ಕಿಮ್ಮನೆ ರತ್ನಾಕರ್ ಅವರ ಪ್ರತಿಕ್ರಿಯೆಯನ್ನು ಸ್ವಲ್ಪ ನೋಡಿ ಕಲಿತುಕೊಳ್ಳಬಾರದೇ ?

Update: 2016-06-21 12:31 GMT

ಸಚಿವ ಸಂಪುಟ ಪುನರ್ರಚನೆಯಲ್ಲಿ ಮಂತ್ರಿ ಪದವಿ ಕಳಕೊಂಡ ಕೆಲವರು ನೀರಿನಿಂದ ಹೊರಬಿದ್ದ ಮೀನಿನಂತೆ ಪರದಾಡುತ್ತಿರುವುದನ್ನು ನೋಡಿ ಕನ್ನಡಿಗರು ತಲೆ ತಗ್ಗಿಸಿ ನಿಂತಿದ್ದಾರೆ. ಅಂತಹ ಸಂದರ್ಭದಲ್ಲೇ ಮಂತ್ರಿ ಪದವಿ ಕಳಕೊಂಡಿರುವ ಕಿಮ್ಮನೆ ರತ್ನಾಕರ್ ಅವರು ನೀಡಿರುವ ಪ್ರತಿಕ್ರಿಯೆ ಪ್ರತಿಯೊಬ್ಬ ರಾಜಕಾರಣಿಗೆ ಮಾದರಿಯಾಗಿದೆ. ಇಡೀ ಕನ್ನಡ ನಾಡಿನ ಮಾನ ಉಳಿಸಿದೆ. ನಮ್ಮಲ್ಲೂ ಇಂತಹ ವಿವೇಕದ, ದೊಡ್ಡ ಮನಸ್ಸಿನ, ಪ್ರಾಮಾಣಿಕ ಕಾಳಜಿಯ ರಾಜಕಾರಣಿಗಳು ಇದ್ದಾರೆ ಎಂದು ದೇಶಕ್ಕೆ ತೋರಿಸುವಂತಹ ಪ್ರತಿಕ್ರಿಯೆ ನೀಡಿ ಎಲ್ಲರ ಮನಗೆದ್ದಿದ್ದಾರೆ ಕಿಮ್ಮನೆ ಅವರು ! 

ಅವರ ಇತ್ತೀಚಿನ  ಫೇಸ್ ಬುಕ್ ಪೋಸ್ಟ್ ಓದಿ : 

2008 ರ ಚುನಾವಣೆ ಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕನಾಗಿ ನಾನೊಬ್ಬನೆ ಗೆಲುವು ಸಾಧಿಸಿದ್ದೆ ಆಘಾತಕಾರಿ ಹಾಗು ಅಚ್ಚರಿ ಎಂಬಂತೆ ನನ್ನ ಪಕ್ಕದ ಕ್ಷೇತ್ರ ಸಾಗರದಿಂದ ಸ್ಪರ್ದಿಸಿದ್ದ ಶ್ರೀ ಕಾಗೋಡು ತಿಮ್ಮಪ್ಪನವರು ಸೋಲನ್ನು ಅನುಭವಿಸಿದ್ದರು..ಅನುಭವಿ ಹಾಗು ಸಮಾಜವಾದಿ ಸಿದ್ದಾಂತದಿಂದ ಬಂದಂತಹ ಶ್ರೀಯುತರ ಬಳಿ ನಾನು ಭಿನ್ನಹಿಸಿದ್ದೆ ನಿಮ್ಮಂತಹ ಮುತ್ಸದ್ದಿಗಳು ಸದನದ ಒಳಗಿರ ಬೇಕು ಆದ್ದರಿಂದ ನೀವು ಒಪ್ಪಿಗೆ ನೀಡಿದರೆ ನಾನು ನಿಮಗಾಗಿ ನನ್ನ ಸ್ಥಾನ ಬಿಟ್ಟುಕೊಡಲು ಸಿದ್ದನಿದ್ದೇನೆ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧೆಮಾಡಿ ಎಂದರೆ ಶ್ರೀಯುತರು ಒಪ್ಪಿಕೊಳ್ಳಲಿಲ್ಲ ಪ್ರೀತಿ ಯಿಂದಲೇ ಗದರಿ ನಿರಾಕರಿಸಿದ್ದರು.ಕಳೆದ ಬಾರಿ ಚುನಾವಣೆಯಲ್ಲಿ ಶ್ರೀಯುತರು ಬಾರಿ ಅಂತರದಿಂದ ಭರ್ಜರಿ ಜಯಗಳಿಸಿದ್ದರು..ಶ್ರೀಯುತರು ಸಭಾಪತಿಯಾಗಿ ಸಮರ್ಥವಾಗಿ ಮಾರ್ಗದರ್ಶನ ನೀಡಿದ್ದರು ಈಗ ಅವರಿಗೆ ಸಚಿವರಾಗುವ ಅವಕಾಶ ಬಂದಿದೆ ಸಮಸ್ತ ರಾಜಕಾರಣಿಗಳಿಗೆ ಸಂದ ಗೌರವವಿದು..ಐದು ಬಾರಿ ಶಾಸಕರಾಗಿ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಿ ವ್ಯವಸ್ಥೆ ಹಾಗು ಆಡಳಿತದ ಬಗ್ಗ ಸುಧೀರ್ಘ ಅನುಭವ ಹೊಂದಿರುವ ಇವರಿಗೆ ಸಚಿವ ಸ್ಥಾನ ನೀಡಿ ಸಮಾಜವಾದಿ ಸಿದ್ದಾಂತವನ್ನು ಜೀವಂತವಾಗಿರಿದ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ವರಿಷ್ಠರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವೆ..ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವುದು ನನ್ನ ಭಾಗ್ಯವೇ ಸರಿ..ಮನಸ್ಸಿನಲ್ಲೆಲ್ಲೋ ಅನುಭವಿ ಹಿರಿಯರ ಅವಕಾಶವನ್ನು ನಾನು ಪರೋಕ್ಷವಾಗಿ ಅನುಭವಿಸಿದ ಅಳುಕು ಇತ್ತು ಈಗ ಸರಿಯಾಗಿದೆ..ಅವರ ಜಾಗದಲ್ಲಿ ನನ್ನನ್ನು ಕಲ್ಪಿಸುವುದು ನನ್ನ ಮೂರ್ಖತನವಾಗಬಹುದು ..ಅವರ ಎದುರು ಅಧಿಕಾರ ಬಯಸುವುದು ಉಧ್ಧಟ್ಟ ತನ ಹಾಗು ಅವಕಾಶವಾದಿಯಾಗಿಸಬಹುದು..ಈ ಇಳಿಯ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ಹಾಗು ಧೃಡ ಮನಸ್ಥಿತಿ ಅಪರೂಪ ..ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪನವರ ಕಾರ್ಯವೈಖರಿ ಬಗ್ಗೆ ಯಾವುದೇ ಅನುಮಾನ ಬೇಡ..ಅಭಿಮಾನವಿರಲಿ..ಶುಭ ಹಾರೈಕೆಗಳು ಕಾಗೋಡು ಜಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News