ಸಾಂಸ್ಕೃತಿಕ ಸಂಬಂಧ ಪುನರುಜ್ಜೀವನಕ್ಕೆ ಮುಂದಾದ ಭಾರತ- ಇರಾನ್

Update: 2016-05-21 18:13 GMT

ಹೊಸದಿಲ್ಲಿ, ಮೇ 21: ಭಾರತ ಹಾಗೂ ಇರಾನ್ ದೇಶಗಳ ನಡುವಿನ ಪ್ರಾಚೀನ ಸ್ನೇಹ ಸಂಬಂಧವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಲು ಅಗತ್ಯ ಸರಣಿ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ರವಿವಾರದಿಂದ ಇರಾನ್‌ಗೆ ಪ್ರವಾಸ ಕೈಗೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ಈ ಸಂಬಂಧ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಪಾಶ್ಚಿಮಾತ್ಯ ದೇಶಗಳು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ತಡೆ ಉಂಟಾಗಿತ್ತು.

ಇದೀಗ ಇರಾನ್, ಪಾಶ್ಚಿಮಾತ್ಯ ದಿಗ್ಬಂಧನದಿಂದ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಹಳೆಯ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಹಾಗೂ ಉಭಯ ದೇಶಗಳಿಗೆ ಲಾಭವಾಗುವಂತೆ ಪಾಲುದಾರಿಕೆ ಕೈಗೊಳ್ಳಲಾಗುವುದು ಎಂದು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್‌ನ ಮಹಾನಿರ್ದೇಶಕ ಸಿ.ರಾಜಶೇಖರ್ ವಿವರಿಸಿದರು.

ಐಸಿಸಿಆರ್ ಮತ್ತು ಟೆಹ್ರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಇರಾನ್‌ನ ಪರುಂಗಸ್ತಾನ್ ಹಾಗೂ ಸಾದಿ ಫೌಂಡೇನ್ ಜತೆ ಸಹಭಾಗಿತ್ವದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಮೇಳವನ್ನು ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಭೇಟಿ ವೇಳೆ ಆಯೋಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News