ಹಳೇ ಸ್ಮಾರ್ಟ್ ಫೋನ್ ಇದೆಯೆ? ಖರ್ಚೇ ಇಲ್ಲದೆ ಅದನ್ನು ಸಿಸಿಟಿವಿ ಕ್ಯಾಮರಾ ಮಾಡಿಬಿಡಿ

Update: 2016-06-01 06:46 GMT

ಪ್ರತೀ ಎರಡು ವರ್ಷಕ್ಕೊಮ್ಮೆಯಾದರೂ ಫೋನ್ ಬದಲಿಸುವುದು ವಾಡಿಕೆ. ಆದರೆ ಹಳೇ ಫೋನನ್ನು ಮಾರಬೇಕು ಎಂದುಕೊಂಡರೆ ಅದಕ್ಕೆ ಬೆಲೆಯೇ ಇರುವುದಿಲ್ಲ. ಹಳೇ ಹಾರ್ಡ್‌ವೇರನ್ನು ಮಾರುವುದರಿಂದ ಅದಕ್ಕೆ ತಕ್ಕ ಬೆಲೆ ಸಿಗುವುದಿಲ್ಲ. ಹೀಗಾಗಿ ಕೊನೆಗೆ ಆ ಫೋನ್ ಡ್ರಾಯರಲ್ಲಿ ಬಿದ್ದುಬಿಡುತ್ತದೆ. ಒಂದು ಡಿವೈಸನ್ನು ಉತ್ತಮವಾಗಿ ಬಳಸಬೇಕೆಂದು ನಿಮಗೆ ಇದ್ದಲ್ಲಿ ಅದಕ್ಕೆ ಸರಳವಾದ ಪರಿಹಾರವಿದೆ. ನಿಮ್ಮ ಕ್ಯಾಮರಾವನ್ನು ಸೆಕ್ಯುರಿಟಿ ಕ್ಯಾಮರಾ ಆಗಿ ಬದಲಿಸಬಹುದು!

ಸರಳ ಸಿಸಿಟಿವಿ ನಿಯಂತ್ರಣವನ್ನು  ಮನೆ ಅಥವಾ ಕಚೇರಿಯಲ್ಲಿ ಮಾಡಿಕೊಳ್ಳಲು ಸೆಕ್ಯುರಿಟಿ ಕ್ಯಾಮರಾ ಇರುವುದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಹಳೇ ಫೋನ್ ಬಳಸಿ ಸಿಸಿಟಿವಿ ಮಾಡುವುದು ಸರಳ. ಸೂಕ್ತ ಸಾಫ್ಟ್ ವೇರ್ ಬೇಕು.

ಸಿಸಿಟಿವಿ ಆ್ಯಪ್ಸ್ ಬೇಕಾದಷ್ಟು ಸಿಗುತ್ತವೆ. ಆಂಡ್ರಾಯ್ಡಾ ಫೋನಿನ ಪ್ಲೇಸ್ಟೋರಿಗೆ ಹೋದರೆ ಸಿಗುತ್ತವೆ. ಬಹುತೇಕ ಫ್ರೀ ಆಪ್ಸ್ ಆಗಿರುತ್ತವೆ. ಆದರೆ ಹುಡುಕುವುದು ಮತ್ತು ಆಯ್ಕೆ ಹೇಗೆ? ಕೆಲವು ಸಿಸಿಟಿವಿ ಆಪ್ಸ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಅಥವಾ ಲಿನೊವೊ ವೈಬ್ ಕೆ4 ನೋಟಲ್ಲಿ ತೆರೆಯಲು ಆಗುವುದಿಲ್ಲ. ಲೈನ್ ಸಿಸಿಟಿವಿ ಎನ್ನುವ ಆಪನ್ನು ಬಹಳ ಮಂದಿ ಡೌನ್ಲೋಡ್ ಮಾಡಿದರೂ ಅದು ನಕಲಿ. ಕೆಲವು ಆಪ್ ಗಳು ಕೆಲಸ ಮಾಡಿದರೂ ದೃಶ್ಯಗಳು ನೀಟಾಗಿ ಪ್ರಸಾರವಾಗುವುದಿಲ್ಲ. ಅಂತಿಮವಾಗಿ ಉತ್ತಮ ಆಪ್ ಎಂದರೆ ಎಟ್ ಹೋಮ್. ಹಲವಾರು ಲಕ್ಷಣಗಳು ಮತ್ತು ಯುಐ ಜೊತೆಗೆ ಈ ಆಪ್ ಇತರ ಎಲ್ಲವುಗಳಿಂದಲೂ ವಿಶ್ವಾಸಾರ್ಹ.

