ಹೆಡ್ ಫೋನ್ ಅಥವಾ ಇಯರ್ ಫೋನ್, ಯಾವುದು ಉತ್ತಮ?

Update: 2016-05-10 06:43 GMT

ನಿಮ್ಮ ಹೆಡ್ ಫೋನ್ ಗಳಿಗಿಂತ ಇಯರ್ ಫೋನ್ ಉತ್ತಮ ಎನ್ನಲು ಆರು ಕಾರಣಗಳಿವೆ. ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಹಲವರಿಗೆ ಇಯರ್ ಫೋನ್ ಇಷ್ಟವಾಗುತ್ತದೆ. ಕೆಲವರು ಅಗ್ಗವಾಗಿರುವ ಕಾರಣ ಇಯರ್ ಫೋನ್ ಬಳಸುತ್ತಾರೆ. ಆದರೆ ಕೆಲ ಬಳಕೆದಾರರು ಹೆಡ್ ಫೋನ್ ಧರಿಸಿಯೇ ಓಡಾಡುತ್ತಾರೆ.

1) ಬೆಲೆ ವಿಷಯಕ್ಕೆ ಬಂದಾಗ ಇಯರ್ ಫೋನ್ ಉತ್ತಮ

ನಮ್ಮಲ್ಲಿ ಬಹುತೇಕರು ರೂ 500 ಒಳಗೆ ಬರುವ ಇಯರ್ ಫೋನ್ ಉತ್ತಮ ಧ್ವನಿ ಗುಣಮಟ್ಟ ಕೊಡುತ್ತದೆ ಎನ್ನುವುದನ್ನು ಅರಿತಿದ್ದೇವೆ. ಹೈ ಎಂಡ್ ಇಯರ್ ಫೋನ್ ಈ ಬೆಲೆಯಲ್ಲೇ ಸಿಗುತ್ತದೆ. ಗುಣಮಟ್ಟದ ಹೆಡ್ ಫೋನ್ ಬೇಕೆಂದರೆ ಇನ್ನೂ ಹೆಚ್ಚಿನ ಬೆಲೆ ತೆರಬೇಕು.

2) ಅತಿಯಾಗಿ ಪೋರ್ಟೇಬಲ್

ಇಯರ್ ಫೋನ್ ಗಳನ್ನು ಪೋರ್ಟೇಬಲ್ ಮಾಡಬಹುದು. ನಿಮ್ಮ ಬ್ಯಾಗುಗಳಲ್ಲಿ ಅಥವಾ ಪಾಕೆಟುಗಳಲ್ಲೂ ಇಡಬಹುದು. ಆದರೆ ಹೆಡ್ ಫೋನ್ ಹಾಗಲ್ಲ. ಜಾಗವಿಲ್ಲದಿದ್ದರೆ ಹೆಡ್ ಫೋನ್ ಗಳನ್ನು ನಿಮ್ಮ ಕೈಯಲ್ಲಿ ಹಿಡಿದೇ ನಡೆದಾಡಬೇಕಾದೀತು. ಏನೇ ಇದ್ದರೂ ಇದು ಬ್ಯಾಗೇಜಿಗೆ ಹೆಚ್ಚಿನ ಹೊರೆ.

3) ಧ್ವನಿ ರದ್ದು ಪ್ರಭಾವ

ಇಯರ್ ಫೋನ್ ಗಳು ಧ್ವನಿ ರದ್ದು ಮಾಡುವ ಹ್ಯಾಂಡ್ಸ್ ಹೊಂದಿರುತ್ತವೆ. ಸಂಗೀತದಲ್ಲಿ ಯಾವುದೇ ಹೊರಗಿನ ಶಬ್ದವಿಲ್ಲದೆ ಇತರ ಧ್ವನಿಗಳು ಬಾರದೆ ನೀಟಾಗಿ ಕೇಳಬೇಕೆಂದರೆ ಇಯರ್ ಫೋನ್ ಉತ್ತಮ. ಹೆಡ್ ಫೋನ್ ಗಳು ಎಷ್ಟೇ ದುಬಾರಿಯದ್ದಾಗಿದ್ದರೂ ಮತ್ತು ದೊಡ್ಡ ಇಯರ್ ಕ್ಯಾಪ್ ಹೊಂದಿದ್ದರೂ ಪರಿಸರದ ಧ್ವನಿ ಒಳ ತೂರಿಬಿಡುತ್ತದೆ.

4) ಹೆಚ್ಚು ಬಾಳಿಕೆ

ಈವರೆಗೆ ಹೆಡ್ ಫೋನ್ ಹೆಚ್ಚು ಬಾಳಿಕೆ ಬರುತ್ತಿದ್ದರೂ, ಈಗ ತಯಾರಕರು ಇಯರ್ ಫೋನನ್ನು ಗಮನವಿಟ್ಟು ತಯಾರಿಸುತ್ತಿದ್ದಾರೆ. ಹೀಗಾಗಿ ಹೆಚ್ಚು ಬಾಳಿಕೆ ಬರುತ್ತಿದೆ. ರು. 300ರ ಇಯರ್ ಫೋನ್ ವರ್ಷಗಳ ಕಾಲ ಬಳಸಬಹುಉ. ಅದನ್ನು ಎಳೆದರೆ, ಕೆಳಗೆ ಬೀಳಿಸಿದರೆ ಅಥವಾ ನೀರಿಗೆ ಬಿದ್ದರೂ ಹಾಳಾಗದು. ಹೆಡ್ ಫೋನ್ ಗಳು ಹೆಚ್ಚು ಸಂಕೀರ್ಣವಾಗಿ ನಿರ್ಮಾಣವಾಗಿರುವ ಕಾರಣ ಬೇಗನೇ ಹಾಳಾಗಿ ಬಿಡುತ್ತವೆ.

5) ಉತ್ತಮ ಧ್ವನಿ ಗುಣಮಟ್ಟ

ಕಂಪನಿಗಳು ಇತ್ತೀಚೆಗೆ ಗುಣಮಟ್ಟದ ಹೆಡ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ತರುತ್ತಿದ್ದಾರೆ. ಹಾಗಿದ್ದರೂ ಉತ್ತಮ ಇಯರ್ ಫೋನಲ್ಲಿ ಅದೇ ದೊಡ್ಡ ಬ್ರಾಂಡಿನ ಗುಣಮಟ್ಟದ ಧ್ವನಿ ಸಿಗುತ್ತದೆ.

ನಮ್ಮಲ್ಲಿ ಬಹುತೇಕರು ಇಯರ್ ಫೋನ್ ಮತ್ತು ಹೆಡ್ ಫೋರ್ ಎರಡನ್ನೂ ಜೀವನದಲ್ಲಿ ಒಮ್ಮೆಯಾದರೂ ಬಳಸಿದ್ದೇವೆ. ಇಯರ್ ಫೋನ್ ಬಳಕೆದಾರರಿಗೆ ಹೆಚ್ಚು ಚಿಂತೆ ಇರುವುದಿಲ್ಲ. ಆದರೆ ಹೆಡ್ ಫೋನ್ ಬಳಕೆದಾರರು ಬಹಳ ಜಾಗರೂಕತೆಯಿಂದ ವಸ್ತು ಬಳಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News