ವಾಟ್ಸ್ ಆಪ್ ತೆರೆಯದೆಯೇ ವಾಟ್ಸ್ ಆಪ್‌ನಲ್ಲಿ ಕಾಲ್ ಮಾಡಿ!
ಹೊಸದಿಲ್ಲಿ: ಎ.29: ಐಓಎಸ್ ಹಾಗೂ ಆಂಡ್ರೈಡ್ ಬಳಕೆದಾರರಿಗಾಗಿ ವಾಟ್ಸ್ ಆಪ್ ಸದ್ಯದಲ್ಲೇ ಹೊಸ ಸೌಲಭ್ಯವನ್ನು ಒದಗಿಸಲಿದೆ. ಫೋನ್ ರಾಡಾರ್‌ನಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, ವಾಟ್ಸ್ ಅಪ್ ಸದಸ್ಯದಲ್ಲೇ ಕಾಲ್ ಬ್ಯಾಕ್ ಲಕ್ಷಣವನ್ನು ಸೇರಿಸಲಿದೆ. ವಾಟ್ಸ್ ಅಪ್ ಬಟನ್ ಕೂಡಾ ಅದುಮದೇ ತಮ್ಮ ಸ್ನೇಹಿತರಿಗೆ ವಾಟ್ಸ್ ಆಪ್ ಕರೆಗಳನ್ನು ಮಾಡಬಹುದಾಗಿದೆ. ನೋಟಿಫಿಕೇಶನ್ ಬರುವ ಜಾಗದಲ್ಲಿ ಇರುವ ಒಂದು ಬಟನ್ ಅದುಮಿ ಈ ಕರೆ ಮಾಡಬಹುದಾಗಿದೆ.
ಇದರ ಜತೆಗೆ ವಾಟ್ಸ್ ಆಪ್ ಐಓಎಸ್ ಬಳಕೆದಾರರಿಗೆ ವಾಯ್ಸ್ ಮೇಲ್ ಸೌಲಭ್ಯವನ್ನೂ ನೀಡಲಿದೆ. ಇದು ಬಳಕೆದಾರರು ವಾಯ್ಸ್ ಮೇಲ್‌ಗಳನ್ನು ದಾಖಲಿಸಿಕೊಳ್ಳಲು ಮತ್ತು ಇವುಗಳನ್ನು ಕಾಂಟ್ಯಾಕ್ಟ್ ಪಟ್ಟಿಗೆ ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ವಾಟ್ಸ್ ಆಪ್ ಕರೆಯಲ್ಲಿ ಗ್ರಾಹಕ ನಿರತರಾಗಿರುವಾಗಲೇ ವಾಯ್ಸಾ ಮೇಲ್ ಕೂಡಾ ಪಡೆಯಬಹುದಾಗಿದೆ.
ಅಷ್ಟಕ್ಕೆ ಮುಗಿಯುವುದಿಲ್ಲ. ವಾಟ್ಸ್ ಆಫ್ ಮೂಲಕ ಝಿಪ್ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳಲು ಹಾಗೂ ದೊಡ್ಡ ಗಾತ್ರದ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಕೂಡಾ ಇದು ಅವಕಾಶ ಮಾಡಿಕೊಡುತ್ತದೆ. ಬೆಟಾ ಪ್ರೋಗ್ರಾಂನಡಿಯಲ್ಲಿ ಹೊಸ ಸ್ವರೂಪ ನೀಡಲು ವಾಟ್ಸ್ ಆಪ್ ಮುಂದಾಗಿದೆ.