ಐಫೋನಿನಲ್ಲಿ ಅಧಿಕ ಇಂಟರ್ನೆಟ್ ಖರ್ಚಾಗುತ್ತಿದೆಯೆ?

Update: 2016-06-05 08:53 GMT

ಸೆಲ್ಯುಲರ್ ನೆಟ್ವರ್ಕ್‌ಗಳು ಹಿಂದೆಂದಿಗಿಂತಲೂ ವೇಗವಾಗಿದ್ದರೂ ನೆಟ್ವರ್ಕ್ ಸೇವಾದಾರರು ಈಗಲೂ ಡಾಟಾದ ಮೇಲೆ ನಿಯಂತ್ರಣ ಹೊಂದಿದ್ದಾರೆ. ಕೆಲವೊಂದು ಮಿತಿ ಇರುವ ಮೊಬೈಲ್ ಕಾಂಟ್ರಾಕ್ಟ್ ಕಾರಣ ನೀವು ಎಷ್ಟೇ ಉತ್ತಮ ಸೇವೆ ಹೊಂದಿದ್ದರೂ ಡಾಟಾ ಖಾಲಿಯಾಗಿಬಿಡುತ್ತದೆ. ಡಾಟಾದ ಬಿಲ್ಲುಗಳು ಹೆಚ್ಚಾಗುತ್ತಿರುವುದು ನಿಮಗೆ ಕಷ್ಟವಾಗಿದ್ದರೆ, ನಿಮ್ಮ ಐಫೋನ್ ಆನ್ಲೈನಲ್ಲಿ ಮಾಡುವ ಕೆಲಸಗಳನ್ನು ಸೀಮಿತಗೊಳಿಸಿ.

► ಡಾಟಾ ಉಳಿಸುವ ಉತ್ತಮ ದಾರಿ ಎಂದರೆ ನೀವೇನು ಬಳಸುತ್ತಿದ್ದೀರಿ ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು. ಬಹಳಷ್ಟು ಆಪರೇಟರ್ ಡಾಟಾ ನಿಭಾಯಿಸಲು ಆಪ್ ಕೊಡುತ್ತಾರೆ. ಆಪನ್ನು ಡೌನ್ಲೋಡ್ ಮಾಡಿ ಲಾಗಿನ್ ಮಾಡಿ ನಿತ್ಯವೂ ಪರಿಶೀಲಿಸಿ. ಕೆಲವು ಆಪರೇಟರುಗಳು ಡಾಟಾ ನಿಧಾನವಾದಾಗ ನಿಮಗೆ ತಿಳಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಐಒಎಸ್ ಮಾನಿಟರನ್ನು ಸೆಟ್ಟಿಂಗ್>ಮೊಬೈಲ್ ಅಲ್ಲಿ ಕಂಡುಕೊಳ್ಳಿ. ಈ ವಿವರಗಳನ್ನು ಸ್ವಯಂಚಾಲಿತವಾಗಿ ರಿಸೆಟ್ ಮಾಡಲು ಸಾಧ್ಯವಿಲ್ಲ. ಪ್ರತೀ ತಿಂಗಳು ನೀವೇ ಸ್ವತಃ ವಿವರಗಳನ್ನು ರಿಸೆಟ್ ಮಾಡಬೇಕು.

►ನಿಮಗೆ ಅಗತ್ಯವಿಲ್ಲದ ಸಮಯದಲ್ಲೂ ಒಂದು ಆಪ್ ಡಾಟಾ ಬಳಸಬಾರದು ಎಂದುಕೊಂಡಿದ್ದೀರಿ. ಹಾಗಿದ್ದರೆ ಸೆಟ್ಟಿಂಗ್ ಹೋಗಿ ಕೆಳಗೆ ನೋಡಿ ನಿಮ್ಮ ಆಪ್ ಹುಡುಕಿ. ಅದರ ಮೇಲೆ ಮೊಬೈಲ್ ಡಾಟಾ ಡಿಸೇಬಲ್ ಮಾಡಿ ಕೇವಲ ವೈಫೈ ಆಕ್ಸೆಸ್ ಮಾತ್ರ ಪಡೆಯುವಂತೆ ಸೆಟ್ ಮಾಡಿ. ಹಾಗೆ ಮಾಡುವುದರಿಂದ ಆ ಆಪ್ 3ಜಿ ಮತ್ತು 4ಜಿಯಲ್ಲೂ ಕೆಲಸ ಮಾಡುವುದಿಲ್ಲ. ಸಾಮಾಜಿಕ ತಾಣಗಳಲ್ಲಿ ನಿಮ್ಮ ಸ್ಟೇಟಸ್ ಬದಲಿಸುವುದು, ಸಂದೇಶ ಪಡೆಯುವುದು ಮತ್ತು ವಾಟ್ಸಪ್ ಸಂದೇಶ ತಕ್ಷಣ ಪಡೆಯುವುದು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲವು ಆಟಗಳು ವಿಡಿಯೋ ಸ್ಟ್ರೀಮಿಂಗಿಗೆ ಡಾಟಾ ಬಳಸುವುದನ್ನು ತಡೆಯಲು ಮಾತ್ರ ಇದು ನೆರವಾಗಲಿದೆ.

