ಕಪ್ಪು ಹಣ ತರಲು ವಿಫಲವಾಗಿದ್ದಕ್ಕೆ ಮೋದಿ ಸರ್ಕಾರ ಕಾರಣ ಹೇಳಬೇಕು : ನ್ಯಾ. ಸಂತೋಷ್ ಹೆಗ್ಡೆ

Update: 2016-06-22 05:27 GMT

 ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಶ್ರಮ ಹಾಕಿದರೂ ಅಚ್ಛೇದಿನ್ ತರಲು ಸಾಧ್ಯವಾಗಿಲ್ಲ ಎಂದು ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಕಪ್ಪು ಹಣವನ್ನು ವಾಪಸು ತರುವ ಚುನಾವಣಾ ಆಶ್ವಾಸನೆಯನ್ನು ಪೂರೈಸಲು ಬಿಜೆಪಿ ನೇತೃತ್ವದ ಎನ್‌ಡಿಎಗೆ ಏಕೆ ಸಾಧ್ಯವಾಗಿಲ್ಲ ಎಂದು ಅವರು ಜನರಿಗೆ ತಿಳಿಸಬೇಕು ಎಂದು ಹೆಗ್ಡೆ ಹೇಳಿದ್ದಾರೆ.

ಅವರು ಹೇಳಿದ್ದನ್ನು ಮಾಡಿದ್ದಾರೆ ಎಂದು ನಾನು ಹೇಳಲಾರೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಭ್ರಷ್ಟಾಚಾರದ ನೆರಳು ಕಾಣುವುದಿಲ್ಲ. ಈವರೆಗೆ ಪ್ರಧಾನಿ ಬಗ್ಗೆ ಹೇಳುವುದಾದರೆ ಅವರು ಸಾಕಷ್ಟು ಪ್ರಯತ್ನ ಹಾಕಿದರೂ ಭರವಸೆ ನೀಡಿದ ಒಳ್ಳೆಯ ದಿನಗಳನ್ನು ಇನ್ನೂ ತರಲು ಸಾಧ್ಯವಾಗಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ. ಸರ್ಕಾರದ ಎರಡು ವರ್ಷಗಳನ್ನು ವಿಶ್ಲೇಷಣೆ ಮಾಡಿದ ಭಾರತದ ಮಾಜಿ ಸಾಲಿಸಿಟರ್ ಜನರಲ್ ಈ ತಿಂಗಳ ಆರಂಭದಲ್ಲಿ ಮೋದಿ ಅಮೆರಿಕದ ಕಾಂಗ್ರೆಸ್ ನಲ್ಲಿ ಮಾಡಿದ ಭಾಷಣ ಚೆನ್ನಾಗಿತ್ತು ಎಂದರು. ವಿದೇಶಗಳ ಜೊತೆಗೆ ಸಂಬಂಧ ವೃದ್ಧಿಯಾಗಿದೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಬದಲಾವಣೆಯಾಗಿದೆ. ಆದರೆ ಬಿಜೆಪಿ ವಿದೇಶದಿಂದ ಕಪ್ಪುಹಣ ವಾಪಸು ತರುವ ಭರವಸೆ ಈಡೇರಿಸಿಲ್ಲ. ಅವರು ಕಪ್ಪು ಹಣ ವಾಪಾಸು ತರಬೇಕು. ಅದಕ್ಕೆ ಏನು ತಡೆಯಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಜನರಿಗೆ ಅವರು ಕಾರಣ ಹೇಳಬೇಕು. ಅವರು ಸ್ವಿಸ್ ಸರ್ಕಾರವನ್ನು ಸಂಪರ್ಕಿಸಿದ್ದಾರೆಯೇ? ಸ್ವಿಸ್ ಸರ್ಕಾರ ಮಾಹಿತಿ ಕೊಡಲು ನಿರಾಕರಿಸಿದೆಯೇ? ಅದು ಕೇವಲ ಚುನಾವಣಾ ಪ್ರಣಾಳಿಕೆಯಾಗಿರಲು ಸಾಧ್ಯವಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರದ ಬಗ್ಗೆಯೂ ಅಣ್ಣಾ ಹಝಾರೆ ಚಳವಳಿಯಲ್ಲಿ ಪ್ರಮುಖ ಶಕ್ತಿಯಾಗಿದ್ದ ಹೆಗ್ಡೆ ಮಾತನಾಡಿದ್ದಾರೆ. ಆಪ್ ಸರ್ಕಾರವೂ ಭ್ರಷ್ಟಾಚಾರ ತಡೆಯುವುದು ಮತ್ತು ಉತ್ತಮ ಆಡಳಿತ ಪ್ರೋತ್ಸಾಹಿಸುವಲ್ಲಿ ಕೆಲಸ ಮಾಡಿದೆ ಎಂದು ಅನಿಸುವುದಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ. ಇಬ್ಬರು ಸಚಿವರ ಬಗ್ಗೆ ಆರೋಪವಿದೆ.  ಇತರ ಮೂವರ ಮೇಲೆ ಪೊಲೀಸ್ ದೂರು ದಾಖಲಾಗಿದೆ ಎಂದು ಮಾಜಿ ಕರ್ನಾಟಕ ಲೋಕಾಯುಕ್ತ ಹೀಗಳೆದರು.
ಇಂದಿನ ಸಮಾಜ ಹಣ ಮತ್ತು ಅಧಿಕಾರದ ಶಕ್ತಿಯಲ್ಲೇ ನಡೆಯುತ್ತದೆ. ನಾವು 1950ರಿಂದ 1960ರ ಸಮಾಜವನ್ನು ಕಟ್ಟಬೇಕಿದೆ. ನೈತಿಕ ಮೌಲ್ಯಗಳು ಕುಸಿದಿವೆ. ಅದೇ ನಮ್ಮ ದೇಶದ ದೊಡ್ಡ ಸಮಸ್ಯೆ ಎಂದು ಅವರು ಅಭಿಪ್ರಾಯಪಟ್ಟರು. ಕೇಜ್ರಿವಾಲ್ ಇತರರ ಮೇಲೆ ಬೊಟ್ಟು ಮಾಡುತ್ತಾರೆ. ಅವರು 52 ದಿನಗಳಲ್ಲಿ ಏನು ಮಾಡಿದ್ದಾರೆ? 49 ದಿನ ಅವರು ರಾಜ್ ಪಥ್ ನಲ್ಲಿ ಪ್ರತಿಭಟನೆ ನಡೆಸಿ ಕಳೆದರು. ಇದು ಸರ್ಕಾರ ನಡೆಸುವ ರೀತಿಯೆ? ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡದೆ ಇದ್ದುದಕ್ಕೆ ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರ ರಾಜ್ ಪಥ್ ನಿಂದ ಕೆಲಸ ಮಾಡುವುದಿಲ್ಲ. ಅವರ ಕ್ರಮವನ್ನಷ್ಟೇ ನಾನು ಟೀಕಿಸುತ್ತಿದ್ದೇನೆ ವಿನಾ ವೈಯಕ್ತಿಕವಾಗಿ ನನಗೆ ಅವರ ಮೇಲೆ ಯಾವುದೇ ಭಾವನೆಗಳಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News