ವ್ಯಾಟ್ಸಪ್ ನಲ್ಲಿ ಬ್ಲಾಕ್ ಆಗಿದ್ದರೆ ಹೇಗೆ ತಿಳಿಯುವುದು?
ವ್ಯಾಟ್ಸಪ್ ಈಗ ನಾವೆಲ್ಲರೂ ಬಳಸುವ ಆಪ್ ಆಗಿದೆ. ಪ್ರತೀ ಸ್ಮಾರ್ಟ್ ಫೋನಿನಲ್ಲೂ ಅದು ಇದೆ. ಈ ಸೇವೆಯನ್ನು ಲಕ್ಷಾಂತರ ಮಂದಿ ಬಳಸುತ್ತಿರುವಾಗ ಕೆಲವು ಬಳಕೆದಾರರು ತಮಗಿಷ್ಟವಿಲ್ಲದವರನ್ನು ಬ್ಲಾಕ್ ಮಾಡುವುದು ಇದೆ.
ಅದಕ್ಕೆ ಕಾರಣ ಬಹಳವಿರಬಹುದು. ಆದರೆ ಒಮ್ಮೆ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ, ನಂತರ ನೀವು ಅವರಿಗೆ ಸಂದೇಶ ಕಳುಹಿಸಲು ಸಾಧ್ಯವಾಗುವುದಿಲ್ಲ.
ಆದರೆ ಅದೇ ಸಮಯದಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ. ಒಬ್ಬ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದ್ದಾನೆಂದು ಹೇಗೆ ತಿಳಿದುಕೊಳ್ಳುವುದು? ಅದಕ್ಕೆ ವಿವಿಧ ದಾರಿಗಳಿವೆ.
►ನಿಮ್ಮ ಪ್ರೊಫೈಲಿನಲ್ಲಿ ನೀವು ಲಾಸ್ಟ್ ಸೀನ್ ವಿವರಗಳನ್ನು ಎನೇಬಲ್ ಮಾಡಿದ್ದರೆ, ಮತ್ತೊಬ್ಬರ ಲಾಸ್ಟ್ ಸೀನ್ ಸ್ಟೇಟಸ್ ಕೂಡ ನಿಮಗೆ ತಿಳಿದುಕೊಳ್ಳಲು ಸಾಧ್ಯವಿದೆ. ಅಂದರೆ ನಿಮ್ಮ ಗೆಳೆಯ ರೋಹಿತ್ ಕೊನೆಯ ಬಾರಿ ಎರಡು ಗಂಟೆಗಳ ಹಿಂದೆ ವಾಟ್ಸಪ್ ನೋಡಿದ್ದ ಎನ್ನುವ ವಿವರ ನಿಮಗೆ ತಿಳಿಯುತ್ತದೆ. ಆದರೆ ರೋಹಿತ್ ನಿಮ್ಮನ್ನು ಬ್ಲಾಕ್ ಮಾಡಿದಲ್ಲಿ ನಿಮಗೆ ಆ ವಿವರ ನೋಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಆ ಭಾಗದ ವಿವರ ಬರುವಲ್ಲಿ ಬ್ಲಾಂಕ್ ಇರುತ್ತದೆ.
► ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದರೆ ನೀವು ಅವರ ಪ್ರೊಫೈಲ್ ಫೋಟೋ ನೋಡಲಾಗುವುದಿಲ್ಲ. ನಿಮ್ಮ ಫೋನಿನ ಕಾಂಟಾಕ್ಟ್ ಬುಕ್ ಅಲ್ಲಿ ಆತನಿಗೆ ಏನಾದರೂ ಚಿತ್ರ ಹಾಕಿದ್ದರೆ ಅದನ್ನು ಮಾತ್ರ ತೋರಿಸುತ್ತದೆ.
►ಒಬ್ಬ ವ್ಯಕ್ತಿಗೆ ನೀವು ಸಂದೇಶಗಳನ್ನು ಕಳುಹಿಸುತ್ತಿದ್ದರೂ ಅದು ಡೆಲಿವರ್ಡ್ ತೋರಿಸದೆ ಇದ್ದರೆ, ಮತ್ತು ಯಾವತ್ತೂ ಎರಡು ಟಿಕ್ಸ್ ಬಾರದೆ ಇದ್ದರೆ ಮತ್ತು ಒಂದು ಟಿಕ್ ಮಾತ್ರ ಇದ್ದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿರುತ್ತಾರೆ. ಬಳಕೆದಾರ ರೀಡ್ ವಿವರಗಳನ್ನು ಆಫ್ ಮಾಡಿದ್ದರೂ, ನೀವು ಕಳುಹಿಸಿದ ಸಂದೇಶ ಅವರಿಗೆ ರವಾನೆಯಾಗಿದ್ದಲ್ಲಿ ಎರಡು ಟಿಕ್ಸ್ ತೋರಿಸುತ್ತದೆ. ಅದಾಗದೆ ಇದ್ದಲ್ಲಿ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ. ನೀಲಿ ಟಿಕ್ಸ್ ಎಂದಾದಲ್ಲಿ ಸಂದೇಶ ಡೆಲಿವರ್ ಆಗಿದೆ. ಕೆಲವೊಮ್ಮೆ ನೆಟ್ವರ್ಕ್ ಕಾರಣದಿಂದ ಸಂದೇಶ ತಡವಾಗುತ್ತದೆ.ಸಂದೇಶ ಸ್ವೀಕರಿಸುವಾತನ ಫೋನ್ ಸ್ವಿಚ್ ಆಫ್ ಆಗಿದ್ದಲ್ಲಿ ಹಾಗಾಗಲಿದೆ. ಆದರೆ ನಾಲ್ಕೈದು ದಿನಗಳ ಬಳಿಕವೂ ಅವರಿಗೆ ಸಂದೇಶ ಹೋಗಿಲ್ಲ ಮತ್ತು ಪಡೆದಾತ ಆನ್ ಲೈನ್ ಇದ್ದಾನೆ ಎಂದಾದಲ್ಲಿ ಶೇ 100ರಷ್ಟು ಅವರು ನಿಮ್ಮನ್ನು ಬ್ಲಾಕ್ ಮಾಡಿರುತ್ತಾರೆ.
►ನೀವು ವಾಟ್ಸಪ್ ಕಾಲ್ ಮಾಡಬಹುದು. ಆದರೆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದಲ್ಲಿ ಕರೆ ಹೋಗುವುದಿಲ್ಲ.
► ಕೊನೆಯ ಹಾದಿ ಮತ್ತು ಉತ್ತಮ ಹಾದಿ ಎಂದರೆ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆಯೇ ಎಂದು ಆ ವ್ಯಕ್ತಿಯ ಬಳಿಯೇ ಕೇಳುವುದು. ನಿಮ್ಮ ಆಪ್ತರು ನಿಮ್ಮನ್ನು ಬ್ಲಾಕ್ ಮಾಡುತ್ತಿದ್ದರೆ, ಏನಾದರೂ ಕಾರಣವಿರಬಹುದು.ಹೀಗಾಗಿ ಅವರ ಬಳಿ ಹೋಗಿ ಕಾರಣ ಕೇಳಬಹುದು. ಅಥವಾ ಅವರ ನೆಟ್ವರ್ಕ್ ಸರಿ ಇಲ್ಲವೇ ಎಂದು ವಿಚಾರಿಸಬಹುದು.
ಕೃಪೆ: indiatoday.intoday.in