ಮೊಬೈಲ್ ಫೋನ್‌ನಲ್ಲಿ ಪ್ಯಾನಿಕ್ ಬಟನ್ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ
ಜನಸಾಮಾನ್ಯರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮೊಬೈಲ್ ಫೋನನ್ನು ಆತ್ಮರಕ್ಷಣೆಯ ಪರಿಣಾಮಕಾರಿ ಸಾಧನವಾಗಿ ಮಾಡಿಕೊಳ್ಳಬೇಕು ಎಂಬ ಸಲುವಾಗಿ ಮುಂದಿನ ವರ್ಷದಿಂದ ಪ್ಯಾನಿಕ್ ಬಟನ್ ಹೊಂದಿರದ ಮೊಬೈಲ್‌ಗಳನ್ನು ದೇಶದಲ್ಲಿ ಮಾರಾಟ ಮಾಡದಿರುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇದರ ಜತೆಗೆ 112 ಸಂಖ್ಯೆಯನ್ನು ಎಲ್ಲ ತುರ್ತು ಸೇವೆಗಳಿಗೆ ನಿಗದಿಪಡಿಸಲಾಗಿದೆ.
ಈ ಹೊಸ ಕ್ರಮದ ಬಗ್ಗೆ ಕೆಳಗಿನ ಆರು ಅಂಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.
* 2017ರ ಜನವರಿ 1ರಿಂದ ದೇಶದಲ್ಲಿ ಮಾರಾಟವಾಗುವ ಎಲ್ಲ ಮೊಬೈಲ್‌ಗಳು ಪ್ಯಾನಿಕ್ ಬಟನ್ ಹೊಂದಿರಬೇಕು.
* ಇದಕ್ಕಾಗಿಯೇ ಅಳವಡಿಸಿದ ಬಾಹ್ಯ ಸ್ವಿಚ್‌ಗಳನ್ನು ಇದಕ್ಕೆ ಅಳವಡಿಸಬೇಕಾಗುತ್ತದೆ.
* ಈ ವ್ಯವಸ್ಥೆಯನ್ನು ಹೊಂದಿರದ ಫೋನ್‌ಗಳಿಂದ ತುರ್ತು ಕರೆ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
* ಸ್ಮಾರ್ಟ್ ಫೋನ್‌ಗಳಲ್ಲಿ ಈ ಗುಂಡಿಯನ್ನು ಮೂರು ಬಾರಿ ಅದುಮಿದರೆ. ಅಪಾಯದಲ್ಲಿದ್ದಾರೆ ಎಂಬ ಅರ್ಥ.
* ಈ ಸ್ವಿಚ್ ಅದುಮಿದಾಗ ಸಂಬಂಧಿತ ಮಾಹಿತಿ ಪಕ್ಕದ ಪೊಲೀಸ್ ನಿಯಂತ್ರಣ ಕ್ಷೇತ್ರಕ್ಕೆ ರವಾನೆಯಾಗುತ್ತದೆ. ನಿಮ್ಮ ಮಾಹಿತಿ ಹಾಗೂ ನೀವು ಇರುವ ಜಾಗದ ಮಾಹಿತಿನ್ನೂ ಇದರಲ್ಲಿ ತಿಳಿದುಕೊಳ್ಳಬಹುದು.
* 2018ರ ಜನವರಿ 1ರಿಂದ ಜಿಪಿಎಸ್ ಸೌಲಭ್ಯ ಇಲ್ಲದ ಮೊಬೈಲ್ ಮಾರಾಟ ಮಾಡುವಂತಿಲ್ಲ.