ಸ್ಮಾರ್ಟ್ ಫೋನ್ ನಲ್ಲಿ ಸ್ಮಾರ್ಟ್ ಆಗಿ ಇಂಟರ್ನೆಟ್ ಬಳಸಿ ಉಳಿತಾಯ ಮಾಡಿ !

Update: 2016-05-05 06:50 GMT

ಅನ್‌ಲಿಮಿಟೆಡ್ ಡಾಟಾ ಪ್ಲಾನುಗಳು ಇಂದಿಗೂ ಸಾಕಷ್ಟು ದುಬಾರಿಯೇ. ಆದರೆ ಲಿಮಿಟೆಡ್ ಪ್ಲಾನ್ ಬಳಸುವ ಬಳಕೆದಾರರು ತಮ್ಮ ಡಾಟಾ ಮುಗಿಯುವ ಬಗ್ಗೆಯೇ ಚಿಂತೆಯಲ್ಲಿರುತ್ತಾರೆ. ಆದರೆ ನೀವು ಸರಳವಾಗಿ ಮೊಬೈಲ್ ಡಾಟಾ ಉಳಿಸಬಹುದು ಮತ್ತು ತಿಂಗಳವರೆಗೂ ಬರುವಂತೆ ಕಾಪಾಡಿಕೊಳ್ಳಬಹುದು.

ಇಲ್ಲಿ ನಿಮ್ಮ ಆಂಡ್ರಾಯ್ಡಾ ಸ್ಮಾರ್ಟ್ ಫೋನಿನಲ್ಲಿ ಡಾಟಾ ಉಳಿಸುವ ಸರಳ ತಂತ್ರಗಳನ್ನು ನೀಡಿದ್ದೇವೆ.

 ಕ್ರೋಮ್ ಬಳಸುವಾಗ ಡಾಟಾ ಕಂಪ್ರೆಶನ್ ಮಾಡಿ

ಡಾಟಾ ಹೆಚ್ಚು ಬಳಕೆಯಾಗುವುದೇ ಸ್ಮಾರ್ಟ್‌ಫೋನ್ ಗಳಲ್ಲಿ ವೆಬ್ ಬ್ರೌಸ್ ಮಾಡುವಾಗ. ಬಹಳಷ್ಟು ವೆಬ್ ತಾಣಗಳು ದೊಡ್ಡ ಜಾಹೀರಾತುಗಳನ್ನ ಹೊಂದಿರುತ್ತವೆ. ಹೀಗಾಗಿ ಬಹಳಷ್ಟು ಡಾಟಾ ತಿನ್ನುತ್ತವೆ. ಆದರೆ ನೀವು ಕ್ರೋಮ್ ಅಲ್ಲಿ ಡಾಟಾ ಕಂಪ್ರೆಶನ್ ಫೀಚರ್ ಬಳಸಿಕೊಂಡು ಈ ಹೆಚ್ಚುವರಿ ಸೋರಿಕೆಯನ್ನು ತಡೆಯಬಹುದು. ಈ ಫೀಚರ್ ಸಕ್ರಿಯಗೊಳಿಸಿದ ಮೇಲೆ ಗೂಗಲ್ ವೆಬ್ ತಾಣಗಳ ನಡುವಿನ ಡಾಟಾ ವರ್ಗಾವಣೆಯನ್ನು ನಿಭಾಯಿಸುತ್ತದೆ ಮತ್ತು ಗರಿಷ್ಠ ಉಳಿತಾಯ ಕೊಡುತ್ತದೆ.

ಈ ಫೀಚರ್ ಸಕ್ರಿಯಗೊಳಿಸಲು ಕ್ರೋಮ್ ತೆರೆದು 3 ಡಾಟ್ ಮೆನುವನ್ನು ಟಾಪ್ ಮಾಡಿ. ನಂತರ ಸೆಟ್ಟಿಂಗ್ ಹೋಗಿ ಡಾಟಾ ಸೇವರ್ ಮೇಲೆ ಟಾಪ್ ಮಾಡಿ. ನಿಮ್ಮ ಆಯ್ಕೆ ಉಳಿಯುತ್ತದೆ.