ಹಳೇ ಫೋನಾಯಿತು, ಆ್ಯಪ್ ಆಯಿತು. ಮುಂದಿನ ಹಂತ ಅದನ್ನು ಸೆಟ್ ಮಾಡುವುದು. ಹಳೇ ಫೋನಿಗೆ ಕೆಲಸ ಮಾಡುವ ವೈಫೈ ಕನೆಕ್ಷನ್ ಬೇಕು. ನೀವು ಅದನ್ನು ಚಾರ್ಜರ್ ಕನೆಕ್ಟ್ ಮಾಡಲಾಗುವ ಸ್ಥಳದಲ್ಲಿಯೆ ಇಡಬೇಕು. ಏಕೆಂದರೆ ಬ್ಯಾಟರಿ ಮುಗಿಯಿತೆಂದು ತೆಗೆದು ಮತ್ತೆ ಚಾರ್ಜ್ ಮಾಡಲಾಗದು. ಅಲ್ಲದೆ ಅದರಲ್ಲಿ ಬರುವ ವಿಡಿಯೋ ಫೀಡ್ ನೋಡಲು ಫೋನ್ ಅಥವಾ ಟ್ಯಾಬ್ಲೆಟ್, ವಿಂಡೋಸ್ ಕಂಪ್ಯೂಟರ್ ಬೇಕು.

ಹಂತಗಳು

► ಎಟ್‌ಹೋಮ್ ವೀಡಿಯೊ ಸ್ಟ್ರೀಮರ್ ಆ್ಯಪನ್ನು ಹಳೇ ಫೋನಿಗೆ ಇನ್‌ಸ್ಟಾಲ್ ಮಾಡಿ. ಇದನ್ನು ಕ್ಯಾಮರ ಫೀಡ್ ಪ್ರಸಾರ ಮಾಡಲು ಬಳಸಲಾಗುತ್ತದೆ.

► ಈಗ ನೀವು ಸಿಸಿಟಿವಿ ಫೀಡ್ ಪಡೆದುಕೊಳ್ಳಲು ಬಯಸುವ ಫೋನಿಗೆ ಎಟ್‌ಹೋಮ್ ಮಾನಿಟರ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ. ಈ ಫೋನ್ ಅಥವಾ ಟಾಬ್ಲೆಟನ್ನು ವೀಡಿಯೊ ಫೀಡ್ ನೋಡಲು ಬಳಸಬಹುದು.

ಕ್ಯಾಮರಾ ಫೋನ್ ಮತ್ತು ನೋಡುವ ಫೋನ್ ಎರಡರಲ್ಲೂ ಸಂಬಂಧಿಸಿದ ಆಪ್ ಇರಬೇಕು. ಅದು ಆನ್ ಲೈನ್ ಹೋಗುತ್ತಲೇ ಎಟ್‌ಹೋಮ್ ವೀಡಿಯೊ ಸ್ಟ್ರೀಮರ್ ವಿಶಿಷ್ಟ ಕನೆಕ್ಷನ್ ಐಡಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಜೊತೆಗೆ ಕೊಡುತ್ತದೆ. ವಿಡಿಯೋ ಫೀಡ್ ನಿಯಂತ್ರಿಸುವ ಫೋನಿನಲ್ಲಿ ಈ ಮಾಹಿತಿ ಎಂಟರ್ ಮಾಡಿದರೆ ಆಯಿತು. ಇಲ್ಲದಿದ್ದರೆ ಕ್ಯುಆರ್ ಕೋಡನ್ನು ಸ್ಕಾನ್ ಮಾಡಿದರೆ ಸಾಕು. ಫೀಡ್ ನೋಡುವ ಫೋನಲ್ಲಿ ಮೊದಲಿಗೆ ಎಟ್‌ಹೋಮ್ ಮಾನಿಟರ್ ಆ್ಯಪ್ ಹಾಕಿಕೊಂಡು ನಂತರ ಖಾತೆಯ ವಿವರಗಳನ್ನು ಹಾಕುವುದು ಅಥವಾ ಕ್ಯುಆರ್ ಕೋಡ್ ಬಳಸಿ ಫೀಡ್ ಸೇರಿಸಬಹುದು. ಸಿಸಿಟಿವಿ ಸ್ಟ್ರೀಮರಲ್ಲಿ ಸ್ಕಾನ್ ಮಾಡಿದ ಕೋಡನ್ನು ರಿಸೀವರಲ್ಲಿ ಹಾಕಿದರೆ ಆಯಿತು.

