15 ಸಾವಿರದೊಳಗಿನ ಐದು ಆಂಡ್ರಾಯ್ಡ್ ಫೋನ್ ಗಳು
ಮಾರುಕಟ್ಟೆಯಲ್ಲಿ 15 ಸಾವಿರದೊಳಗೆ ಹಲವು ಉತ್ತಮ ಆಯ್ಕೆಗಳು ನಿಮಗೆ ಸಿಗುತ್ತವೆ. ಕಾಲ ಕಾಲಕ್ಕೆ ಟಾಪ್ ಮೊಡೆಲ್ ಗಳು ಬದಲಾಗುತ್ತಲೇ ಇರುತ್ತವೆ. ಈಗ ಮಾರುಕಟ್ಟೆಯಲ್ಲಿರುವ ಟಾಪ್ ಐದು ಆಂಡ್ರಾಯ್ಡಾ ಫೋನ್ ಗಳ ವಿವರ ಇಲ್ಲಿದೆ.
1. ಕ್ಸಿಯೋಮಿ ರೆಡಿಮಿ ನೋಟ್ 3
ಬೆಲೆ ರೂ. 9,999 (16 ಜಿಬಿ) ಮತ್ತು ರು. 11,999 (32 ಜಿಬಿ)
ಇದು ಕ್ಸಿಯೋಮಿ ಈ ವರ್ಷ ಬಿಡುಗಡೆ ಮಾಡಿರುವ ಫೋನ್ ಗಳು. ರೆಡಿಮಿ ನೋಟ್ 3 ಮೆಟಲ್ ಬಾಡಿ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದೆ. ಪ್ರೀಮಿಯಂ ಫಿನಿಶ್ ಮತ್ತು ದೋಷವಿಲ್ಲದ ಕರ್ವ್ ಇದರ ವಿಶೇಷವಾಗಿದ್ದು ಹಿಡಿಯಲು ಸುಲಭ. 16 ಮೆಗಾಫಿಕ್ಸಲ್ ಫ್ರಂಟ್ ಮತ್ತು 2.0 ರೇರ್ ಕ್ಯಾಮರಾ ಇದರ ವಿಶೇಷ. ಟು ಟೋನ್ ಡ್ಯುಯಲ್ ಎಲ್‌ಇಡಿ ಫ್ಲಾಷ್ ಇದೆ. ಬೇಸ್ ಮಾಡೆಲ್ 10 ಸಾವಿರದ ಒಳಗೆ ಇರುವ ಒಂದೇ ಫೋನ್ ಇದು. 16 ಜಿಬಿಯಲ್ಲಿ 2 ಜಿಬಿ ರ್ಯಾಮ್ ಇದ್ದರೆ 32 ಜಿಬಿಯಲ್ಲಿ 3 ಜಿಬಿ ರ್ಯಾಮ್ ಇದೆ.
2. ಮೋಟೋ ಜಿ4 ಪ್ಲಸ್
ಬೆಲೆ ರೂ. 13,499 (16 ಜಿಬಿ) ಮತ್ತು ರು. 14,499 (32 ಜಿಬಿ)
ಮೋಟೋ ಜಿ ಸ್ಮಾರ್ಟ್ ಫೋನ್ ಗಳ ನಾಲ್ಕನೇ ಆವೃತ್ತಿ ಇದು. ಜಿ4 ಮತ್ತು ಜಿ4 ಪ್ಲಸ್ ಇದೆ. ಮೊದಲನೆಯದರಲ್ಲಿ ಫಿಂಗರ್ ಪ್ರಿಂಟ್ ಸ್ಕಾನರ್ ಇಲ್ಲ. ಮತ್ತೊಂದರಲ್ಲಿದೆ. ಭಾರತದಲ್ಲಿ ಜಿ4 ಪ್ಲಸ್ ಮಾತ್ರ ಲಭ್ಯ. ಇದರ ಆಂಡ್ರಾಯ್ಡಾ ಅನುಭವ ಚೆನ್ನಾಗಿದೆ. ರೆಡಿಮಿ ನೋಟ್ 3 ತರಹ ಈ ಡ್ಯುಯಲ್ ಸಿಮ್ ಫೋನ್ ಅಲ್ಲಿ ಹೈಬ್ರಿಡ್ ಸ್ಲಿಮ್ ಸ್ಲಾಟ್ ಇಲ್ಲ. ಎರಡು ಸಿಮ್ ಕಾರ್ಡ್ ಮತ್ತು ಒಂದು ಮೈಕ್ರೋ ಎಸ್‌ಡಿ ಕಾರ್ಡ್ ಜೊತೆಯಾಗಿ ಬಳಸಬಹುದು. 16 ಜಿಬಿಯಲ್ಲಿ 2 ಜಿಬಿ ರ್ಯಾಮ್ ಇದ್ದರೆ 32 ಜಿಬಿಯಲ್ಲಿ 3 ಜಿಬಿ ರ್ಯಾಮ್ ಇದೆ.
