ತ್ಯಾಜದಿಂದ ವಿದ್ಯುತ್ ಉತ್ಪಾದನೆ ಸ್ಥಾವರ ದಿಲ್ಲಿಯಲ್ಲಿ ಶೀಘ್ರವೇ ಆರಂಭ

Update: 2016-05-19 19:15 GMT

ಹೊಸದಿಲ್ಲಿ , ಮೇ 19 : ದಿಲ್ಲಿಯಲ್ಲಿ 24 ಮೆಗಾ ವ್ಯಾಟ್ ಸಾಮರ್ಥ್ಯದ ಮುನ್ಸಿಪಲ್ ತ್ಯಾಜದಿಂದ ವಿದ್ಯುತ್ ಉತ್ಪಾದಿಸುವ ನರೇಲಾ ಭವನ ಸ್ಥಾವರವು ಜೂನ್‌ನಲ್ಲಿ ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ದಿಲ್ಲಿ ಮೇಯರ್ ಸಂಜೀವ್ ನಯ್ಯರ್ ಇಂದು ತಿಳಿಸಿದ್ದಾರೆ.
 ಪಾಲಿಕೆಯ ಅಧಿಕಾರಿಗಳೊಂದಿಗೆ ಸ್ಥಾವರಕ್ಕೆ ಭೇಟಿ ನೀಡಿದ ಮೇಯರ್, ಈ ಸ್ಥಾವರ ದೇಶದಲ್ಲಿನ ಅತೀ ದೊಡ್ಡ ಯೋಜನೆಯ ವಿಧಗಳಲ್ಲೊಂದಾಗಿದೆ. 1,300 ಮೆಟ್ರಿಕ್ ಟನ್ ಸಾಮರ್ಥ್ಯದ ದೇಶೀಯ ತ್ಯಾಜವನ್ನು ಈ ಸ್ಥಾವರದಲ್ಲಿ ಸಂಸ್ಕರಿಸಲಿದೆ. 1,300 ಮೆಟ್ರಿಕ್ ಟನ್ ತ್ಯಾಜದಿಂದ ಪ್ರತಿದಿನ 24 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್‌ನ್ನು ಉತ್ಪಾದಿಸಲಾಗುವುದು. ಜೂನ್ ಮೊದಲ ವಾರದಲ್ಲಿ ಈ ಸ್ಥಾವರವನ್ನು ನಾಗರಿಕರಿಗೆ ಸಮರ್ಪಿಸಲಿದ್ದೇವೆ ಎಂದು ಅವರು ತಿಳಿಸಿದರು.
ತಿಪ್ಪೆ ರಾಶಿ ಹಾಕುವ ಸ್ಥಳದಲ್ಲಿ ಹಾಕಿರುವ ತ್ಯಾಜವನ್ನು ರೆಪ್ಯೂಸುಡ್ ಡಿರಾವೈಡ್ ಫೂಯಲ್ (ಅನುಪಯುಕ್ತ ಇಂಧನ) ಸ್ಥಾವರದ ಇಂಧನವನ್ನಾಗಿ ಬಳಸಲಾಗುವುದು.ಘನತ್ಯಾಜ ವಿಲೇವಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಕಸದ ರಗಳೆಯಿಂದ ಮುಕ್ತಿ ಹೊಂದಲು ಇದು ಸಹಕಾರಿಯಾಗಲಿದೆ ಎಂದರು.

ಈ ಯೋಜನೆಯನ್ನು ಉತ್ತರ ದಿಲ್ಲಿ ಮಹಾ ನಗರ ಪಾಲಿಕೆಯೂ ರಾಮ್ಕಿ ಘನ ತ್ಯಾಜ ನಿರ್ವಹಣೆಯ ಸಂಸ್ಥೆಯ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದೆ ಎಂದು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಭಾರದ್ವಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News