ಇತಿಹಾಸ ಬರೆದ ಇಸ್ರೋ

Update: 2016-05-23 04:55 GMT

ಶ್ರೀಹರಿಕೋಟಾ,  ಮೇ 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದಲ್ಲಿ ಮೊದಲ ಬಾರಿ  ಸ್ವದೇಶಿ ನಿರ್ವಿುತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸುವ  ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 1.7 ಟನ್ ತೂಕವಿರುವ ಬಾಹ್ಯಾಕಾಶ ನೌಕೆ ಆರ್​ಎಲ್ ವಿ-ಟಿಡಿ ಯನ್ನು ಉಡಾವಣೆ ಮಾಡಲಾಯಿತು. ಮಾನವರಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಸಹಕಾರಿ ಎಂದು ಹೇಳಲಾಗುತ್ತಿರುವ  ಈ ನೌಕೆ ಅಮೆರಿಕದ ನೌಕೆಗಿಂತ ಆರು ಪಟ್ಟು ಚಿಕ್ಕದಾಗಿದೆ. ಇದನ್ನು  ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿಯೇ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News