ್ಲಸ್ ಫೋನನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದಲ್ಲಿ, ಈಗಲೇ ಖರೀದಿಸುವುದು ಉತ್ತಮ. ಹೆಚ್ಚು ಖರೀದಿದಾರರನ್ನು ಆಕರ್ಷಿಸಲು ಒನ್ ಪ್ಲಸ್ ತನ್ನ ಸಾಧನಗಳಿಗೆ ವ್ಯಾಪಾರಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.


ಈ ಯೋಜನೆಯಡಿ ಗ್ರಾಹಕರು ತಮ್ಮ ಹಳೇ ಸ್ಮಾರ್ಟ್ ಫೋನ್‌ಗಳನ್ನು ವಿನಿಮಯ ಮಾಡಿಕೊಂಡು ರೂ 16,000 ದಷ್ಟು ಪಡೆದುಕೊಳ್ಳಬಹುದು. ನಾವು ರೆಗ್ಲೋಬ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅಮಜಾನ್ ಇಂಡಿಯಾ ಸಹಯೋಗದಲ್ಲಿ ಹೊಸ ಒನ್ ಪ್ಲಸ್ ಸಾಧನಕ್ಕಾಗಿ ಹಳೇ ಸ್ಮಾರ್ಟ್ ಫೋನ್‌ಗಳನ್ನು ವಿನಿಮಯ ಮತ್ತು ಮರಳಿ ಪಡೆಯುವ ಒಂದು ಕಾರ್ಯಕ್ರಮವನ್ನು ತಂದಿದ್ದೇವೆ ಎಂದು ಒನ್ ಪ್ಲಸ್ ಪತ್ರಿಕಾ ಹೇಳಿಕೆ ತಿಳಿಸಿದೆ.

ಕೊಡುಗೆಯನ್ನು ನೀವು ಹೇಗೆ ಪಡೆಯಬಹುದು?

ನಿಮ್ಮ ಹಳೇ ಫೋನನ್ನು ಈ ಯೋಜನೆಯಡಿ ವ್ಯವಹರಿಸುವುದು ಅತೀ ಸರಳ. ಕಂಪನಿಯು ತನ್ನ ಬಳಕೆದಾರರನ್ನು ಧೀರ್ಘ ಕಾಲ ಕಾಯುವಂತೆ ಮಾಡುವುದಿಲ್ಲ. ಬಳಕೆದಾರರು ಹಳೇ ಫೋನನ್ನು ಖರೀದಿಸಿದ ತಕ್ಷಣವೇ ನಗದನ್ನು ಪಡೆಯಲಿದ್ದಾರೆ.

ಈ ಕೊಡುಗೆಯ ಹಂತಗಳು ಇಲ್ಲಿವೆ:

- ನೀವು ಅಮಜಾನಿನಲ್ಲಿ ಒನ್ ಪ್ಲಸ್ ಸ್ಮಾರ್ಟ್ ಫೋನ್‌ಗಳ ಶ್ರೇಣಿಯಿಂದ ಆರಿಸಿಕೊಳ್ಳಬಹುದು (ಒನ್ ಪ್ಲಸ್ ಒನ್, ಒನ್ ಪ್ಲಸ್ 2 ಮತ್ತು ಒನ್ ಪ್ಲಸ್ ಎಕ್ಸ್) ಮತ್ತು ಸಾಧನ ಖರೀದಿಸಬಹುದು.

- ಒಮ್ಮೆ ನೀವು ಆರ್ಡರ್ ಇಟ್ಟ ಮೇಲೆ ಆರ್ಡರ್ ಐಡಿಯನ್ನು ಬರೆದಿಟ್ಟುಕೊಳ್ಳಿ.

- ಮರಳಿ ಅಮೆಜಾನ್ ನಲ್ಲಿ ಖರೀದಿಸಿದ ಪುಟಕ್ಕೆ ಹೋಗಿ ಮತ್ತು ಮೊಬೈಲ್ ಬೈಬ್ಯಾಕ್ ಯೋಜನೆ ಮೇಲೆ ಕ್ಲಿಕ್ ಮಾಡಿ. ಒಮ್ಮೆ ನೀವು ನಿಯಮಾವಳಿಗಳ ಮೇಲೆ ಐ ಅಗ್ರಿ ಎಂದು ಕ್ಲಿಕ್ ಮಾಡಿದ ಮೇಲೆ ರಿಗ್ಲೋಬ್ ಪುಟಕ್ಕೆ ಹೋಗುತ್ತದೆ.

- ನೀವು ವಿನಿಯಮ ಮಾಡುತ್ತಿರುವ ಸ್ಮಾರ್ಟ್ ಫೋನ್ ವಿವರಗಳನ್ನು ಎಂಟರ್ ಮಾಡಿ ಮತ್ತು ಅಮೆಜಾನಿನಿಂದ ಹೊಸದಾಗಿ ಖರೀದಿಸಿದ ಒನ್ ಪ್ಲಸ್ ಸ್ಮಾರ್ಟ್ ಫೋನ್ ಆರ್ಡರ್ ಐಡಿಯ ಮಾಹಿತಿ ಕೊಡಿ.

- ಪ್ರಾಂತಕ್ಕೆ ಸೇವೆಯಿದೆಯೇ ಪರೀಕ್ಷಿಸಿ. ನಿಮ್ಮ ಹಳೇ ಸ್ಮಾರ್ಟ್ ಫೋನ್ ಬೆಲೆ ಮತ್ತು ಬೈಬ್ಯಾಕ್ ಲಭ್ಯತೆಯನ್ನು ಪರಿಶೀಲಿಸಿ. - ನಿಮ್ಮ ಸಂಪರ್ಕ ವಿವರಗಳನ್ನು ಹಾಕಿ ಮತ್ತು ಇಬ್ಬರಿಗೂ ಸರಿಹೊಂದುವ ಪಿಕಪ್ ಸಮಯಕ್ಕೆ ರಿಗ್ಲೋಬಿನಿಂದ ಕರೆಗಾಗಿ ಕಾಯಿರಿ.

- ಪಿಕಪ್ ಅವಧಿ ನಿಗದಿ ಮಾಡಿ ಸ್ಥಳದಲ್ಲೇ ನಗದು ಪಡೆಯಿರಿ.

ಕೃಪೆ: www.news18.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News