ಅರಣ್ಯ ಪ್ರದೇಶಗಳ ಮೇಲೆ ನಿಗಾಕ್ಕೆ ಡ್ರೋನ್‌ಗಳ ನಿಯೋಜನೆ ಸಾಧ್ಯತೆ

Update: 2016-05-29 18:27 GMT

ಕೋಝಿಕೋಡ್, ಮೇ 29: ನೆರೆಯ ವಯನಾಡ ಜಿಲ್ಲೆಯ ಮುತುಂಗಾ ಅರಣ್ಯದಲ್ಲಿ ಅಧಿಕಾರಿಗಳು ಐದು ಸಣ್ಣ ಗಾತ್ರದ ಮಾನವರಹಿತ ವಿಮಾನಗಳೊಂದಿಗೆ ಯಶಸ್ವಿಯಾಗಿ ಕ್ಷೇತ್ರ ಪ್ರಯೋಗಗಳನ್ನು ನಡೆಸುತ್ತಿದ್ದು, ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳು ಮತ್ತು ಕಳ್ಳ ಬೇಟೆಗಾರರ ಮೇಲೆ ಕಣ್ಣಿರಿಸಲು ಡ್ರೋನ್‌ಗಳನ್ನು ಶೀಘ್ರವೇ ನಿಯೋಜಿಸುವ ಸಾಧ್ಯತೆಯಿದೆ.

 ಮೇ 18ರಂದು ಮುತುಂಗಾ ಅರಣ್ಯದಲ್ಲಿ ವಿವಿಧ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನಡೆಸಿದ ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ ಕ್ಯಾಮರಾ ಮತ್ತು ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸಿದ್ದ ಐದು ಡ್ರೋನ್‌ಗಳನ್ನು ಬಳಸಲಾಗಿತ್ತು ಎಂದು ವಯನಾಡ ವನ್ಯಜೀವಿ ಅಧಿಕಾರಿ ಪಿ.ಧನೇಶ ಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News