ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

Update: 2016-05-17 17:51 GMT

ಶ್ರೀ ನಗರ , ಮೇ 17 : ಕಾಶ್ಮೀರದ ಕುಪ್ವಾರ ಮತ್ತು ಶೋಪಿಯನ್ ಜಿಲ್ಲೆಗಳಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಮಾಡಲಾಗಿದೆ ಎಂದು ಮಂಗಳವಾರ ಸೇನೆ ತಿಳಿಸಿವೆ.

 
  ದಕ್ಷಿಣ ಕಾಶ್ಮೀರದ ಶೋಪಿಯನ್ ಹಾಗೂ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಕನಿಷ್ಠ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಶ್ರೀನಗರದದಿಂದ 52 ಕಿ.ಮೀ ದೂರದಲ್ಲಿರುವ ಶೋಪಿಯನ್ ಜಿಲ್ಲೆಯ ಪೆಹ್ಲಿಪೊರ ಪ್ರದೇಶದಲ್ಲಿ ಸಂಘರ್ಷ ನಡೆದಿತ್ತು. ಸೋಮವಾರ ಸಂಜೆ ಭದ್ರತಾ ಪಡೆ ನಡೆಸಿದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಉಗ್ರ ಫಾರೂಖ್ ಶೇಖ್ ಎಂದು ಗುರುತಿಸಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News