ಕೇರಳದಲ್ಲಿ 10 ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳ 16ಲಕ್ಷ, ವಾಹನ ಹೆಚ್ಚಳ 44 ಲಕ್ಷ!

Update: 2016-06-30 09:32 GMT

   ತಿರುವನಂತಪುರಂ,ಜೂನ್ 30: ಹತ್ತುವರ್ಷಗಳಲ್ಲಿ ಕೇರಳದಲ್ಲಿಜನಸಂಖ್ಯೆ ಬರೇ ಹದಿನಾರುಲಕ್ಷ ಹೆಚ್ಚಳವಾಗಿದ್ದರೆ ಈ ಅವಧಿಯಲ್ಲಿ 44 ಲಕ್ಷ ವಾಹನಗಳು ಹೆಚ್ಚಳವಾಗಿದೆ. 2001ರಿಂದ 2011ರವರೆಗಿನ ಸಮೀಕ್ಷೆಯಾಗಿದ್ದು ಸಂಚಾರ ನಿಯಂತ್ರಣಕ್ಕೆ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರುಬಂದಿದ್ದ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜಸ್ಟಿಸ್ ಜೆ.ಬಿ.ಕೋಶಿ ಪೊಲೀಸ್ ಇಲಾಖೆಯಿಂದ ವರದಿ ಕೇಳಿದ್ದರು.ಪೊಲೀಸ್ ಉನ್ನತಾಧಿಕಾರಿ ಸಲ್ಲಿಸಿದ ವರದಿ ಇದಾಗಿದ್ದು ವಾಹನ ಸಂಚಾರ ನಿಯಂತ್ರಣಕ್ಕೆ ಬೇಕಾಗುವಷ್ಟು ನಮ್ಮಲ್ಲಿ ಪೊಲೀಸರು ನಮ್ಮಲಿಲ್ಲ ಎಂದು ಆಯೋಗಕ್ಕೆ ಈ ಪೊಲೀಸಾಧಿಕಾರಿ ತಿಳಿಸಿದ್ದಾರೆ.

    ವಾಹನ ಸಂಚಾರವನ್ನುನಿಯಂತ್ರಿಸಲು ಪೊಲೀಸರ ಸಂಖ್ಯೆ ಹೆಚ್ಚಿಸಬೇಕೆಂದು ಸರಕಾರದೊಂದಿಗೆ ಹಲವು ಬಾರಿ ವಿನಂತಿಸಿದರೂ ಅದು ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿ ಅಯೋಗಕ್ಕೆ ವಿವರಿಸಿದ್ದಾರೆ. 1990ರಲ್ಲಿ ಕೇರಳದಲ್ಲಿ ಆರುಲಕ್ಷ ವಾಹನಗಳು ಮಾತ್ರ ಇದ್ದವು. 2015ರಲ್ಲಿ ಇದು ಒಂದು ಕೋಟಿಗೂ ಮಿಕ್ಕಿದೆ. ಇದರಲ್ಲಿ ಶೇ.65ರಷ್ಟು ದ್ವಿಚಕ್ರವಾಹನಗಳಾಗಿವೆ. ದೇಶದಲ್ಲಿ ಒಂದು ಚದರ ಕಿಲೊ ಮೀಟರ್‌ಗೆ 48 ವಾಹನಗಳಿದ್ದರೆ, ಕೇರಳದಲ್ಲಿ 248ವಾಹನಗಳಿವೆ ಎಂದೂವರದಿಯಲ್ಲಿ ತಿಳಿಸಲಾಗಿದೆ. 2006ರಿಂದ ಕೇರಳದಲ್ಲಿ ವಾಹನ ಅಪಘಾತಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ ಹಾಗೂ ಹೊಸ ರಸ್ತೆ ಸುರಕ್ಷಾ ಮಸೂದೆ ಕಾನೂನಾಗಿ ಪರಿವರ್ತನೆಯಾಗುವಾಗ ಅತಿವೇಗದ ಚಾಲನೆ.ಸ್ಪರ್ಧಾತ್ಮಕ ಚಾಲನೆ. ನಿರ್ಲಕ್ಷ್ಯಚಾಲನೆ ಮುಂತಾದುವುಗಳನ್ನು ನಿಲ್ಲಿಸಲು ಸಾಧ್ಯವಿದೆ ಎಂದು ಪೊಲೀಸ್ ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News