ಇನ್ನೂ 7 ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ

Update: 2016-06-04 18:25 GMT

ಹೊಸದಿಲ್ಲಿ,ಜೂ.4: ರೈಲ್ವೆ ಪ್ರಯಾಣಿಕರಿಗೆ ಇಂಟರ್ನೆಟ್ ಸೌಲಭ್ಯವನ್ನು ಅಬಾಧಿತವಾಗಿ ಒದಗಿಸುವ ಕ್ರಮವಾಗಿ, ಭಾರತೀಯ ರೈಲ್ವೆಯು ಶೀಘ್ರದಲ್ಲೇ ಅಲಹಾಬಾದ್ ಸೇರಿದಂತೆ ಇನ್ನೂ ಏಳು ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ಆರಂಭಿಸಲಿದೆ. ಪ್ರಸ್ತುತ ದೇಶದಲ್ಲಿ ಏಳು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯವನ್ನು ನೀಡಲಾಗುತ್ತಿದೆ. ಮುಂಬೈ ಸೆಂಟ್ರಲ್, ಭುವನೇಶ್ವರ, ಕಾಚೆಗುಡ, ವಿಜಯವಾಡ, ರಾಯ್‌ಪುರ, ಭೋಪಾಲ್, ಪಾಟ್ನಾ, ರಾಂಚಿ, ವಿಶಾಖಪಟ್ಟಣಂ, ಜೈಪುರ ಹಾಗೂ ಗುವಾಹಟಿ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಪಡೆದಿರುವ ರೈಲು ನಿಲ್ದಾಣಗಳಾಗಿವೆ. ಪುಣೆ, ಎರ್ನಾಕುಲಂ, ಲಕ್ನೋ, ಉಜ್ಜಯಿನಿ ಹಾಗೂ ಗೋರಖ್‌ಪುರ ನಿಲ್ದಾಣಗಳು ಶೀಘ್ರವೇ ವೈಫೈ ಸೌಲಭ್ಯವನ್ನು ಪಡೆಯಲಿವೆ.

ರೈಲ್ವೆ ಇಲಾಖೆಯ ಸಾರ್ವಜನಿಕರಂಗದ ಸಂಸ್ಥೆಯಾದ ರೈಲ್‌ಟೆಲ್, ಗೂಗ್ಲ್ ತಂತ್ರಜ್ಞಾನದ ಬೆಂಬಲದೊಂದಿಗೆ, ಈ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಹಾಗೂ ಅತಿ ವೇಗದ ಇಂಟರ್ನೆಟ್ ಜಾಲವನ್ನು ಸಂದರ್ಶಕರಿಗೆ ಹಾಗೂ ರೈಲು ಪ್ರಯಾಣಿಕರಿಗೆ ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News