ಹಿನ್ನೆಲೆ ಡಾಟಾವನ್ನು ನಿಯಂತ್ರಿಸಿ

ನಾವು ಬಳಸುವ ಕೆಲವು ಆಪ್ ಗಳು ಸ್ಮಾರ್ಟ್ ಫೋನ್ ಬಳಸದಾಗಲೂ ಸಾಕಷ್ಟು ಡಾಟಾ ತಿನ್ನುತ್ತದೆ. ಇದಕ್ಕೆ ಕಾರಣ ನೊಟಿಫಿಕೇಶನ್ ಬರುವುದು. ಪ್ರತಿಯೊಂದು ಅಪ್ ಡೇಟ್ ಆಗುವುದು. ಆದರೆ ಎಲ್ಲಾ ಆಪ್ ಯಾವಾಗಲೂ ಸಕ್ರಿಯವಾಗಿರಬೇಕಿಲ್ಲ. ಹೀಗಾಗಿ ನೀವು ಸುಲಭವಾಗಿ ಆರಿಸಿಕೊಂಡು ಡಾಟಾ ಬಳಕೆಯನ್ನು ಅಗತ್ಯವಿರುವ ಆಪ್ ಗಳಿಗೆ ಸೀಮಿತ ಮಾಡಬಹುದು.

ಸೆಟ್ಟಿಂಗ್ ಹೋಗಿ ಡಾಟಾ ಯೂಸೇಜ್ ಹೋಗಿ ನೀವು ಡಾಟಾ ನಿಯಂತ್ರಿಸಬೇಕಾದ ಆಪ್ ಆರಿಸಿ. ಈಗ ಸ್ವಿಚ್ ಟಾಗಲ್ ಮಾಡಿ ರಿಸ್ಟ್ರಿಕ್ ಆಫ್ ಬ್ಯಾಕ್ ಗ್ರೌಂಡ್ ಡಾಟಾ ಲೇಬಲನ್ನು ಆಫ್ ಮಾಡಿ.

ವೈಫೈ ಇರುವಾಗ ಆಪ್ ಅಪ್ ಡೇಟ್ ಮಾಡಿ

ಮೊಬೈಲ್ ಡಾಟಾ ಬಳಕೆಯ ಸಂದರ್ಭ ಆಪ್ ಅಪ್ ಡೇಟ್ ತಡೆಯಬೇಕು. ಇದನ್ನು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಆಟೋ ಅಪ್ ಡೇಟ್ ಫೀಚರಲ್ಲಿ ಬದಲಿಸಬಹುದು.

ಗೂಗಲ್ ಆಪ್ ಸ್ಟೋರ್ ಗೆ ಹೋಗಿ ಮೆನು ಬಟನ್ ಟಾಪ್ ಮಾಡಿ. ನಂತರ ಸೆಟ್ಟಿಂಗ್ ಆಯ್ಕೆ ಮೇಲೆ ಟಾಪ್ ಮಾಡಿ ಮತ್ತು ನಂತರ ಆಟೋ ಅಪ್ ಡೇಟ್ ಆಪ್ಸ್ ಬಟನ್ ಆರಿಸಿ. ಅಂತಿಮವಾಗಿ ಆಟೋ ಅಪ್ ಡೇಟ್ ಆಪ್ಸನ್ನು ವೈಫೈ ಓನ್ಲಿ ಆಯ್ಕೆಗೆ ಬದಲಿಸಿ.

ಆನ್ ಲೈನ್ ಸ್ಟ್ರೀಮಿಂಗ್ ತಡೆಯಿರಿ

ವಿಡಿಯೋ ಮತ್ತು ಸಂಗೀತ ಆನಲೈನಲ್ಲಿ ಸ್ಟ್ರೀಮ್ ಆಗುವುದು ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಡಾಟಾ ತಿನ್ನುತ್ತದೆ. ಹೀಗಾಗಿ ಮೊಬೈಲ್ ಡಾಟಾ ಬಳಸುವಾಗ ಈ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ನೀವು ಸ್ಟ್ರೀಮಿಂಗಿಗೆ ಸಂಗೀತ ಮತ್ತು ವೀಡಿಯೋಗಳನ್ನು ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ಸಂಗ್ರಹಿಸಿಡಬಹುದು. ವೀಡಿಯೋ ಮತ್ತು ಸಂಗೀತ ಸ್ಟ್ರೀಮ್ ಮಾಡಲೇಬೇಕಿದ್ದರೆ ಸ್ಟ್ರೀಮಿಂಗ್ ಗುಣಮಟ್ಟ ಕಡಿಮೆ ಇಡಿ.

