ರಾಜ್ಯಗಳಿಗೆ ನಿರ್ಭಯಾ ನಿಧಿಯ ಹಂಚಿಕೆ ವಿಧಾನಗಳನ್ನು ತಿಳಿಸಿ:ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2016-05-26 15:26 GMT

ಹೊಸದಿಲ್ಲಿ,ಮೇ 26: ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿರುವ ನಿರ್ಭಯಾ ನಿಧಿಯನ್ನು ರಾಜ್ಯಗಳಿಗೆ ಯಾವ ರೀತಿಯಲ್ಲಿ ಹಂಚಿಕೆ ಮಾಡಲಾಗುತ್ತದೆ ಎನ್ನುವುದನ್ನು ತನಗೆ ತಿಳಿಸುವಂತೆ ಗುರುವಾರ ಕೇಂದ್ರ ಸರಕಾರಕ್ಕೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯವು,ಇಲ್ಲದಿದ್ದರೆ ಈ ನಿಧಿಯು ಕೇವಲ ಬಾಯಿಮಾತಿನ ಸಹಾನುಭೂತಿಯಾಗುತ್ತದೆ ಎಂದು ಹೇಳಿದೆ.

ಸಿಪಿಸಿಯ ಕಲಂ 357ಎ ಅಡಿ ವಿವಿಧ ರಾಜ್ಯಗಳು ರೂಪಿಸಿರುವ ಅತ್ಯಾಚಾರ ಸಂತ್ರಸ್ತರ ಪರಿಹಾರ ಯೋಜನೆಗಳಲ್ಲಿ ಏಕರೂಪತೆಯ ಕೊರತೆಯಿದೆ ಎಂದು ಅಮಿಕಸ್ ಕ್ಯೂರೆ ಇಂದಿರಾ ಜೈಸಿಂಹ ಅವರು ನ್ಯಾಯಾಲಯದ ಗಮನಕ್ಕೆ ತಂದಾಗ ನ್ಯಾಯಮೂರ್ತಿಗಳಾದ ಪ್ರಫುಲ್ಲಾ ಸಿ.ಪಂತ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

 ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಮತ್ತು ಅದಕ್ಕಾಗಿ ಹಣ ನಿಗದಿ,ಪರಿಹಾರವನ್ನು ಪಾವತಿಸಿರುವ ಪ್ರಕರಣಗಳ ಸಂಖ್ಯೆ,ಸಾಕ್ಷಿಗಳಿಗೆ ರಕ್ಷಣೆ ಸೇರಿದಂತೆ ಜೈಸಿಂಹ ಅವರು ಬೆಟ್ಟು ಮಾಡಿದ ಹಲವಾರು ವಿಷಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸುಗಳನ್ನು ಹೊರಡಿಸಿದ ಪೀಠವು ಆರು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News