ವಾಟ್ಸ್ ಆಪ್ ಪ್ರತಿಸ್ಪರ್ಧಿ ಟೆಲಿಗ್ರಾಮ್ ನಿಂದ ದೊಡ್ಡ ಫೀಚರ್ : ಕಳಿಸಿದ ಮೆಸೇಜ್ ಅನ್ನು ಎಡಿಟ್ ಮಾಡಬಹುದು !

Update: 2016-05-17 11:53 GMT

ಹೊಸದಿಲ್ಲಿ, ಮೇ 17 : ವಾಟ್ಸ್ ಆಪ್ ಗೆ ಸಾಟಿ ಯಾರು ? ಯಾರೂ ಇಲ್ಲ ! ಇಲ್ಲ , ಇಲ್ಲ ಅಷ್ಟು  ಹಾಗೆ ಹೇಳುವುದು ಇನ್ನು ಸುಲಭ, ಸರಳ ಅಲ್ಲ. ವಾಟ್ಸ್ ಆಪ್ ಪ್ರತಿಸ್ಪರ್ಧಿ , ಆದರೆ ವಾಟ್ಸ್ ಆಪ್ ಗಿಂತ ಬಹಳ ಕಡಿಮೆ ಬಳಕೆದಾರರನ್ನು ಪಡೆದಿರುವ ಟೆಲಿಗ್ರಾಮ್ ಈಗ ವಾಟ್ಸ್ ಆಪ್ ಅನ್ನು ಹಿಂದಿಕ್ಕಿ ಒಂದು ಹೊಸ ಫೀಚರ್ ಪರಿಚಯಿಸಿದೆ. ಇದು ಟೆಲಿಗ್ರಾಮ್ ಪಾಲಿಗೆ ಬಹುದೊಡ್ಡ  ಹಾಗು ಫೇಸ್ ಬುಕ್ ಮಾಲಕತ್ವದ  ವಾಟ್ಸ್ ಆಪ್ ಗೆ ಸಣ್ಣದೊಂದು ನಡುಕ ಹುಟ್ಟಿಸುವ ಬೆಳವಣಿಗೆ. ಈಗ ವಾಟ್ಸ್ ಆಪ್  ಒಂದು 

 ಬಿಲಿಯಕ್ಕೂ ಹೆಚ್ಚು ಬಳಕೆದಾರರು ತಾವು ಒಮ್ಮೆ ಕಳಿಸಿದ ಅಥವಾ ಗ್ರೂಪ್ ನಲ್ಲಿ ಶೇರ್ ಮಾಡಿದ ಮೆಸೇಜ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಆದರೆ ಟೆಲಿಗ್ರಾಮ್ ನಲ್ಲಿ ಅದು ಸಾಧ್ಯವಿದೆ ! ಹೀಗೆಂದು ಟೆಲಿಗ್ರಾಮ್ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯಕ್ಕೆ 100 ಮಿಲಿಯನ್ ಮಾಸಿಕ ಬಳಕೆದಾರರನ್ನು ಅದು ಹೊಂದಿದೆ. 

ಈ ಬಗ್ಗೆ ಟೆಲಿಗ್ರಾಮ್ ನೀಡಿದ ಪ್ರಕಟಣೆ ಇಲ್ಲಿದೆ : “Farewell to typos! Starting today, you can edit the text of your messages after sending them. This works across all Telegram chats, including groups and one-on-one conversations,” 

ಮೆಸೇಜ್ ಮೇಲೆ ಟ್ಯಾಪ್ ಮಾಡಿ ಬಳಿಕ ಎಡಿಟ್ ಬಟನ್ ಒತ್ತಿದರೆ ಸಾಕು , ನೀವು ಈಗಾಗಲೇ ಕಳಿಸಿದ ಮೆಸೇಜ್ ಅನ್ನೂ ಎಡಿಟ್ ಮಾಡಬಹುದು. ಡೆಸ್ಕ್ ಟಾಪ್ ನಲ್ಲಿ ಅಪ್ ಆರೋ (up arrow button)ಬಟನ್ ಒತ್ತಿದರೆ ಎಡಿಟ್ ಮಾಡಬಹುದು. ಇಂತಹ  ಮೆಸೇಜ್ ‘edited’ ಎಂದು ಸಣ್ಣ ಲೇಬಲ್ ತೋರಿಸುವುದರಿಂದ ಇದು ಎಡಿಟ್ ಮಾಡಿದ ಮೆಸೇಜ್ ಎಂದು ಗೊತ್ತಾಗುತ್ತದೆ. 

ಇದರೊಂದಿಗೆ ಇನ್ನೂ ಒಂದು ಮೆನ್ಶನ್ಸ್ (‘mentions’) ಫೀಚರ್ ಅನ್ನೂ ಟೆಲಿಗ್ರಾಮ್ ಪರಿಚಯಿಸಿದೆ. ಇದರಿಂದ ಕೇವಲ  @ ಸಿಂಬಲ್ ಒತ್ತಿ  ನೀವು ಯಾವುದೇ ಗ್ರೂಪ್ ನಲ್ಲಿ ಇರುವ ಸ್ನೇಹಿತರ ಹೆಸರು ಬರೆದರೆ ಅವರಿಗೆ ನೋಟಿಫಿಕೇಶನ್ ಹೋಗುತ್ತದೆ. 

ಪ್ರತಿದಿನ ತನಗೆ 350,000 ಹೊಸ ಬಳಕೆದಾರರು ಸಿಗುತ್ತಿದ್ದು 15  ಬಿಲಿಯನ್ ಸಂದೇಶಗಳು ವಿನಿಮಯವಾಗುತ್ತಿವೆ ಎಂದು ಟೆಲಿಗ್ರಾಮ್ ಹೇಳಿದೆ. ಈ ಹೊಸ ಫೀಚರ್ ಗಳಿಂದ ಈ ಸಂಖ್ಯೆ ಹೆಚ್ಚಾಗಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News