ನಿಮ್ಮ ವೈಫೈ ನಿಧಾನ ಇದೆಯೇ?
ಈಗ ವೈಫೈ ಸಾಮಾನ್ಯ ಎಲ್ಲರ ಮನೆಯಲ್ಲಿರುವ ವಸ್ತುವಾಗಿದೆ. ನಮ್ಮ ಮಂಚದ ಬಳಿಗೇ ಇಂಟರ್ನೆಟ್ ತರುವ ವಸ್ತು ಇದು. ಇತ್ತೀಚೆಗಿನ ದಿನಗಳಲ್ಲಿ ಇದು ಅನಿವಾರ್ಯವೆನಿಸಿದೆ. ವೈಫೈ ನಿಧಾನವಾದಾಗ ಬಹಳ ಕಷ್ಟವೆನಿಸುತ್ತದೆ. ವೈಫೈನ್ನೇ ಆಧರಿಸಿರುವಾಗ ವೇಗ ಅಗತ್ಯ. ದುರದೃಷ್ಟವಶಾತ್ ವೇಗವನ್ನು ಯಾವಾಗಲೂ ಕಂಡುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಅಪರಿಚಿತ ಕಾರಣಗಳಿಂದ ವೈಫೈ ಕಟ್ ಆಗಬಹುದು.ಏನಾದರೂ ತಪ್ಪಾದಾಗ ಅದನ್ನು ಸರಿಪಡಿಸುವುದು ತಿಳಿದಿರಬೇಕು. ಇಲ್ಲಿದೆ ಕೆಲವು ಕಾರಣಗಳು ಮತ್ತು ಪರಿಹಾರಗಳು.
ರೌಟರ್ ಪೊಸಿಷನಿಂಗ್: ಎತ್ತರ ವರ್ಸಸ್ ಕೆಳಗೆ
ಬಹುತೇಕ ಮಂದಿ ವೈಫೈ ರೌಟರ್ ಇಡಲು ಸರಿಯಾದ ಸ್ಥಳ ಕಂಡುಕೊಳ್ಳಲು ಕಷ್ಟಪಡುತ್ತಾರೆ. ಪೊಸಿಷನ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ವೈಫೈ ನೆಟ್ವರ್ಕ್ ಸಮಸ್ಯೆ ಕೊಡುತ್ತದೆ. ಸಾಮಾನ್ಯವಾಗಿ ರೌಟರ್ ತಂದ ಕೂಡಲೇ ಅದನ್ನು ಪ್ಯಾಕ್‌ನಿಂದ ಹೊರಗೆ ತೆಗೆಯದೆ ಪ್ಲಗ್ ಬಳಿ ಇರುವ ಮೇಜು, ಕಪಾಟಿನಲ್ಲಿಡುತ್ತಾರೆ. ಆದರೆ ರೌಟರ್ ಎಷ್ಟು ಎತ್ತರದಲ್ಲಿದೆ ಎನ್ನುವುದೂ ಮುಖ್ಯವಾಗುತ್ತಿದೆ. ನೆಲದ ಮೇಲೆ ಅಥವಾ ಇತರ ವಸ್ತುಗಳ ಹಿಂದೆ ರೌಟರ್ ಇದ್ದಲ್ಲಿ ಸರಿಯಾದ ತರಂಗಗಳು ಸಿಗದು.
ರೌಟರ್ ಪೊಸಿಷನಿಂಗ್: ಕಾಂಕ್ರಿಟ್ ಮತ್ತು ಲೋಹಗಳು
ಕಾಂಕ್ರಿಟ್ ಮತ್ತು ಲೋಹಗಳು ವೈಫೈ ತರಂಗಗಳನ್ನು ಬ್ಲಾಕ್ ಮಾಡುತ್ತವೆ. ಇವಲ್ಲದೆ ತಾಂತ್ರಿಕ ಡಿವೈಸ್‌ಗಳೂ ರೌಟರನ್ನು ಬ್ಲಾಕ್ ಮಾಡದಂತೆ ಗಮನಹರಿಸಿ. ಅಲ್ಲದೆ ರೌಟರನ್ನು ಬೇಸ್ಮೆಂಟ್ ಜಾಗದಲ್ಲಿ ಇಡಬೇಡಿ. ಅಲ್ಲಿಂದ ತರಂಗಗಳು ಬರುವುದೇ ಇಲ್ಲ.
ರೌಟರ್ ಪೊಸಿಷನಿಂಗ್: ರೌಟರ್‌ನ ಅಂತರ
ರೌಟರ್‌ನಿಂದ ನೀವು ದೂರ ಹೋದಷ್ಟು ವೈಫೈ ಸಿಗ್ನಲ್ ಕಡಿಮೆಯಾಗುತ್ತದೆ. ಹೀಗಾಗಿ ರೌಟರ್ ಬಳಿಯೇ ಕೆಲಸ ಮಾಡುವುದು ಉತ್ತಮ. ನಿಮ್ಮ ಡಿವೈಸ್ ಬಳಸಲು ಒಂದು ಮುಖ್ಯ ಏರಿಯಾ ಇರುವಂತೆ ನೋಡಿಕೊಳ್ಳಿ. ಇಲ್ಲದೆ ಇದ್ದರೆ ಮನೆಗೆ ನಡು ಭಾಗದಲ್ಲಿ ರೌಟರ್ ಇಡಿ. ಅದರ 360 ಡಿಗ್ರಿಗೆ ನೆಟ್ವರ್ಕ್ ಸಿಗಲಿದೆ. ನಿಮ್ಮ ಮನೆ ದೊಡ್ಡದಾಗಿದ್ದು ರೌಟರ್ ಸಾಮರ್ಥ್ಯ ಕಡಿಮೆ ಇದ್ದರೂ ರೇಂಜ್ ಸಿಗದು.