ನಿಮ್ಮ ಡೆಸ್ಕ್ ಟಾಪ್ ಕಂಪ್ಯೂಟರನ್ನು ಸಿಸಿಟಿವಿ ವೀಡಿಯೊ ಫೀಡ್ ಬೇಕಿದ್ದಲ್ಲಿ ವಿಂಡೋಸ್ ಬಳಸುತ್ತಿದ್ದಲ್ಲಿ ಎಟ್‌ಹೋಮ್ ಕ್ಯಾಮರಾ ಡೆಸ್ಕಟಾಪ್ ಕ್ಲೈಂಟನ್ನು ಡೌನ್ಲೋಡ್ ಮಾಡಿ ಇನ್ ಸ್ಟಾಲ್ ಮಾಡಿ. ನಿಮ್ಮ ಕಂಪ್ಯೂಟರಲ್ಲಿ ವೆಬ್ ಕ್ಯಾಮ್ ಇದ್ದರೆ ಕ್ಯುಆರ್ ಕೋಡನ್ನು ಸ್ಕಾನ್ ಮಾಡಬಹುದು. ಇಲ್ಲದಿದ್ದರೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬಳಸಬೇಕು. ನಿಮ್ಮ ಡೆಸ್ಕಟಾಪಲ್ಲಿ ನೀವು ನಾಲ್ಕು ಕ್ಯಾಮರಾ ಫೀಡನ್ನು ನಿಯಂತ್ರಿಸಬಹುದು.

ಈ ಆ್ಯಪಲ್ಲಿ ಸಮಯ ನಿಗದಿ ಮಾಡಿದ ರೆಕಾರ್ಡಿಂಗ್ ಮತ್ತು ಟು ವೇ ಟಾಕ್ ಕೂಡ ಇದೆ. ಫ್ರಂಟ್ ಮತ್ತು ರೇರ್ ಕ್ಯಾಮರಾವನ್ನು ಬದಲಿಸಬಹುದು. ಎಲ್‌ಇಡಿ ಫ್ಲಾಶ್ ಬಳಸಬಹುದು.

ಇದಕ್ಕೆ ವೈಫೈ ಇದ್ದರೆ ಉತ್ತಮ. ಏಕೆಂದರೆ ಎಟ್‌ಹೋಂ ಸ್ಟ್ರೀಮರ್ 10 ನಿಮಿಷದಲ್ಲಿ 64 ಎಂಬಿ ಬಳಸುತ್ತದೆ. ನೋಡುವ ಆಪ್ ಕೂಡ ಅಷ್ಟೇ ಡಾಟಾ ಬಳಸುತ್ತದೆ. ಆ್ಯಪ್ ಚಲನೆ ಕಂಡಾಗ ನಿಮಗೆ ಸೂಚನೆಯನ್ನೂ ನೀಡುತ್ತದೆ. ನೀವು ಡಾಟಾವನ್ನು ರೆಕಾರ್ಡ್ ಮಾಡಿ ನಂತರ ಪ್ರಸಾರ ಮಾಡಬೇಕಾಗಿಲ್ಲ. ಈ ಆ್ಯಪಲ್ಲಿ ಎಲ್ಲಾ ಲಕ್ಷಣಗಳೂ ಚೆನ್ನಾಗಿವೆ.

ಕೃಪೆ: gadgets.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News