ಫಿಲಿಪ್ಸ್‌ನಿಂದ ಹೊಸ ಆಂಡ್ರಾಯ್ಡಾ ಸೆಟ್!

Update: 2016-04-27 07:39 GMT

ಫಿಲಿಪ್ಸ್ ಕಂಪನಿ ಕಳೆದ ವಾರ ಸ್ಪೀಚ್‌ಏರ್ ಎಂಬ ಎಂಡ್ರಾಯ್ಡಾ ಆಧರಿತ ಡಿಜಿಟಲ್ ವಾಯ್ಸ್ ರೆಕಾರ್ಡರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಸ್ಟ್ರಿಯಾ ಮೂಲದ ಫಿಲಿಪ್ಸ್ ಉಪಘಟಕವಾದ ಸ್ಪೀಚ್ ಪ್ರೊಸೆಸಿಂಗ್ ಸೊಲ್ಯೂಷನ್ಸ್ ಇದನ್ನು ಅಭಿವೃದ್ಧಿಪಡಿಸಿದೆ. ಈ ಉತ್ಪನ್ನದ ಬೆಲೆಯನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಆದರೆ ಕಂಪನಿಗಳ ಸ್ಥಳೀಯ ಮಾರಾಟ ಮಳಿಗೆಗಳಲ್ಲಿ ಇದು ಲಭ್ಯ ಎಂದು ಘೋಷಿಸಿದೆ.

"ಫಿಲಿಪ್ಸ್ ಸ್ಪೀಚ್ ಏರ್ ವಿಶ್ವದ ಅತ್ಯುತ್ತಮ ಎರಡು ವ್ಯವಸ್ಥೆಗಳನ್ನು ಒಗ್ಗೂಡಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಹಾಗೂ ಡಿಕ್ಟೇಷನ್ ರೆಕಾರ್ಡರ್‌ಗಳ ಸಂಬಂಧದ ಕೊರತೆಯನ್ನು ನೀಗಿಸಿದೆ" ಎಂದು ಕಂಪನಿಯ ಸಿಇಓ ಡಾ.ಥಾಮಸ್ ಬ್ರೌನರ್ ಚಾಲನಾ ಸಮಾರಂಭದಲ್ಲಿ ಹೇಳಿದರು.

ಫಿಲಿಪ್ಸ್ ಸ್ಪೀಚ್‌ಏರ್‌ನ ವಿನ್ಯಾಸ ಸ್ಮಾರ್ಟ್‌ಫೋನ್‌ಗಳನ್ನೇ ಹೋಲುತ್ತಿದ್ದು, 4 ಇಂಚಿನ ಡಬ್ಲ್ಯುವಿಜಿಎ (480/480 ಪಿಕ್ಸೆಲ್) ಐಪಿಎಸ್ ಟಚ್‌ಸ್ಟ್ರೀನ್ ಡಿಸ್‌ಪ್ಲೇ, ಗೊರಿಲ್ಲಾ ಗ್ಲಾಸ್‌ನಿಂದ ಸುರಕ್ಷೆ ಹೊಂದಿದ 16 ಮಿಲಿಯನ್ ಕಲರ್ ಗಮುಟ್ ಹೊಂದಿದೆ. ಹಿಂಬದಿ ಬಾರ್‌ಕೋಡ್ ಸಂಕೇತಗಳನ್ನು ತಿಳಿಯುವ ಸಾಮರ್ಥ್ಯ ಹೊಂದಿದ 5 ಮೆಗಾಪಿಕ್ಸೆಲ್‌ನ ಕ್ಯಾಮೆರಾ, ಹಿಂದಕ್ಕೆ ಹೋಗುವ ಸಲುವಾಗಿ ಪ್ರತ್ಯೇಕ ಸ್ವಿಚ್‌ಬಟನ್, ಹೋಮ್ ಸ್ಕ್ರೀನ್ ಹಾಗೂ ಬಹು ವಿಂಡೊ ಸ್ಕ್ರೀನ್ ಲಭ್ಯತೆ, ಸ್ಲೈಡರ್ ಹಾಗೂ ಮೈಕ್ರೋಫೋನ್ ಗ್ರಿಲ್‌ಗಳನ್ನು ಇದು ಒಳಗೊಂಡಿದೆ.

ಅಂಡ್ರಾಯ್ಡಾ 4.4.2 ತಂತ್ರಜ್ಞಾನ, 1.6 ಜಿಎಚ್‌ಝೆಡ್ ಸಾಮರ್ಥ್ಯದ ಡ್ಯುಯೆಲ್ ಕೋರ್ ಕಾರ್ಟೆಕ್ಸ್ ಎ0 ಪ್ರೊಸೆಸರ್, 1 ಜಿಬಿ ರ್ಯಾಮ್ ಹೊಂದಿದೆ. 16 ಜಿಬಿ ಅಂತರ್ಗತ ಸಂಗ್ರಹ ಸಾಮರ್ಥ್ಯ, ವೈ-ಫೈ 802, 11ಎ/ಜಿ/ಎಚ್/ಎನ್, 3.5 ಎಂಎಂ ಆಡಿಯೊ ಜಾಕ್, ಬ್ಲೂಟೂತ್ 4.0 ಸಂಪರ್ಕದ ಅವಕಾಶಗಳನ್ನು ಒಳಗೊಂಡಿದೆ. ಡಿಜಿಟಲ್ ವಾಯ್ಸ್ ರೆಕಾರ್ಡರ್ ಸಹಾಯದಿಂದ ಗೂಗಲ್ ಪ್ಲೇ ಲಭ್ಯತೆ ಸಾಧ್ಯವೇ ಎನ್ನುವುದನ್ನು ಕಂಪನಿ ವಿವರಿಸಿಲ್ಲ. ಅಥವಾ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಹೊಂದಿದೆಯೇ ಎನ್ನುವುದನ್ನೂ ಸ್ಪಷ್ಟಪಡಿಸಿಲ್ಲ.

116 ಗ್ರಾಂ ತೂಕದ ಈ ಫೋನ್, 127 ಮಿಲಿಮೀಟರ್/ 66/15 ಮಿ.ಮೀ. ಗಾತ್ರ ಹೊಂದಿದೆ 2700 ಎಂಎಎ ಬ್ಯಾಟರಿ ಇದ್ದು, 12 ಗಂಟೆಗಳ ಕಾಲ ರೆಕಾರ್ಡಿಂಗ್‌ಗೆ ಇದು ಸಾಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News