ಯು.ಟಿ. ಖಾದರ್‌ಗೆ ಸೋನಿಯಾ ಶ್ಲಾಘನೆ

Update: 2016-06-18 13:22 GMT

ಹೊಸದಿಲ್ಲಿ,ಜೂ.18:ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯ ಶ್ಲಾಘನೆಯ ಹಿನ್ನೆಲೆಯಲ್ಲಿ  ಆರೋಗ್ಯ ಸಚಿವ ಯು.ಟಿ.ಖಾದರ್‌  ಸಚಿವ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ತಯಾರಿಸಿದ್ದ ಪಟ್ಟಿಯಂತೆ ಯು.ಟಿ. ಖಾದರ‍್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಎನ್‌.ಎ.ಹ್ಯಾರಿಸ್‌ ಅವರನ್ನು ಸೇರಿಸಿಕೊಳ್ಳುವುದೆಂದು ನಿರ್ಧಾರವಾಗಿತ್ತು. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಟ್ಟಿ ಸಲ್ಲಿಸಿದಾಗ ಖಾದರ‍್ ಅವರಂತಹ ಕ್ರೀಯಾಶೀಲ ಸಚಿವರನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದೆಂದು ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿಗೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News