ವಿಧಾನಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಜಯ, ಜೆಡಿಎಸ್‌ಗೆ ಮುಖಭಂಗ

Update: 2016-06-10 12:56 GMT
ಅಲ್ಲಂ ವೀರಭದ್ರಪ್ಪ

ಬೆಂಗಳೂರು, ಜೂ.10: ವಿಧಾನ ಪರಿಷತ್‌ಗೆ ಏಳು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಸಂಜೆ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷ ಎಲ್ಲ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ 2 ಹಾಗೂ ಜೆಡಿಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
 ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಆರ್‌ಬಿ ತಿಮ್ಮಾಪುರ, ವೀಣಾ ಅಚ್ಚಯ್ಯ ಹಾಗೂ ರಿಝ್ವಾನ್ ಅರ್ಷದ್ ಜಯ ಸಾಧಿಸಿದರೆ, ಬಿಜೆಪಿಯಿಂದ ವಿ.ಸೋಮಣ್ಣ ಹಾಗೂ ಲೇಹರ್ ಸಿಂಗ್ ಜಯ ಸಾಧಿಸಿದರು. ಲೇಹರ್ ಸಿಂಗ್ 2ನೆ ಪ್ರಾಶಸ್ತ್ಯ ಮತಗಳಿಂದ ಜಯ ಗಳಿಸಿದರು.
ಜೆಡಿಎಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ ಒಂದನೆ ಅಭ್ಯರ್ಥಿ ಕೆ.ವಿ. ನಾರಾಯಣ ಸ್ವಾಮಿ ಜಯ ಸಾಧಿಸಿದರೆ, ಎರಡನೆ ಅಭ್ಯರ್ಥಿ ಡಾ. ವೆಂಕಟಪತಿ ಸೋತಿದ್ದಾರೆ.

ರಿಝ್ವಾನ್ ಅರ್ಷದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News