► ಬಹಳಷ್ಟು ಐಒಎಸ್ ಬಳಸುವವರು ಫೇಸ್ ಬುಕ್ ಅನ್ನು ಪದೇ ಪದೇ ಪರೀಕ್ಷಿಸುತ್ತಾರೆ. ಅದು ನಿಮ್ಮ ಬ್ಯಾಟರಿ ಮತ್ತು ಮೊಬೈಲ್ ಡಾಟಾವನ್ನೂ ನುಂಗುತ್ತದೆ. ಫೇಸ್ ಬುಕ್ ಡಿಫಾಲ್ಟ್ ಆಗಿ ಆಟೋ ಲೋಡ್ ಆಗುತ್ತಲೇ ಇರುತ್ತದೆ. ನೀವು ನೋಡಿದರೂ ಇಲ್ಲದಿದ್ದರೂ ಸಹ. ಸೆಟ್ಟಿಂಗ್> ಅಕೌಂಟ್ ಸೆಟ್ಟಿಂಗ್> ವಿಡಿಯೋ ಮತ್ತು ಫೋಟೋಗಳಿಗೆ ಹೋಗಿ ಆಟಫ ಪ್ಲೇಯನ್ನು ವೈಫೈ ಕನೆಕ್ಷನಿಗೆ ಬದಲಿಸಿ. ಎಚ್ ಡಿ ಅಪ್ ಲೋಡಿಗೂ ಇದನ್ನು ಡಿಸೇಬಲ್ ಮಾಡಬಹುದು. ಇನಸ್ಟಗ್ರಾಂ ಕೂಡ ಆಟೋ ಲೋಡಿಂಗ್ ವಿಡಿಯೋ ಕಂಟೆಂಟನ್ನು ಹೊಂದಿದೆ.

► ಮನೋರಂಜನೆಗೆ ಯಾವ ಸ್ಟ್ರೀಮಿಂಗ್ ಸೇವೆ ಬಳಸಿದರೂ ಡಾಟಾ ಉಳಿಸಲಾಗದು. ಉತ್ತಮ ವಿಧಾನ ಅದನ್ನು ಬಳಸದಿರುವುದೇ ದಾರಿ. ಅದನ್ನು ಸ್ಥಳೀಯವಾಗಿ ನಿಮ್ಮ ಡಿವೈಸಿಗೆ ಉಳಿಸಿಕೊಳ್ಳಿ. ಅದಕ್ಕಾಗಿ ಸ್ವಲ್ಪ ಜಾಗ ಮಾಡಿ ಸೇವ್ ಮಾಡಿಕೊಂಡು ನೋಡಿ.

► ಸ್ಟ್ರೀಮಿಂಗ್ ಆಪ್ ಗಳನ್ನು ಡಾಟಾಗೆ ಡಿಸೇಬಲ್ ಮಾಡಬಹುದು. ಹೀಗೆ ಮಾಡುವುದರಿಂದ ನೀವು ಯಾವ ವೀಡಿಯೋ ಕೂಡ ನೋಡಲಾಗದು. ನೀವು ನಿಜವಾಗಿ ಏನಾದರೂ ಸ್ಟ್ರೀಮಿಂಗ್ ನೋಡಬೇಕಾದರೂ ಸಾಧ್ಯವಾಗುವುದಿಲ್ಲ.

► ಸಫಾರಿ ಎನ್ನುವುದು ವೆಬ್ ಅಲ್ಲಿ ಉತ್ತಮ ಬ್ರೌಸರ್. ಇದನ್ನು ಕಡಿಮೆ ಡಾಟಾ ಬಳಕೆಯಾಗಿ ಬದಲಿಸಿಲ್ಲ. ಇದಕ್ಕೆ ಐಒಎಸ್ ಬ್ರೌಸರುಗಳಲ್ಲಿ ಕೆಲವು ಪರ್ಯಾಯಗಳಿವೆ. ಕಡಿಮೆ ಲಕ್ಷಣಗಳಿರುವ ಹಗುರ ಪುಟವನ್ನು ನೋಡಬಹುದು. ಹಾಗೆ ಮೊಬೈಲ್ ಡಾಟಾ ಉಳಿಸಬಹುದು. ಒಪೆರಾ ಮಿನಿಯಲ್ಲಿ ಈ ಲಕ್ಷಣ ಹಿಂದಿನಿಂದಲೂ ಇದೆ. ಅದು ಶೇ.90 ಡಾಟಾ ಉಳಿಸುತ್ತದೆ. ಒಪೆರಾಟರ್ಬೋ ಮೋಡಲ್ಲಿ ಹೆಚ್ಚು ಡಾಟಾ ಬಳಸಬಹುದು. ಗೂಗಲ್ ಕ್ರೋಮಲ್ಲೂ ಐಒಎಸ್ ಗೆ ಲಕ್ಷಣಗಳಿವೆ. ಸೆಟ್ಟಿಂಗ್ > ಡಾಟಾ ಸೇವರ್ ಮೆನುಗೆ ಹೋಗಿ. ಅದು ಡಾಟಾ ಕಂಪ್ರೆಶನ್ ಪ್ರಾಕ್ಸಿ ಬಳಸುತ್ತದೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News