ಪ್ರಮುಖವಾದುದನ್ನು ಗಳಿಸಿ

ಕೆಲವು ಆಪ್ ಗಳು ನಿಮಗೆ ಪ್ರಮುಖ ಡಾಟಾವನ್ನು ಸ್ಥಳೀಯವಾಗಿ ಪಡೆಯಲು ನೆರವಾಗುತ್ತದೆ. ಅವುಗಳಲ್ಲಿ ಕೆಲವು ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಪ್ಲೇ. ವೈಫೈ ನೆಟ್ವರ್ಕ್ ಇದ್ದಾಗ ಸಾಧ್ಯವಾದಷ್ಟು ಕ್ಯಾಚ್ ಮಾಡಲು ಪ್ರಯತ್ನಿಸಿ. ಹೀಗಾಗಿ ನಂತರ ಅದೇ ಕಂಟೆಂಟನ್ನು ನೋಡಬಹುದು. ಮೊಬೈಲ್ ಡಾಟಾ ಬಳಸಬೇಕಾಗಿಲ್ಲ.

ಅಕೌಂಟ್ ಸಿಂಕ್ ಸೆಟ್ಟಿಂಗ್ ಪರೀಕ್ಷಿಸಿ

ಆಗಾಗ್ಗೆ ಸಿಂಕ್ ಆಗುವುದು ಮತ್ತು ನೊಟಿಫಿಕೇಶನ್ ಬರುವುದು ಉತ್ತಮ. ಆದರೆ ಹಾಗಾದಾಗ ಸ್ಮಾರ್ಟ್ ಫೋನ್ ನಿರಂತರವಾಗಿ ಸರ್ವರನ್ನು ತಾಜಾ ಸುದ್ದಿಗಳಿಗಾಗಿ ಹುಡುಕುತ್ತದೆ. ಇದು ಮೊಬೈಲ್ ಡಾಟಾದ ಬಹಳ ಭಾಗ ತಿನ್ನುತ್ತದೆ. ಹೀಗಾಗಿ ಅಕೌಂಟ್ ಸಿಂಕಿಂಗ್ ಸೆಟ್ಟಿಂಗ್ ಪರೀಕ್ಷಿಸಿ ಮತ್ತು ತಕ್ಕಂತೆ ಹೊಂದಿಸಿ.

ಸೆಟ್ಟಿಂಗ್ ಗೆ ಹೋಗಿ ಅಕೌಂಟ್ಸ್ ಹೋಗಿ ನೊಟಿಫಿಕೇಶನ್ ಪುಶ್ ಮಾಡಲು ಅಗತ್ಯವಿರುವ ಸರ್ವಿಸ್ ಆರಿಸಿ.

ಡೌನ್ಲೋಡ್ ಡಾಟಾ ನಿರ್ವಹಣೆ ಆಪ್ ಗಳು

ಡಾಟಾ ಸಂರಕ್ಷಿಸಲು ಉತ್ತಮ ಡಾಟಾ ಮ್ಯಾನೇಜ್ಮೆಂಟ್ ಆಪನ್ನು ಡೌನ್ಲೋಡ್ ಮಾಡಿ. ಈ ಆಪ್ ಗಳು ಡಾಟಾವನ್ನು ಕಂಪ್ರೆಸ್ ಮಾಡುತ್ತವೆ ಮತ್ತು ಶೇ 50 ಡಾಟಾ ಉಳಿಸುತ್ತದೆ. ಕೆಲವು ಆಪ್ ಗಳನ್ನು ಡಾಟಾ ಪಡೆಯುವುದರಿಂದ ಅದು ತಡೆಯುತ್ತದೆ. ಈ ಕೆಲವು ಆಪ್ ಗಳು ಒಪೆರಾ ಮ್ಯಾಕ್ಸ್ ಅಥವಾ CM ಡಾಟಾ ಮ್ಯಾನೇಜರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News