ನ್ಯಾಯಾಧೀಶೆಯನ್ನು ಅಪಮಾನಿಸಿದ ಓಲಾಕ್ಯಾಬ್ ಚಾಲಕನ ಬಂಧನ

Update: 2016-06-03 10:53 GMT

ಹೊಸದಿಲ್ಲಿ, ಜೂನ್ 3: ಉತ್ತರ ದಿಲ್ಲಿಯಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳಾ ನ್ಯಾಯಾಧೀಶರನ್ನು ಅಪಮಾನಿಸಿ, ಕೆಟ್ಟದಾಗಿ ವರ್ತಿಸಿದ ಪ್ರಕರಣದಲ್ಲಿ ಓಲಾ ಚಾಲಕನನ್ನು ಬಂಧಿಸಲಾಗಿದೆ. ಚಾಲಕ ಸಂದೀಪ್‌ನನ್ನು ಗುಡ್‌ಗಾಂವ್‌ನಿಂದ ಪೊಲೀಸರು ಬಂಧಿಸಿದ್ದು ತೀಸ್‌ಹಝಾರಿ ಕೋರ್ಟ್‌ನ ಅಡಿಷನಲ್ ಸೆಶನ್ಸ್ ನ್ಯಾಯಾಧೀಶೆ ಚಾಲಕನ ವಿರುದ್ಧ ದೂರು ನೀಡಿದ್ದರು.

ಮೇ 28ಕ್ಕೆ ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು, ಉತ್ತರ ದಿಲ್ಲಿಯ ಮಾರ್ಕೆಟ್‌ನಲ್ಲಿ ಶಾಪಿಂಗ್‌ಗೆ ತೆರಳಲು ನ್ಯಾಯಾಧೀಶೆ ಓಲಾ ಕ್ಯಾಬ್ ಸರ್ವೀಸ್‌ಗೆ ಕರೆ ಮಾಡಿದ್ದರು. ಮಾರ್ಕೆಟ್‌ಗೆ ಬಂದ ಬಳಿಕ ವಸ್ತು ಖರೀದಿಸಿ ಬರುವವರೆಗೆ ಹೊರಗೆ ನಿಲ್ಲಬೇಕೆಂದು ಅವರು ಚಾಲಕನಿಗೆ ಹೇಳಿದ್ದರು. ಆದರೆ ಎರಡು ನಿಮಿಷ ಕಳೆದಾಗ ನ್ಯಾಯಾಧೀಶೆಗೆ ಕೆಟ್ಟದಾಗಿ ಬೈದು ಚಾಲಕ ತಡವಾಯಿತು ಎಂದಿದ್ದಾನೆ. ನಂತರ ಕಾರಿನಲ್ಲಿಟ್ಟ ಅವರ ಬ್ಯಾಗನ್ನು ರಸ್ತೆಗೆಸೆದಿದ್ದಾನೆಎಂದು ನ್ಯಾಯಾಧೀಶೆ ದೂರಿನಲ್ಲಿ ತಿಳಿಸಿದ್ದಾರೆ.

ಬುಧವಾರ ಪೊಲೀಸರಿಗೆ ದೂರು ದೊರಕಿದ್ದು ಆನಂತರ ಐಪಿಸಿ ಸೆಕ್ಷನ್ 354ಎ,509,427 ಪ್ರಕಾರ ದೂರು ದಾಖಲಿಸಿಕೊಂಡಿರುವ ರೂಪ್‌ನಗರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News