ಆಹಾರದಲ್ಲಿ ಪೊಟ್ಯಾಶಿಯಂ ಬ್ರೊಮೇಟ್ ಬಳಕೆಗೆ ನಿಷೇಧ

Update: 2016-06-21 14:57 GMT

ಹೊಸದಿಲ್ಲಿ,ಜೂ.21: ಬ್ರೆಡ್‌ನಲ್ಲಿರುವ ಪೊಟ್ಯಾಶಿಯಂ ಬ್ರೊಮೇಟ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ)ವು ತನ್ನ ಅಧ್ಯಯನ ವರದಿಯಲ್ಲಿ ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಖಾದ್ಯ ವಸ್ತುಗಳಲ್ಲಿ ಅದರ ಬಳಕೆಯನ್ನು ಸರಕಾರವು ನಿಷೇಧಿಸಿದೆ.

ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ(ಎಫ್‌ಎಸ್‌ಎಸ್‌ಐ) ಪೊಟ್ಯಾಶಿಯಂ ಬ್ರೊಮೇಟ್‌ನ್ನು ನಿಷೇಧಿಸಿದೆ ಎಂದು ಅದರ ಸಿಇಒ ಪವನ ಕುಮಾರ ಅಗರವಾಲ್ ತಿಳಿಸಿದರು. ಪೊಟ್ಯಾಶಿಯಂ ಅಯೋಡೇಟ್ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ವೈಜ್ಞಾನಿಕ ಸಮಿತಿಯೊಂದಕ್ಕೆ ಸೂಚಿಸಲಾಗಿದೆ ಎಂದರು. ಪೊಟ್ಯಾಶಿಯಂ ಅಯೋಡೇಟ್‌ನ್ನೂ ಆಹಾರಕ್ಕೆ ಹೆಚ್ಚುವರಿಯಾಗಿ ಸೇರಿಸಲಾಗುತ್ತಿದ್ದು, ಅದೂ ಕ್ಯಾನ್ಸರ್ ಜನಕವೆನ್ನಲಾಗಿದೆ.

ಪಾವ್ ಮತ್ತು ಬನ್‌ಗಳು ಸೇರಿದಂತೆ ಸಾಮಾನ್ಯವಾಗಿ ಲಭ್ಯವಿರುವ 38 ಬ್ರಾಂಡ್‌ಗಳ ಬ್ರೆಡ್‌ಗಳಲ್ಲಿ ಪೈಕಿ ಶೇ.84ರಲ್ಲಿ ಪೊಟ್ಯಾಶಿಯಂ ಬ್ರೊಮೇಟ್ ಮತ್ತು ಪೊಟ್ಯಾಶಿಯಂ ಅಯೋಡೇಟ್ ಇರುವುದನ್ನು ಸಿಎಸ್‌ಇ ಅಧ್ಯಯನವು ಪತ್ತೆ ಹಚ್ಚಿತ್ತು. ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News