ಬಾಲ್ಯ ವಿವಾಹ ಪದ್ದತಿ: ಹಿಂದೂ, ಮುಸ್ಲಿಂ ಮಹಿಳೆಯರೇ ಹೆಚ್ಚು ಬಲಿಪಶು

Update: 2016-05-28 05:10 GMT

ಹೊಸದಿಲ್ಲಿ, ಮೇ 28: ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡುವುದರಲ್ಲಿ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಈ ವಿಷಯದಲ್ಲಿ ಈ ಎರಡೂ ಧರ್ಮಗಳು ಸಮಾನವಾಗಿವೆ ಎಂದು ಅಧಿಕೃತ ಅಂಕಿ-ಅಂಶದಿಂದ ಬಹಿರಂಗವಾಗಿದೆ.

ಎರಡೂ ಧರ್ಮಗಳ ಮೂರು ಹೆಣ್ಣುಮಕ್ಕಳ ಪೈಕಿ ಒಂದು ಹೆಣ್ಣು ಮಗುವನ್ನು 18ನೆ ವಯಸ್ಸಿಗಿಂತ ಮೊದಲೇ ವಿವಾಹ ಮಾಡಲಾಗುತ್ತಿದೆ. ಇದರಿಂದ ತಾಯಂದಿರ ಸಾವಿನ ಪ್ರಮಾಣ ಹೆಚ್ಚುವುದಲ್ಲದೆ, ಮನೆಯೊಳಗೆ ಹಿಂಸಾಚಾರವೂ ಹೆಚ್ಚಾಗುತ್ತಿದೆ.

ವಿವಾಹಿತ ಭಾರತೀಯ ಮಹಿಳೆಯರ ಬಗೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಶೇ. 31.3 ಹಿಂದೂ ಮಹಿಳೆಯರು ಹಾಗೂ ಶೇ.30.6 ಮುಸ್ಲಿಂ ಮಹಿಳೆಯರು 17 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ಕೆಲವರಿಗೆ 10 ವರ್ಷವಾಗುವ ಮೊದಲೇ ವಿವಾಹ ಮಾಡಲಾಗುತ್ತಿದೆ.

ಕಾನೂನು ಪ್ರಕಾರ ವಿವಾಹವಾಗಬೇಕಾದರೆ ಮಹಿಳೆಯರಿಗೆ 18 ಹಾಗೂ ಪುರುಷರಿಗೆ 21 ವರ್ಷವಾಗಿರಬೇಕು. ಬಾಲ್ಯವಿವಾಹ ಪದ್ಧತಿ ಸಿಖ್, ಕ್ರಿಶ್ಚಿಯನ್, ಬೌದ್ಧ ಹಾಗೂ ಜೈನ್ ಧರ್ಮದ ಮಹಿಳೆಯರಲ್ಲಿ ತುಂಬಾ ಕಡಿಮೆ.

ಬಾಲ್ಯ ವಿವಾಹ ‘ಮರಣ ದಂಡನೆ’ಯಾಗಿದೆ ಎಂದು ಕರೆದಿರುವ ಯುನಿಸೆಫ್, ಬಾಲಕಿಯರು ದೈಹಿಕವಾಗಿ ಸಮರ್ಥವಾಗುವ ಮೊದಲೇ ಮಗುವಿಗೆ ಜನ್ಮನೀಡುತ್ತಾರೆ. ಹೆಣ್ಣು ಮಕ್ಕಳು 15 ವರ್ಷಕ್ಕಿಂತ ಮೊದಲೇ ಮಗುವಿನ ಜನ್ಮನೀಡುವುದರಿಂದ ತಾಯಿ-ಮಗುವಿಗೆ ಪ್ರಾಣಾಪಾಯ ಅಧಿಕವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News