3. ಲಿನೊವೊ ZUK Z1
ಬೆಲೆ: ರೂ. 13,499
ಇದು ಲಿನೊವೊ ಸರಣಿಯ ಸ್ಮಾರ್ಟ್ ಫೋನಲ್ಲ. ಭಾರತಕ್ಕೆ ಬಂದ ಅವರ ಮೊದಲ ಫೋನ್ ಇದು. ಇದರಲ್ಲಿ 64 ಜಿಬಿ ಸಂಗ್ರಹವಿರುವುದೇ ದೊಡ್ಡ ಲಕ್ಷಣ. 15 ಸಾವಿರದೊಳಗೆ ಇಷ್ಟು ಸಂಗ್ರಹ ಅವಕಾಶ ಬೇರೆ ಫೋನಲ್ಲಿ ಸಿಗದು. ಈ ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಅವಕಾಶ ಹೊಂದಿಲ್ಲ. ಫಿಂಗರ್ ಪ್ರಿಂಟ್ ಸೆನ್ಸರ್ ಇದೆ ಮತ್ತು 4100 mAh ಬ್ಯಾಟರಿಯಿದೆ.
4. ಯು ಯುನಿಕಾರ್ನ್
ಬೆಲೆ: ರೂ. 13,499
ಈ ಫೋನಲ್ಲಿ ಉತ್ತಮ ಲುಕ್ ಮತ್ತು ಪ್ರದರ್ಶನ ಎರಡೂ ಇದೆ. ತಮ್ಮ ಸ್ಪರ್ಧಿಗಳಿಗಿಂತ ಹೆಚ್ಚು ಬರುವ 4000 mAh ಬ್ಯಾಟರಿ ಹೊಂದಿದೆ. ಕ್ಯಾಮರಾ ಚೆನ್ನಾಗಿದ್ದರೂ ಇತರ ಸ್ಪರ್ಧಿಗಳ ಸಮಕ್ಕಿಲ್ಲ. ಮೊಬೈಲ್ ಫೋಟೋಗ್ರಫಿ ಇಷ್ಟವಿದ್ದವರಿಗೆ ಇದು ಸಂತೃಪ್ತಿ ನೀಡದು.
5. ಲಿಇಕೋಲಿ 1ಎಸ್
ಬೆಲೆ: ರೂ.10,999
ಪ್ರೀಮಿಯಂ ವಿನ್ಯಾಸ ಹೊಂದಿರುವ ಇದು ಬಜೆಟ್ ವಿಭಾಗದಲ್ಲಿರುವ ಕೆಲವೇ ಫೋನ್. ಪೂರ್ಣ ಲೋಹದ ವಿನ್ಯಾಸ ಹೊಂದಿದೆ. ಅಲ್ಟ್ರಾ ಥಿನ್ ಬೇಸಲ್ ಇದೆ. ಕಂಪೆನಿ ಇತ್ತೀಚೆಗೆ ಲಿ ಇಕೋ ಲಿ 2 ಪರಿಚಯಿಸಿದೆ. ಆದರೆ ಇನ್ನೂ ಮಾರಾಟಕ್ಕೆ ಇಟ್ಟಿಲ್ಲ. ಲಿ2 ಜುಲೈನಿಂದ ದೇಶದಲ್ಲಿ ಲಭ್ಯವಿದೆ.
ಕೃಪೆ: www.news18.com