ಕಲಾಭವನ್ ಮಣಿ ಮರಣ ಸಿಬಿಐ ತನಿಖೆಗೆ

Update: 2016-06-12 06:22 GMT

ತಿರುವನಂತಪುರಂ, ಜೂನ್12: ನಟ ಕಲಾಭವನ್ ಮಣಿಯ ಮರಣ ಕುರಿತತನಿಖೆಯನ್ನು ಸಿಬಿಐಗೆ ವಹಿಸಲು ಸರಕಾರ ತೀರ್ಮಾನಿಸಿದೆ. ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರು ಸರಕಾರಕ್ಕೆ ನೀಡಿದ ಶಿಫಾರಸಿನಂತೆ ಸರಕಾರ ಈ ನಿರ್ಧಾರವನ್ನು ತಳೆದಿದೆ. ಮಣಿಯ ಸಹೋದರ ಆರ್.ಎಲ್.ವಿ.ರಾಮಕೃಷ್ಣನ್ ಸಿಬಿಐ ತನಿಖೆ ನಡೆಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಮನವಿ ಸಮರ್ಪಿಸಿದ್ದರು.

ಮಣಿಯ ಸಾವಿಗೆ ಸಂಬಂಧಿಸಿದಂತೆ ಅವರ ಕುಟುಂಬದವರು ವ್ಯಕ್ತಪಡಿಸುತ್ತಿರುವ ಸಂದೇಹಗಳು ಹಾಗೂ ಮಣಿಯೋರ್ವ ಸಾರ್ವಜನಿಕವಾಗಿ ಪ್ರಸಿದ್ಧ ವ್ಯಕ್ತಿ ಎಂಬ ಕಾರಣದಿಂದ ತನಿಖೆಯನ್ನು ಸಿಬಿಐಗೆ ವಹಿಸಲು ಸರಕಾರ ಶಿಫಾರಸು ಮಾಡಿದೆ. ಸಿಬಿಐಗೆ ವಹಿಸುವ ಕುರಿತ ಶಿಫಾರಸನ್ನು ಗೃಹ ಕಾರ್ಯದರ್ಶಿ ನಳಿನಿ ನೆಟ್ಟೊ ಕೂಡಾ ಬೆಂಬಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಿದರು. ಸೋಮವಾರ ಈ ವಿಷಯವನ್ನು ಕೇಂದ್ರ ಸರಕಾರಕ್ಕೆ ತಿಳಿಸಲು ರಾಜ್ಯಸರಕಾರ ಮುಂದಾಗಿದೆ. ಕಲಾಭವನ್ ಮಣಿಯ ಆಂತರಿಕ ಅವಯವಗಳಲ್ಲಿ ಕೀಟನಾಶಕದ ಅಂಶ ಇತ್ತು ಎಂಬುದು ಕಾಕ್ಕನಾಟ್ಟೆ ಲ್ಯಾಬ್ ಪರೀಕ್ಷೆಯಲ್ಲಿಯೂ ಪತ್ತೆಯಾಗಿತ್ತು. ನಂತರ ಹೈದರಾಬಾದ್ ಲ್ಯಾಬ್‌ನಲ್ಲಿ ಕೀಟನಾಶಕದ ಅಂಶವಿದ್ದುದನ್ನು ದೃಢೀಕರಿಸಲಾಗಿತ್ತು. ಮಣಿಮೃತರಾಗಿ ಮೂರು ತಿಂಗಳಾದರೂ ತನಿಖೆ ಎತ್ತಲೂ ಸಾಗದ ಹಿನ್ನೆಲೆಯಲ್ಲಿ ಸಹೋದರ ರಾಮಕೃಷ್ಣನ್ ಸಿಬಿಐ ತನಿಖೆ ನಡೆಸಬೇಕೆಂದುಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News