ಪಾಕಿಸ್ತಾನದ ಬಗ್ಗೆ ಸದಾ ಎಚ್ಚರದಿಂದಿರಬೇಕಾಗಿದೆ

Update: 2016-06-27 18:39 GMT

ಹೊಸದಿಲ್ಲಿ, ಜೂ.27: ಭಾರತವು ಎದುರಿಸುತ್ತಿರುವ ಭಯೋತ್ಪಾದನೆಯ ಏಟು ಪಾಕಿಸ್ತಾನದಿಂದ ಹೊರಡುತ್ತಿದೆಯೆಂಬುದನ್ನು ಪ್ರಪಂಚವೀಗ ಒಪ್ಪಿಕೊಳ್ಳುತ್ತಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘‘ಪಾಕಿಸ್ತಾನದ ವಿಚಾರದಲ್ಲಿ ನೀವು ‘ಲಕ್ಷ್ಮಣರೇಖೆಯನ್ನು’ ಯಾರೊಡನೆ ನಿರ್ಧರಿಸುತ್ತೀರಿ? ಚುನಾಯಿತ ಸರಕಾರದೊಡನೆಯೇ ಅಥವಾ ಇತರ ಪಾತ್ರಧಾರಿಗಳೊಂದಿಗೆಯೇ? ಎಂದು ‘ಟೈಂಸ್ ನೌ’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಪ್ರಶ್ನಿಸಿದ್ದಾರೆ.
ಭಾರತವು ಪಾಕಿಸ್ತಾನದ ಕುರಿತು ಸದಾ ಎಚ್ಚರದಿಂದಿರಬೇಕೆಂದು ಮೋದಿ ತಿಳಿಸಿದ್ದಾರೆ.


ಲಾಹೋರಿಗೆ ಹೋದುದು, ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರನ್ನು ಭಾರತಕ್ಕೆ ಆಹ್ವಾನಿಸಿದುದು ಇತ್ಯಾದಿ ತನ್ನ ಪ್ರಯತ್ನದ ಫಲಿತಾಂಶವನ್ನು, ಭಾರತದ ಪಾತ್ರವೇನೆಂಬುದನ್ನು ತಾನು ಪ್ರಪಂಚಕ್ಕೆ ಇನ್ನಷ್ಟು ವಿವರಿಸುವುದಕ್ಕೇನಿಲ್ಲ. ಭಾರತದ ಪಾತ್ರವನ್ನು ವಿಶ್ವವೇ ಒಕ್ಕೊರಲಿನಿಂದ ಶ್ಲಾಘಿಸುತ್ತಿದೆ. ಅದಕ್ಕೆ ಉತ್ತರಿಸುವುದಕ್ಕೆ ಪಾಕಿಸ್ತಾನಕ್ಕೆ ಕಷ್ಟವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆಂದು ಅವರು ಹೇಳಿದ್ದಾರೆ.
ಅತಿ ದೀರ್ಘ ಕಾಲ ಪ್ರಪಂಚವು ಭಯೋ ತ್ಪಾದನೆಯನ್ನು ಒಂದು ಸಮಸ್ಯೆ ಎಂದು ಗುರುತಿಸಿರಲಿಲ್ಲ. ಉದಾಹರಣೆಗೆ ಅದು ಬಹಳ ಕಾಲ ಭಾರತದ ಭಯೋತ್ಪಾದನಾ ಸಿದ್ಧಾಂತವನ್ನು ಒಪ್ಪಿರಲಿಲ್ಲ. ಅದು ನಮ್ಮ ಕಾನೂನು-ಸುವ್ಯವಸ್ಥೆ ಸಮಸ್ಯೆಯೆಂದು ಅದು ಹೇಳುತ್ತಿತ್ತು. ಇಂದು ವಿಶ್ವವು ಭಾರತವು ಭಯೋತ್ಪಾದನೆ ಬಗ್ಗೆ ಏನು ಹೇಳಿತ್ತೋ ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಭಯೋತ್ಪಾದನೆಯ ಕಾರಣ ಭಾರತ ಅನುಭವಿಸಿರುವ ನಷ್ಟವನ್ನು ಪ್ರಪಂಚವೀಗ ಅಂಗೀಕರಿಸುತ್ತಿದೆ. ನಾವದನ್ನು ಇಲ್ಲಿಂದ ಮುಂದಕ್ಕೊಯ್ಯಬೇಕೆಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News