ಲಕ್ಸುರಿ ವಾಚ್ ಖರೀದಿಗೆ ಮುನ್ನ…

Update: 2016-07-04 18:36 GMT

ದುಬಾರಿ ವಾಚನ್ನು ಖರೀದಿಸುವುದು ಸುಲಭವಲ್ಲ. ಬಹಳ ಜಾಗರೂಕತೆಯಿಂದ ಆರಿಸದಿದ್ದರೆ ನಷ್ಟವಾದೀತು. ಏಕೆಂದರೆ ಭಾರತೀಯ ದುಬಾರಿ ವಾಚ್ ಮಾರುಕಟ್ಟೆಯಲ್ಲಿ ಕಳ್ಳಸಾಗಣಿಕೆಯಿಂದ ಬಂದ ನಕಲಿ ಮತ್ತು ಹೊಸ ರೂಪ ಪಡೆದ ಹಳೇ ವಾಚುಗಳೇ ಸುತ್ತಾಡುತ್ತಿವೆ. ಗ್ರಾಹಕರು ಹೆಚ್ಚು ಗಮನ ಕೊಡದಿರುವುದು ಮತ್ತು ದರಕಡಿತದ ಮಾರಾಟಕ್ಕೆ ಬಲಿ ಬೀಳುವ ಗ್ರಾಹಕರೂ ಇದಕ್ಕೆ ಕಾರಣವಾಗುತ್ತಿದ್ದಾರೆ. ಗ್ರಾಹಕರಿಗೆ ತಾವು ಮೋಸ ಹೋಗಿರುವುದು ತಿಳಿದಿರುವುದೇ ಇಲ್ಲ. ಮುಂದಿನ ಬಾರಿ ನಿಮ್ಮ ಕನಸಿನ ವಾಚನ್ನು ಖರೀದಿಸುವ ಮೊದಲು ಈ ಐದು ಸಲಹೆಗಳತ್ತ ಗಮನಹರಿಸಿ.

ಸಲಹೆ 1: ಉತ್ತಮ ವ್ಯಾಪಾರಿಯಿಂದ ವಾಚು ಖರೀದಿಸಿ

 ಅಧಿಕೃತ ಡೀಲರಿನಿಂದ ವಾಚು ಖರೀದಿಸಬೇಕೆನ್ನುವುದು ನಿಜ. ಆದರೆ ಇಂತಹ ಅಧಿಕೃತ ಮಳಿಗೆಗಳಲ್ಲೂ ನಕಲಿ ವಾಚುಗಳು ಇರುವುದು ಕಂಡಿದೆ. ವಿದೇಶ ಪ್ರಯಾಣದ ಸಂದರ್ಭ ನಕಲಿ ವಾಚುಗಳು ಸಮಸ್ಯೆ ಸೃಷ್ಟಿಸುತ್ತವೆ. ನಿಮ್ಮ ಬಳಿ ವಾಚಿಗೆ ಸಂಬಂಧಿಸಿದ ದಾಖಲೆ ಪತ್ರಗಳಿಲ್ಲದಿದ್ದಾಗ ಸುಂಕದ ಅಧಿಕಾರಿಗಳ ಬಳಿ ಸಿಕ್ಕಿಬೀಳುತ್ತೀರಿ. ಎಲ್ಲಾ ನಿಯಮಗಳನ್ನು ಪಾಲಿಸಿ ಪ್ಯಾನ್ ನಂಬರನ್ನು ಗುರುತಿಸಿ ರಶೀದಿ ಕೊಡುವ ವ್ಯಾಪಾರಿ ಬಳಿಯೇ ಖರೀದಿಸಿ.

ಸಲಹೆ 2: ನಿಮ್ಮ ಜ್ಞಾನ ಪರೀಕ್ಷಿಸಿ

ವಾಚನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕಾದರೆ ಅದರ ಬಗ್ಗೆ ಸ್ವಲ್ಪ ವಿವರವನ್ನು ಕಲೆ ಹಾಕಿ ವ್ಯಾಪಾರಿ ಬಳಿ ಹೋಗಿ. ಮಾರಾಟ ಮಾಡುವವರಿಗೇ ಎಷ್ಟು ಕಡಿಮೆ ಜ್ಞಾನ ಇರುತ್ತದೆ ಎನ್ನುವುದು ತಿಳಿಯುತ್ತದೆ. ವಾಚ್ ಮೂಲ ಮತ್ತು ಚಲನೆ ವಿವರ ಮತ್ತು ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ನಿಮ್ಮ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಆತ್ಮವಿಶ್ವಾಸದ ಉತ್ತರವಿಲ್ಲದಿದ್ದರೆ ತಜ್ಞರ ಅಭಿಪ್ರಾಯಪಡೆದೇ ಖರೀದಿಸಿ.

