ಮಗಳು ಗರ್ಭಿಣಿಯಾಗಿಲ್ಲ, ಅಳಿಯನ ಮೆಡಿಕಲ್ ಟೆಸ್ಟ್ ಮಾಡಿಸಿ ಎಂದು ಪೊಲೀಸರಿಗೆ ಮೊರೆಯಿಟ್ಟ ವಿಚಿತ್ರ ವ್ಯಕ್ತಿ!

Update: 2016-06-03 07:03 GMT

 ಸಹಾರನ್‌ಪುರ, ಜೂನ್ 3: ಸಹಾರನ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ನೀಡಿದ ಒಂದು ಆಶ್ಚರ್ಯಕಾರಿ ದೂರು ಪೊಲೀಸರಿಗೆ ತಲೆನೋವು ತಂದಿದೆ. ಇಲ್ಲಿನ ನದೀಮ್ ಕಾಲನಿಯ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ತನ್ನ ಅಳಿಯನ ಗಂಡಸು ತನದ ಮೇಲೆ ಸಂದೇಹವಿದೆ. ಅವನನ್ನು ಇಂಪೋರ್ಟೆನ್ಸಿ ಟೆಸ್ಟ್ ಮಾಡಿಸಬೇಕೆಂದು ಪೊಲೀಸರಿಗೆ ದೂರು ನೀಡಿ ವಿನಂತಿಸಿಕೊಂಡಿದ್ದಾನೆ.

    ತಾನು ಮಗಳಿಗೆ ಮದುವೆ ಮಾಡಿಸಿ ಹದಿನಾಲ್ಕು ತಿಂಗಳು ಕಳೆದಿದ್ದರೂ ಅವಳು ಗರ್ಭಿಣಿಯಾಗಿಲ್ಲ. ಇದು ಅಳಿಯನಲ್ಲಿ ಶಂಕೆ ತಲೆದೋರಲು ಕಾರಣವಾಗಿದ್ದು ತನ್ನ ಅಳಿಯನನ್ನು ಗಂಡಸುತನ ಪರೀಕ್ಷೆಗೊಳಪಡಿಸಬೇಕೆಂದು ಆತ ಠಾಣೆಯ ಮೆಟ್ಟಲನ್ನೇರಿದ್ದಾನೆ. ಆತನ ವಿಚಿತ್ರ ಬೇಡಿಕೆಯಿಂದಾಗಿ ಪೊಲೀಸರು ತಬ್ಬಿಬ್ಬಾಗಿದ್ದಾರೆ. ಅಂತಿಮವಾಗಿ ಪೊಲೀಸರೀಗ ಆತನ ಅಳಿಯನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಲು ನಿರ್ಧರಿಸಿದ್ದಾರೆ.

ಪೊಲೀಸರು ಇಬ್ಬರು ನವ ವಿವಾಹಿತರನ್ನು ಠಾಣೆಗೆ ಕರೆಯಿಸಿಕೊಂಡಾಗ ಅವರಿಬ್ಬರೂ ಪರಸ್ಪರ ಖುಶಿಯಲ್ಲಿದ್ದು ಪೊಲೀಸರ ಗಮನಕ್ಕೆ ಬಂದಿತ್ತು. ಅವರಿಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹುಡುಗಿಯ ತಂದೆಯನ್ನು ಸಮಾಧಾನಿಸುವ ಪ್ರಯತ್ನದಲ್ಲಿ ಸ್ಥಳೀಯ ಮುಖಂಡರೂ ತೊಡಗಿದ್ದಾರೆ. ಕುತುಬ್‌ಶೇರ್ ಪೊಲೀಸ್ ಠಾಣೆಯ ಮುಖ್ಯಸ್ಥ ಶೈಲೇಂದ್ರರು ದೂರುದಾರನು ಮೊದಲು ಎಸ್ಪಿ ಕಚೇರಿಗೆ ಹೋಗಿದ್ದು ನಂತರವೇ ಪ್ರಕರಣ ಬಹಿರಂಗವಾಯಿತು ಎಂದು ತಿಳಿಸಿದ್ದಾರೆ. ದೂರುದಾರನ ಅಳಿಯನನ್ನು ಎರಡು ದಿವಸಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News