ಕೇರಳಕ್ಕೆ ಮುಂಗಾರು

Update: 2016-06-05 14:10 GMT

ತಿರುವನಂತಪುರ: ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲು ಪ್ರಶಸ್ತ ವಾತಾವರಣ ನಿರ್ಮಾನವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.
ಪಶ್ಚಿಮ ಬಂಗಾಳ, ಸಿಕ್ಕಿಂ, ಆಂಧ್ರದ ಕರಾವಳಿಯಲ್ಲಿ ಹಾಗೂ ಛತ್ತೀಸ್‌ಗಢ, ಅಸ್ಸಾಂ, ಮೇಘಾಲಯ ಮತ್ತು ಕೇರಳದ ಕೆಲವೆಡೆಗಳಲ್ಲಿ ತುಂತುರು ಹಾಗೂ ಭಾರಿ ಮಳೆ ಬಿದ್ದಿದೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.

ಕೇರಳದಲ್ಲಿ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಲಕ್ಷದೀಪ, ಕೇರಳ ಹಾಗೂ ಮಂಗಳೂರಿನ 14 ಹಮಾವಾನ ಕೇಂದ್ರಗಳ ಮಾಹಿತಿಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.

ಈ 14 ಕೇಂದ್ರಗಳ ಪೈಕಿ ಶೇಕಡ 60 ಭಾಗದಲ್ಲಿ ಮೇ 10ರ ಬಳಿಕ ಇದುವರೆಗೆ 2.5 ಮಿಲೀಮೀಟರ್‌ಗಿಂತ ಅಧಿಕ ಮಳೆ ಬಿದ್ದಿದೆ. ಅಥವಾ ನಿರಂತರವಾಗಿ ಎರಡಕ್ಕಿಂತ ಹೆಚ್ಚು ದಿನ ಮಳೆ ಬಿದ್ದಿದೆ. ಗಾಳಿ ಹಾಗೂ ಮೋಡಗಟ್ಟುವಿಕೆ ಸಮರ್ಪಕವಾದರೆ ಇನ್ನೆರಡು ದಿನಗಳಲ್ಲಿ ಮುಂಗಾರು ಮಾರುತ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News