ಸಲಹೆ 3: ಸಂಬಂಧಿತ ಸೇವೇ ಕೇಂದ್ರಗಳು

ಗ್ರಾಹಕರ ಬಗ್ಗೆ ಮಾರಾಟಗಾರನಿಗೆ ಬದ್ಧತೆ ಇದೆಯೇ ಎನ್ನುವುದನ್ನು ಇದರಿಂದ ತಿಳಿಯಬಹುದು. ಕೆಲವು ವ್ಯಾಪಾರಿಗಳ ಬಳಿ ಮಾತ್ರ ಸೇವಾ ಕೇಂದ್ರಗಳಿರುತ್ತವೆ. ನುರಿತ ತಂತ್ರಜ್ಞರು ದುಬಾರಿ ಬ್ರಾಂಡುಗಳಿಗೆ ಅಗತ್ಯ. ಇಂತಹ ವ್ಯವಸ್ಥೆ ಇಲ್ಲದಾಗ ನಂತರ ಸಮಸ್ಯೆಯಾಗುತ್ತದೆ. ವಾಚು ಖರೀದಿಗೆ ಮುನ್ನ ಕೇಳಿಕೊಳ್ಳಿ.

ಸಲಹೆ 4: ದರ ಕಡಿತ

ದರಕಡಿತ ಯಾರಿಗೆ ಬೇಡ. ಆದರೆ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ದುಬಾರಿ ವಾಚುಗಳು ನಿರ್ದಿಷ್ಟ ಮಟ್ಟಕ್ಕೆ ಮಾತ್ರ ದರಕಡಿತ ಮಾಡುತ್ತದೆ. ಆದರೆ ನಿಮಗೆ ಅತೀ ದರಕಡಿತ ಸಿಕ್ಕಲ್ಲಿ ವ್ಯಾಪಾರಿಗೆ ಲಾಭವಾಗಲಿದೆ. ದರಕಡಿತ ಅತಿಯಾಗಿ ಸಿಕ್ಕಲ್ಲಿ ಅದು ಹಳೇ ವಾಚಿನ ಹೊಸರೂಪವಾಗಿರುತ್ತದೆ. ನಿಮಗೆ ವ್ಯತ್ಯಾಸವೇ ಕಾಣುವುದಿಲ್ಲ. ದುಬಾರಿ ವಾಚನ್ನು ಕಡಿಮೆ ದರದಲ್ಲಿ ಕೊಂಡು ಖುಷಿಯಾಗುತ್ತೀರಿ.

ಸಲಹೆ 5: ವಿಮೆ ಮತ್ತು ಮೌಲ್ಯಾಧರಿತ ಸೇವೆ

ದುಬಾರಿ ವಾಚಿಗೆ ದುಡ್ಡು ಹಾಕಿದ ಮೇಲೆ ಹಿಂತಿರುಗಿ ನೋಡಬಾರದು. ಕಳ್ಳತನವಾದಲ್ಲಿ ಹಾನಿಯಾದಲ್ಲಿ ವಿಮೆ ಕೊಡುವ ವ್ಯಾಪಾರಿಯ ಬಳಿಯೇ ಖರೀದಿಸಿ. ಅದರಿಂದ ವರ್ಷಗಳವರೆಗೆ ನಿಮ್ಮ ವಾಚು ಸುರಕ್ಷಿತವಾಗಿರುತ್ತದೆ. ಮೌಲ್ಯಾಧರಿತ ಸೇವೆಗಳು ಸಿಕ್ಕರೆ ವಾಚನ್ನು ನಂಬಿಕಾರ್ಹ ವ್ಯಾಪಾರಿಯಿಂದ ಖರೀದಿಸಿದ್ದು ಖಚಿತಗೊಳ್ಳುತ್ತದೆ. ಎಲ್ಲರೂ ಅದನ್ನು ಕೊಡಲು ಸಾಧ್ಯವಿಲ್ಲ.ಹೊಸ ವಾಚನ್ನು ಸುಮ್ಮನೆ ಖರೀದಿಸಬೇಡಿ. ಸಾಕಷ್ಟು ಮಾಹಿತಿ ಪಡೆದು ನಂತರ ಅದರಲ್ಲಿ ಹಣ ಹೂಡಿ. ದರಕಡಿತಕ್ಕೆ ಮಾರುಹೋಗಬೇಡಿ. ಇದಕ್ಕಾಗಿ ಸ್ವಲ್ಪ ಸಮಯ ಮತ್ತು ಪ್ರಯತ್ನವನ್ನು ಹಾಕಿದರೆ ಮೌಲ್ಯಯುತ ವಸ್ತು ಕೈಗೆ ಬರಲಿದೆ ಎನ್ನುತ್ತಾರೆ ವಾಚ್ ಬೊಟಿಕ್ಸ್ ಸಿಇಒ ಇಥೋಸ್ ಯಶೋವರ್ಧನ್ ಸಾಬೂ.

ಕೃಪೆ: www.hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News