ಪಠಾಣ್‌ಕೋಟ್ ದಾಳಿ ಕುರಿತ ತನ್ನ ಮುಖ್ಯಸ್ಥನ ಹೇಳಿಕೆಯಿಂದ ಹಿಂದೆ ಸರಿದ ಎನ್‌ಐಎ

Update: 2016-06-03 18:09 GMT

ಹೊಸದಿಲ್ಲಿ,ಜೂ.3: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಲು ಜೈಷ್-ಎ-ಮೊಹಮ್ಮದ್ ಅಥವಾ ಮಸೂದ್ ಅಝರ್‌ಗೆ ಪಾಕಿಸ್ಥಾನ ಸರಕಾರ ಅಥವಾ ಪಾಕಿಸ್ಥಾನದ ಸರಕಾರಿ ಸಂಸ್ಥೆ ನೆರವಾಗಿತ್ತೆನ್ನುವುದಕ್ಕೆ ಯಾವುದೇ ಸಾಕ್ಷಾಧಾರ ಈವರೆಗೆ ಲಭ್ಯವಾಗಿಲ್ಲ ಎಂದು ಎನ್‌ಐಎ ವರಿಷ್ಠ ಶರದ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಭಾರತ ಮತ್ತು ಪಾಕ್ ನಡುವೆ ವಿವಾದವನ್ನು ಸೃಷ್ಟಿಸಿದೆ. ಪಾಕ್ ಪ್ರಜೆಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಅಂಗೀಕೃತ ಸತ್ಯವಾಗಿದೆ ಎಂದು ಭಾರತವು ಹೇಳಿದೆ.

ಇದೇ ವೇಳೆ ಎನ್‌ಐಎ ಈ ಹೇಳಿಕೆಯಿಂದ ಹಿಂದೆ ಸರಿದಿದ್ದರೆ, ಅವರ ಹೇಳಿಕೆಯು ಈ ವಿಷಯದಲ್ಲಿ ತಾನು ಹಿಂದಿನಿಂದಲೂ ತಳೆದಿರುವ ನಿಲುವನ್ನು ಎತ್ತಿ ಹಿಡಿದಿದೆ ಎಂದು ಪಾಕಿಸ್ತಾನವು ಹೇಳಿಕೊಂಡಿದೆ.

ಕುಮಾರ್ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿದ್ದರೆನ್ನಲಾದ ಲಿಖಿತ ಹೇಳಿಕೆ ಈ ವಿವಾದಕ್ಕೆ ಕಾರಣವಾಗಿದೆ.

ಬಳಿಕ ಪ್ರತ್ಯೇಕ ಹೇಳಿಕೆಯೊಂದನ್ನು ಹೊರಡಿಸಿರುವ ಎನ್‌ಐಎ ಕುಮಾರ್ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದೆ.

ಶುಕ್ರವಾರ ಈ ವಿವಾದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಎನ್‌ಐಎ ವರಿಷ್ಠರು ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದು,ದಾಳಿಯಲ್ಲಿ ಪಾಕ್ ಪ್ರಜೆಗಳು ಭಾಗಿಯಾಗಿದ್ದರು ಎನುವುದು ಒಪ್ಪಿಕೊಂಡಿರುವ ಅಂಶವಾಗಿದೆ ಎನ್ನುವುದನ್ನು ದೃಢಪಡಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News