ಮಾಜಿ ಸಚಿವ ಚಿದಂಬರಂ ಕುಟುಂಬದ ಆಸ್ತಿ 95 ಕೋಟಿ ರೂ.
ಮುಂಬೈ,ಜೂ.1: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಮಹಾರಾಷ್ಟ್ರದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಚಿದಂಬರಂ ತನ್ನ ಕುಟುಂಬ 95 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಚುನಾವಣಾಧಿಕಾರಿಗೆ ಸಲ್ಲಿಸಿರುವ 22 ಪುಟಗಳ ಅಫಿದಾವಿಟ್‌ನಲ್ಲಿ ತಾನು ಮತ್ತು ತನ್ನ ಕುಟುಂಬ ಹೊಂದಿರುವ ಆಸ್ತಿಯ ವಿವರ ನೀಡಿದ್ದಾರೆ.
ಅವರ ಕುಟುಂಬದ ಬಳಿ 54.30 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 41.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
ಚಿದಂಬರಂ 2014-15ನೆ ಸಾಲಿನಲ್ಲಿ 8.58 ಕೋಟಿ ರೂ. ಆದಾಯ ಗಳಿಸಿದ್ದಾರೆ. ಅವರ ಪತ್ನಿ ಇದೇ ಅವಧಿಯಲ್ಲಿ 1.25ಕೋಟಿ. ರೂ. ಆದಾಯ ಗಳಿಸಿದ್ದಾರೆ.
ಚಿದಂಬರಂ ಬಳಿ ಚರಾಸ್ತಿ 42.95 ಕೋಟಿ ರೂ. ಹಾಗೂ ಸ್ಥಿರಾಸ್ತಿ 4.25 ಕೋಟಿ ರೂ, ನಳಿನಿ ಚಿದಂಬರಂ 11.23 ಕೋಟಿ ರೂ. ಚರಾಸ್ತಿ ಮತ್ತು 25.03 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.