ವೈರ್ಲೆಸ್ ತಡೆಗಳು ಮತ್ತು ಶಬ್ದ
ನಿಮ್ಮ ಸುತ್ತಮುತ್ತಲು ಸಾಕಷ್ಟು ವೈರ್ಲೆಸ್ ಸಿಗ್ನಲುಗಳು ಇರುತ್ತವೆ. ನೀವು ಗಮನಿಸದೆ ಇರಬಹುದು. ಇಲೆಕ್ಟ್ರಾನಿಕ್ ಡಿವೈಸ್, ಇತರ ವೈಫೈ ರೌಟರ್, ಸ್ಯಾಟ್ಲೈಟ್, ಸೆಲ್ ಟವರ್ ಹೀಗೆ. ವೈಫೈ ಇವೆಲ್ಲಕ್ಕಿಂತ ಭಿನ್ನ ಫ್ರೀಕ್ವೆನ್ಸಿಯಲ್ಲಿ ಇರುತ್ತದೆ. ಹಾಗಿದ್ದರೂ ಕೆಲವೊಮ್ಮೆ ರೇಡಿಯೋ ಶಬ್ದ ತಡೆಯೊಡ್ಡಬಹುದು.
ಮೈಕ್ರೋವೇವ್‌ಗಳ ತಡೆ
ಮೈಕ್ರೋವೇವ್ ಓವನ್‌ಗಳೂ ವೈಫೈ ಜಾಲಕ್ಕೆ ಅಡ್ಡಿಯಾಗಬಹುದು. ಮೈಕ್ರೋವೇವ್ ಫ್ರೀಕ್ವೆನ್ಸಿ 2.45 ಗಿಗಾಹರ್ಟ್ಸ್ ಆಗಿದ್ದರೆ ಅದಕ್ಕೆ ಸಮೀಪವಾದ 2.4 ಗಿಗಾಹರ್ಟ್ಸ್‌ಅಲ್ಲಿ ವೈಫೈ ಬ್ಯಾಂಡ್ ಕೆಲಸ ಮಾಡುತ್ತದೆ.
ವೈರ್ಲೆಸ್ ತಡೆ: ಬ್ಲೂಟೂತ್ ಡಿವೈಸ್
ಬ್ಲೂಟೂತ್ ಕೂಡ ವೈರ್ಲೆಸ್ ಕನೆಕ್ಷನ್. ಅದು 2.4 ಗಿಗಾಹರ್ಟ್ಸ್‌ಲ್ಲಿ ಕೆಲಸ ಮಾಡುತ್ತದೆ. ತಡೆಯೊಡ್ಡದಂತೆ ಇದನ್ನು ನಿವಾರಿಸಬೇಕು.
ವೈರ್ಲೆಸ್ ತಡೆ: ಕ್ರಿಸ್ಮಸ್ ಬೆಳಕು
ಕುತೂಹಲಕರವೆಂಬಂತೆ ಕ್ರಿಸ್ಮಸ್ ಬೆಳಕು ಕೂಡ ವೈಫೈಗೆ ತಡೆಯೊಡ್ಡಬಹುದು. ಅದರಲ್ಲಿರುವ ಇಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ವೈಫೈ ಬ್ಯಾಂಡನ್ನು ತಡೆಯುತ್ತದೆ. ಕೆಲವೊಮ್ಮೆ ಎಲ್‌ಇಡಿ ಬೆಳಕು ಕೂಡ ಇದೇ ಕಾರಣದಿಂದ ಅಡ್ಡಿಪಡಿಸಬಹುದು. ಇಲೆಕ್ಟ್ರೋಮ್ಯಾಗ್ನಟಿಕ್ ಹೊರಸೂಸುವ ಎಲ್ಲಾ ರೀತಿಯ ಬೆಳಕೂ ವೈಫೈಗೆ ಅಡ್ಡಿಮಾಡಬಹುದು.
ಚಾನಲ್ ತಡೆ
ಪ್ರತೀ ಮನೆಯೂ ವೈಫೈ ಹೊಂದಿರುವಾಗ ಅಕ್ಕಪಕ್ಕದ ಮನೆಯ ಚಾನಲ್ ಓವರ್‌ಲ್ಯಾಪ್ ಆಗಬಹುದು. ಇದು ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್ ಮತ್ತು ಹೌಸಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಸಮಸ್ಯೆಯೇ ಸರಿ.
ಕೃಪೆ: timesofindia.indiatimes.com